ಬೆಂಗಳೂರು : ಬೆಂಗಳೂರಲ್ಲಿ ಲಿಫ್ಟಿನಲ್ಲಿ ನಾಯಿ ಮೇಲೆ ಹಲ್ಲೆ ಮಾಡಿ ಕೊಂದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪುಷ್ಪಲತಾ ವಿರುದ್ಧ ಮತ್ತೊಂದು fir ದಾಖಲಾಗಿದೆ. ಚಿನ್ನಾಭರಣ ಕಳ್ಳತನ ಆರೋಪದ ಹಿನ್ನೆಲೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ನಾಯಿಮರಿಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಪುಷ್ಪಾಲತಾಳನ್ನು ನಿನ್ನೆ ಪೊಲೀಸರು ಅರೆಸ್ಟ್ ಮಾಡಿದ್ದರು. ಸದ್ಯ ಪ್ರಕರಣ ಸಂಬಂಧ ಪುಷ್ಪಲತಾ ನ್ಯಾಯಾಂಗ ಬಂಧನದಲ್ಲಿ ಇದ್ದಾಳೆ. ಇದೀಗ ಬಾಗಲೂರು ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ರಾಶಿಕಾ ನೀಡಿದ ದೂರಿನ ಮೇರೆಗೆ ಪುಷ್ಪಲತಾ ಮೇಲೆ ಎಫ್ಐಆರ್ ದಾಖಲಾಗಿದೆ.
ನವೆಂಬರ್ ಎರಡರಂದು ಮನೆಯಲ್ಲಿ ಇಟ್ಟಂತಹ ಚಿನ್ನಾಭರಣ ಕಾಣೆಯಾಗಿದೆ.
ಸುಮಾರು 50 ಗ್ರಾಂ ಚಿನ್ನದ ಸರ ಮತ್ತು ಒಂದು ಉಂಗುರ, ಒಂದು ವಜ್ರದ ಉಂಗುರ ಕಾಣೆಯಾಗಿದೆ ಎಂದು ದೂರು ದಾಖಲಿಸಿದ್ದಾರೆ. ಮನೆ ಕೆಲಸದಾಕೆ ಪುಷ್ಪಲತಾ ಮೇಲೆ ಅನುಮಾನ ವ್ಯಕ್ತಪಡಿಸಿ ವಿಚಾರಣೆ ನಡೆಸಲಾಗುತ್ತಿದೆ. ಪುಷ್ಪಲತಾ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಪೊಲೀಸರು ಪ್ರತ್ಯೇಕ ಪ್ರಕರಣದ ಕಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕದ್ದ ಚಿನ್ನ ಅದೇ ಮನೆಯಲ್ಲಿ ಪುಷ್ಪಲತಾ ಬಚ್ಚಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.








