ನವದೆಹಲಿ : ದೆಹಲಿಯಲ್ಲಿ ಕೆಂಪು ಕೋಟೆಯ ಬಳಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಸ್ಫೋಟಕ ತಿರುವ ಸಿಕ್ಕಿದ್ದು, ದೆಹಲಿ ಸ್ಫೋಟಕ್ಕೆ ಬಳಕೆ ಮಾಡಿದ್ದು ಎರಡು ಕಾರು ಅಲ್ಲ ಮೂರು ಕಾರು ಎಂದು ತನಿಖೆಯಲ್ಲಿ ಬಯಲಾಗಿದೆ.
ಹೌದು ದೆಹಲಿ ಸ್ಫೋಟಕ್ಕೆ ಬಳಕೆ ಮಾಡಿದ್ದು ಮೂರು ಕಾರು ಎಂದು ತನಿಖೆಯಲ್ಲಿ ಬಯಲಾಗಿದೆ. ಕುಮಾರ್ ಗೆ ಸಂಬಂಧಿಸಿದ ಮೂರು ಕಾರುಗಳ ಜಾಲ ಈಗ ಬೆಳಕಿಗೆ ಬಂದಿದ್ದು, ಇಕೋ ಸ್ಪೋರ್ಟ್ಸ್ ಕಾರು ಸಿಕ್ಕ ಬಳಿಕ ಮತ್ತೊಂದು ಕಾರಿಗೆ ಶೋಧ ಕಾರ್ಯ ಮುಂದುವರಿದಿದೆ. ಸದ್ಯ ಇಕೋ ಸ್ಪೋರ್ಟ್ಸ್ ಕಾರು ಫರಿದಾದಾಬಾದ್ ನಲ್ಲಿ ಸಿಕ್ಕಿದ್ದು ಬಿಳಿ ಬಣ್ಣದ ಬ್ರಿಜಾ ಕಾರಿಗಾಗಿ ಪೊಲೀಸರು ನಿರಂತರ ಶೋಧ ನಡೆಸುತ್ತಿದ್ದಾರೆ. ಉಗ್ರ ಚಟುವಟಿಕೆಗೆ ಬಳಸಿರುವ ಹಿನ್ನೆಲೆ ಬಿಳಿ ಕಾರಿಗೆ ತೀವ್ರ ಶೋಧ ನಡೆಸುತ್ತಿದ್ದಾರೆ.








