Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗೃಹಲಕ್ಷ್ಮಿ ಯೋಜನೆಯ ಆಸರೆ : ಹಿಟ್ಟಿನ ಗಿರಣಿ ಆರಂಭಿಸಿ ಸ್ವಾವಲಂಬಿಯಾದ ವಿಜಯಪುರದ ಮಹಿಳೆ.!

ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ : ಮುಸ್ಲಿಂ ಯುವಕನಿಗೆ ಥಳಿಸಿದ, 8 ಜನ ಹಿಂದೂ ಮುಖಂಡರು ಖಾಕಿ ವಶಕ್ಕೆ!

ಬಾಕ್ಸ್ ಆಫೀಸ್‌ನಲ್ಲಿ ‘ಲವ್ ಮಾಕ್ಟೇಲ್-3’ ಅಬ್ಬರ: ಯಶಸ್ವಿಯಾಗಿ 50 ದಿನ ಪೂರೈಸಿದ ಡಾರ್ಲಿಂಗ್ ಕೃಷ್ಣ ಸಿನಿಮಾ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂತರರಾಷ್ಟ್ರೀಯ ಸಂಸ್ಥೆ ಸಿಐಟಿಎಸ್ ನಿಂದ ವಂತಾರ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಶ್ಲಾಘನೆ
INDIA

ಅಂತರರಾಷ್ಟ್ರೀಯ ಸಂಸ್ಥೆ ಸಿಐಟಿಎಸ್ ನಿಂದ ವಂತಾರ ಸಂಸ್ಥೆಗಳ ಕಾರ್ಯ ನಿರ್ವಹಣೆಗೆ ಶ್ಲಾಘನೆ

By kannadanewsnow09

ನವದೆಹಲಿ : ಗುಜರಾತ್‌ನ ಜಾಮ್‌ನಗರದಲ್ಲಿ ಇರುವ ವಂತಾರ ಯೋಜನೆ ಮತ್ತು ಅದರ ಎರಡು ಸಂಬಂಧಿತ ಸಂಸ್ಥೆಗಳಾದ ಗ್ರೀನ್ ಝೂಲಾಜಿಕಲ್ ರೆಸ್ಕ್ಯೂ ಮತ್ತು ರಿಕವರಿ ಸೆಂಟರ್ (GZRRC) ಮತ್ತು ರಾಧಾಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್ (RKTEWT)ನ ಅತ್ಯುತ್ತಮ ಪದ್ಧತಿಗಳು ಮತ್ತು ಕೆಲಸವನ್ನು ಸಿಐಟಿಎಸ್ ಬಹಿರಂಗವಾಗಿ ಶ್ಲಾಘಿಸಿದೆ. ವಿಶ್ವದಾದ್ಯಂತ ಅಳಿವಿನ ಅಂಚಿನಲ್ಲಿ ಇರುವ ವಿವಿಧ ಪ್ರಭೇದದ ಕಾಡು ಪ್ರಾಣಿಗಳು ಮತ್ತು ಪಕ್ಷಿಗಳ ಅಕ್ರಮ ವ್ಯಾಪಾರದ ಮೇಲ್ವಿಚಾರಣೆ ಮಾಡುವ ಸಂಸ್ಥೆ ಸಿಐಟಿಇಎಸ್ (the Convention on International Trade in Endangered Species of Wild Fauna and Flora). ಅಂದ ಹಾಗೆ ಇದಕ್ಕೂ ಮುನ್ನ ಭಾರತದ ಸರ್ವೋಚ್ಚ ನ್ಯಾಯಾಲಯವು (ಸುಪ್ರೀಂ ಕೋರ್ಟ್) ವಂತಾರಕ್ಕೆ ಕ್ಲೀನ್ ಚಿಟ್ ನೀಡಿತ್ತು.

