Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ತುಮಕೂರಲ್ಲಿ ಚಲಿಸುತ್ತಿದ್ದ ‘KSRTC’ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರಿ ಅನಾಹುತ!

16/04/2026 3:23 PM

BREAKING: ಮಹಿಳಾ ಮೀಸಲಾತಿ ಮಸೂದೆ ಭಾರತಕ್ಕೆ ಹೊಸ ದಿಕ್ಕು ನೀಡಲಿದೆ: ಪ್ರಧಾನಿ ಮೋದಿ

16/04/2026 3:17 PM

BREAKING: ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ: ಸುಟ್ಟು ಕರಕಲಾದ ಹೋಟೆಲ್

16/04/2026 3:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ತಮ್ಮ ಜಮೀನು ನೀಡಲು ’25 ತಳಕಳಲೆ ಗ್ರಾಮಸ್ಥರು’ ಒಪ್ಪಿಗೆ, ಶಾಸಕರಿಗೆ ಪತ್ರ
KARNATAKA

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ತಮ್ಮ ಜಮೀನು ನೀಡಲು ’25 ತಳಕಳಲೆ ಗ್ರಾಮಸ್ಥರು’ ಒಪ್ಪಿಗೆ, ಶಾಸಕರಿಗೆ ಪತ್ರ

By kannadanewsnow0928/12/2025 4:26 PM

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕ, ಮಾಡಬಾರದು ಎಂಬುದು ಪರಿಸರ ವಾದಿಗಳು, ರೈತರ ಒತ್ತಾಯವಾಗಿದೆ. ಇದರ ನಡುವೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಮ್ಮ ಜಮೀನು ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರಿಗೆ 25 ತಲಕಳಲೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ.

ಈ ಕುರಿತಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ತಳಕಳಲೆ ಗ್ರಾಮಸ್ಥರು ಪತ್ರ ಬರೆದಿದ್ದು, ಅದರಲ್ಲಿ ನಾವು ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ತಳಕಳಲೆ ಗ್ರಾಮದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವ್ಯಾಪ್ತಿಯಲ್ಲಿ ಕೃಷಿ ಜಮೀನು ಹೊಂದಿದ್ದೇವೆ. ಸರ್ಕಾರದಿಂದ ಮಂಜೂರಾತಿ ಪಡೆದು ಕಂದಾಯ ಜಮೀನು ಹೊಂದಿರುತ್ತೇವೆ. ಸರ್ಕಾರದ ಮಹತ್ತರವಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಸುಗಮವಾಗಿ ಕಾರ್ಯಗತವಾಗಲು ಅನುಕೂಲವಾಗುವಂತೆ ನಾವುಗಳು ನಮ್ಮ ಕೃಷಿ ಜಮೀನನ್ನು ಸರ್ಕಾರಕ್ಕೆ ಷರತ್ತುಬದ್ಧವಾಗಿ ನೀಡಲು ಚಿಂತನೆ ಮಾಡಿರುತ್ತೇವೆ ಎಂದಿದ್ದಾರೆ.

ನಾವು ಸುಮಾರು 25 ಕೃಷಿ ಕುಟುಂಬದವರು ಹೊಂದಿರುವ ಕೃಷಿ ಜಮೀನನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸುರಂಗ ಮಾರ್ಗದಲ್ಲಿ ಹೊರತೆರೆಯುವ ಸುಮಾರು 18 ಸಾವಿರ ಟನ್ ಕಚ್ಚಾ ವಸ್ತುಗಳನ್ನು ಸಂಗ್ರಹದ ಡಂಪ್ ಯಾರ್ಡ್, ಸ್ಕ್ರಕ್ಟರ್ ನಿರ್ಮಾಣ, ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ಪೂರಕವಾಗುವಂತೆ ಬಳಸಿಕೊಳ್ಳಲು ನಮ್ಮ ಜಮೀನಿನ ಪ್ರದೇಶ ಅತ್ಯಂತ ಉಪಯುಕ್ತವಾಗಿರುತ್ತದೆ ಎಂದಿದ್ದಾರೆ.

ಒಮ್ಮೆ ನಮ್ಮಗಳ ಜಮೀನು ಯೋಜನೆಗೆ ಪೂರಕವಾಗಿ ಅಗತ್ಯವಿದ್ದಲ್ಲಿ ನಾವುಗಳು ಸಂತ್ರಸ್ತ ಕುಟುಂಬದವರು ಪಡೆಯುವ ಮಾದರಿಯ ಪರಿಹಾರ ಮತ್ತು ಉದ್ಯೋಗಾವಕಾಶಗಳನ್ನು ಪಡೆದು ನಮ್ಮ ಜಮೀನುಗಳನ್ನು ಯೋಜನೆಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂದು 25 ಕುಟುಂಬಸ್ಥರು ಸಹಿ ಮಾಡಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

