ಬೆಂಗಳೂರು : ಕಬ್ಬು ಬೆಳೆಗಾರರಿಗೆ ದರ ಹೆಚ್ಚಿಸುವಂತೆ ಈಗಾಗಲೇ ಬೆಳಗಾವಿ ಜಿಲ್ಲೆಯಾದ್ಯಂತ ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ಈ ವಿಚಾರವಾಗಿ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಜೆಡಿಎಸ್ ಅಧಿಕಾರದಲ್ಲಿದ್ದಾಗ ಏನು ದರ ನಿಗದಿ ಮಾಡಿದ್ದರೋ ಅದಕ್ಕಿಂತಲೂ ಹೆಚ್ಚಿನ ದರ ಈಗ ರಾಜ್ಯ ಸರ್ಕಾರ ನೀಡುತ್ತೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಅಭಿಮಾನಿಗಳ ಸಂಕಲ್ಪ ವಿಚಾರಕ್ಕೆ ಸಂಬಂಧಪಟ್ಟಂತೆ ಅದು ಅಭಿಮಾನಿಗಳ ಒತ್ತಾಯ ಈಗ ಕುಮಾರಸ್ವಾಮಿ ವಿಜಯೇಂದ್ರ ಅಶ್ವಥ್ ನಾರಾಯಣ ಆರ್ ಅಶೋಕ ಜಿ ಪರಮೇಶ್ವರ್ ಜಮೀರ್ ಅಹ್ಮದ್ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕು ಎಂದು ಅಭಿಮಾನಿಗಳು ಹೇಳುತ್ತಾರೆ ಅವರವರ ಊರಿಗೆ ಹೋದಾಗ ಈ ರೀತಿ ಹೇಳಿಕೆ ನೀಡುವುದು ಸಾಮಾನ್ಯ ಭಾಗಿಯೆಲ್ಲವೂ ರಾಜಕೀಯ ನಾಯಕರ ನಡುವೆ ಚರ್ಚೆಯಾಗುತ್ತದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ತಿಳಿಸಿದರು.a








