ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಜಲಪಾತದಲ್ಲಿ ಜಾರಿ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಾಮನಹಳ್ಳಿ ಫಾಲ್ಸ್ ನಲ್ಲಿ ಈ ಒಂದು ದುರ್ಘಟನೆ ನಡೆದಿದೆ. ಬೆಳಗಾವಿ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ವರುಣ್ (17) ಸಾವನ್ನಪ್ಪಿದ್ದಾನೆ.
ಐವರು ಸ್ನೇಹಿತರ ಜೊತೆಗೆ ಕಾಮನಹಳ್ಳಿ ಫಾಲ್ಸ್ ಗೆ ವರುಣ್ ತೆರಳಿದ್ದ. ಜಲಪಾತದ ಬಂಡೆಯ ಮೇಲಿಂದ ಕಾಲು ಜಾರಿಬಿದ್ದು ವರುಣ್ ನೀರು ಪಾಲಾಗಿದ್ದಾನೆ. ಮೃತ ವರುಣ್ ಚಿಕ್ಕಮಗಳೂರಿನ ಎಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದ. ಘಟನೆ ಕುರಿತಂತೆ ಚಿಕ್ಕಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ವರುಣ್ ಮೃತ ದೇಹಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಫಾಲ್ಸ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.