ಎರಡೂ ಸಂಸ್ಥೆಗಳು ಅತ್ಯಂತ ಉನ್ನತ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ತನ್ನ ತನಿಖಾ ವರದಿಯಲ್ಲಿ CITES ಹೇಳಿದೆ. ಪ್ರಾಣಿಗಳಿಗೆ ಆಧುನಿಕ ವ್ಯವಸ್ಥೆಯ ನೆಲೆಗಳು, ವೈದ್ಯಕೀಯ ಆರೈಕೆ ಮತ್ತು ಸುಧಾರಿತ ಸೌಲಭ್ಯಗಳು ಲಭ್ಯವಿದೆ. ವರದಿಯ ಪ್ರಕಾರ, ಈ ಸಂಸ್ಥೆಗಳು ಪಶುವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಗಮನಾರ್ಹ ಪ್ರಗತಿ ಸಾಧಿಸಿವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಈ ಸಂಸ್ಥೆಗಳು ತಮ್ಮ ಪಶುವೈದ್ಯಕೀಯ ಅನುಭವವನ್ನು ವೈಜ್ಞಾನಿಕ ಸಮುದಾಯದೊಂದಿಗೆ ಹಂಚಿಕೊಳ್ಳಬೇಕು ಎಂದು ವರದಿ ಶಿಫಾರಸು ಮಾಡಿದೆ.

ಭಾರತದ ವನ್ಯಜೀವಿ ರಕ್ಷಣೆ ಮತ್ತು ನಿಯಂತ್ರಕ ವ್ಯವಸ್ಥೆಯು ಅಂತರರಾಷ್ಟ್ರೀಯ ಮಾನದಂಡಗಳನ್ನು ಪಾಲಿಸುತ್ತವೆ ಮತ್ತು ವಂತಾರ ಪ್ರಾಣಿ ಸಂರಕ್ಷಣಾ ಕ್ಷೇತ್ರದಲ್ಲಿ ಹೊಸ ಪೂರ್ವ ನಿದರ್ಶನವನ್ನು ನಿಗದಿ ಮಾಡುತ್ತಿದೆ ಎಂದು ವರದಿ ಹೇಳಿದೆ. GZRRC ಮತ್ತು RKTEWT ನಡೆಸುವ ಎಲ್ಲ ಪ್ರಾಣಿ ಆಮದು ಪ್ರಕ್ರಿಯೆಗಳು ಭಾರತೀಯ ಕಾನೂನುಗಳಿಗೆ ಅನುಸಾರವಾಗಿ ಸಂಪೂರ್ಣವಾಗಿ ಕಾನೂನುಬದ್ಧ ಮತ್ತು ಪಾರದರ್ಶಕವಾಗಿವೆ ಎಂದು ಭಾರತ ಸರ್ಕಾರ ಖಚಿತಪಡಿಸಿದೆ ಎಂದು CITES ಹೇಳಿದೆ.

ಎಲ್ಲ ಪ್ರಾಣಿಗಳನ್ನು CITES ರಫ್ತು ಅಥವಾ ಮರು-ರಫ್ತು ಪರವಾನಗಿಗಳೊಂದಿಗೆ ಭಾರತಕ್ಕೆ ತರಲಾಗಿದೆ ಎಂದು ಸಂಸ್ಥೆಯ ತನಿಖೆಯಲ್ಲಿ ಕಂಡುಬಂದಿದೆ. ಯಾವುದೇ ಪ್ರಾಣಿಗಳನ್ನು ಪರವಾನಗಿ ಇಲ್ಲದೆ ಭಾರತಕ್ಕೆ ತಂದಿಲ್ಲ. ಇದಲ್ಲದೆ, ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಪ್ರಾಣಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಅಥವಾ ಮಾರಾಟ ಮಾಡಲಾಗುತ್ತಿದೆ ಎಂಬ ಯಾವುದೇ ಸುಳಿವು ಇಲ್ಲ. ಪಾರದರ್ಶಕತೆಯ ಕೊರತೆಯಿಂದಾಗಿ ಕ್ಯಾಮರೂನ್‌ನಿಂದ ಚಿಂಪಾಂಜಿಗಳ ಆಮದನ್ನು ವಂತಾರ ಹೇಗೆ ರದ್ದುಗೊಳಿಸಿದೆ ಎಂಬುದನ್ನು ವರದಿಯು ನಿರ್ದಿಷ್ಟವಾಗಿ ಎತ್ತಿ ತೋರಿಸಿದೆ.