ತಳಕಳಲೆ ಗ್ರಾಮಸ್ಥರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಗೆ ತಮ್ಮ ಜಮೀನು ಬಿಟ್ಟುಕೊಡಲು ಒಪ್ಪಿ ತಮಗೆ ನೀಡಿರುವಂತ ಪತ್ರವನ್ನು, ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸೂಕ್ತ ಪರಿಹಾರದೊಂದಿಗೆ ಕ್ರಮ ವಹಿಸೋದಕ್ಕೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಮೂಲಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ 25 ರೈತ ಕುಟುಂಬಗಳು ತಮ್ಮ ಜಮೀನು ಬಿಟ್ಟುಕೊಡೋದಕ್ಕೆ ಮುಂದಾಗಿರೋದು ಖಚಿತಗೊಂಡಿದೆ.

ವರದಿ: ವಸಂತ ಬಿ ಈಶ್ವರಗೆರೆ…, ಸಂಪಾದಕರು…

ಸಾಗರದಲ್ಲಿ ‘ನಕಲಿ ಕಾರ್ಮಿಕರ ಕಾರ್ಡ್’ ಮಾಡುತ್ತಿರೋರಿಗೆ ಈ ಎಚ್ಚರಿಕೆ ಕೊಟ್ಟ ‘ಶಾಸಕ ಗೋಪಾಲಕೃಷ್ಣ ಬೇಳೂರು’

Share. Facebook Twitter LinkedIn WhatsApp Email

Related Posts

BREAKING : ತುಮಕೂರಲ್ಲಿ ಚಲಿಸುತ್ತಿದ್ದ ‘KSRTC’ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರಿ ಅನಾಹುತ!

16/04/2026 3:23 PM1 Min Read

BREAKING: ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ: ಸುಟ್ಟು ಕರಕಲಾದ ಹೋಟೆಲ್

16/04/2026 3:05 PM1 Min Read

ಯೋಗೇಶ್ ಗೌಡ ಹತ್ಯೆ ಪ್ರಕರಣ: ನಾಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ!

16/04/2026 2:37 PM1 Min Read
Recent News

BREAKING : ತುಮಕೂರಲ್ಲಿ ಚಲಿಸುತ್ತಿದ್ದ ‘KSRTC’ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರಿ ಅನಾಹುತ!

16/04/2026 3:23 PM

BREAKING: ಮಹಿಳಾ ಮೀಸಲಾತಿ ಮಸೂದೆ ಭಾರತಕ್ಕೆ ಹೊಸ ದಿಕ್ಕು ನೀಡಲಿದೆ: ಪ್ರಧಾನಿ ಮೋದಿ

16/04/2026 3:17 PM

BREAKING: ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ: ಸುಟ್ಟು ಕರಕಲಾದ ಹೋಟೆಲ್

16/04/2026 3:05 PM

ಪಶ್ಚಿಮ ಬಂಗಾಳ ಚುನಾವಣೆ: ಅಧಿಕಾರಿಗಳ ವರ್ಗಾವಣೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

16/04/2026 2:59 PM
State News
KARNATAKA

BREAKING : ತುಮಕೂರಲ್ಲಿ ಚಲಿಸುತ್ತಿದ್ದ ‘KSRTC’ ಬಸ್​ನಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಭಾರಿ ಅನಾಹುತ!

By kannadanewsnow0516/04/2026 3:23 PM KARNATAKA 1 Min Read

ತುಮಕೂರು : ಚಲಿಸುತ್ತಿದ್ದ ಕೆಎಸ್ಆರ್​ಟಿಸಿ ಬಸ್​ನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಬಳಿ…

BREAKING: ಬೆಂಗಳೂರಲ್ಲಿ ಭಾರೀ ಅಗ್ನಿ ಅವಘಡ: ಸುಟ್ಟು ಕರಕಲಾದ ಹೋಟೆಲ್

16/04/2026 3:05 PM

ಯೋಗೇಶ್ ಗೌಡ ಹತ್ಯೆ ಪ್ರಕರಣ: ನಾಳೆ ಮಾಜಿ ಸಚಿವ ವಿನಯ್ ಕುಲಕರ್ಣಿ ಭವಿಷ್ಯ ನಿರ್ಧಾರ!

16/04/2026 2:37 PM

BREAKING : ಯೋಗೀಶ್ ಗೌಡ ಕೊಲೆ ಪ್ರಕರಣ : ಶಾಸಕ ವಿನಯ್ ಕುಲಕರ್ಣಿ ಸೇರಿ ಎಲ್ಲಾ ಅಪರಾಧಿಗಳಿಗೆ ನಾಳೆ ಶಿಕ್ಷೆ ಪ್ರಮಾಣ ಪ್ರಕಟ

16/04/2026 1:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.