BIG NEWS: ಕೊಲೆಯಾದವನ ಬರ್ತ್‌ಡೇ ದಿನವೇ ಕೊಲೆಗಾರರಿಗೆ ಜೀವಾವಧಿ ಶಿಕ್ಷೆ

BREAKING : ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ : ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Share. Facebook Twitter LinkedIn WhatsApp Email

Related Posts

BREAKING : ತಮಿಳುನಾಡಿನಲ್ಲಿ `CM’ ಆಗಿ ದಳಪತಿ ವಿಜಯ್ : `TVK’ ಸರ್ಕಾರ ರಚನೆಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್!

1 Min Read

118 ಶಾಸಕರ ಸಹಿಯೊಂದಿಗೆ ಬನ್ನಿ, ಪದಗ್ರಹಣಕ್ಕೂ ಮುನ್ನ ಬಹುಮತ ಸಾಬೀತುಪಡಿಸಿ : ತಮಿಳುನಾಡು ಗವರ್ನರ್ ಖಡಕ್ ಸೂಚನೆ

1 Min Read

JOB ALERT : ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ : ಭಾರತೀಯ ರೈಲ್ವೆ ಇಲಾಖೆಯಲ್ಲಿ 11,127 ಹುದ್ದೆಗಳಿಗೆ ಅರ್ಜಿ ಆಹ್ವಾನ

2 Mins Read
Recent News

ಗೃಹಲಕ್ಷ್ಮಿ ಯೋಜನೆಯ ಆಸರೆ : ಹಿಟ್ಟಿನ ಗಿರಣಿ ಆರಂಭಿಸಿ ಸ್ವಾವಲಂಬಿಯಾದ ವಿಜಯಪುರದ ಮಹಿಳೆ.!

ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ : ಮುಸ್ಲಿಂ ಯುವಕನಿಗೆ ಥಳಿಸಿದ, 8 ಜನ ಹಿಂದೂ ಮುಖಂಡರು ಖಾಕಿ ವಶಕ್ಕೆ!

ಬಾಕ್ಸ್ ಆಫೀಸ್‌ನಲ್ಲಿ ‘ಲವ್ ಮಾಕ್ಟೇಲ್-3’ ಅಬ್ಬರ: ಯಶಸ್ವಿಯಾಗಿ 50 ದಿನ ಪೂರೈಸಿದ ಡಾರ್ಲಿಂಗ್ ಕೃಷ್ಣ ಸಿನಿಮಾ!

BREAKING : ತಮಿಳುನಾಡಿನಲ್ಲಿ `CM’ ಆಗಿ ದಳಪತಿ ವಿಜಯ್ : `TVK’ ಸರ್ಕಾರ ರಚನೆಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್!

State News
KARNATAKA

ಗೃಹಲಕ್ಷ್ಮಿ ಯೋಜನೆಯ ಆಸರೆ : ಹಿಟ್ಟಿನ ಗಿರಣಿ ಆರಂಭಿಸಿ ಸ್ವಾವಲಂಬಿಯಾದ ವಿಜಯಪುರದ ಮಹಿಳೆ.!

By kannadanewsnow57 KARNATAKA 1 Min Read

ವಿಜಯಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯು ನಾಡಿನ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗುತ್ತಿದೆ ಎಂಬುದಕ್ಕೆ ವಿಜಯಪುರ ಜಿಲ್ಲೆಯ ಈ…

ಕೊಪ್ಪಳದಲ್ಲಿ ಲವ್ ಜಿಹಾದ್ ಆರೋಪ : ಮುಸ್ಲಿಂ ಯುವಕನಿಗೆ ಥಳಿಸಿದ, 8 ಜನ ಹಿಂದೂ ಮುಖಂಡರು ಖಾಕಿ ವಶಕ್ಕೆ!

BIG NEWS : ಕಾರವಾರದಲ್ಲಿ ಘೋರ ದುರಂತ : ಸಮುದ್ರದ ಅಲೆಗೆ ಸಿಲುಕಿ ಇಬ್ಬರು ಯುವಕರು ಜಲಸಮಾಧಿ

SHOCKING : ರಾಜ್ಯದಲ್ಲಿ ವಿಚಿತ್ರ ಘಟನೆ : ವರಸೆಯಲ್ಲಿ ಸೋದರನಾಗಬೇಕಿದ್ದವನನ್ನೇ ಮದುವೆಯಾದ ಯುವತಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.