ಬೆಂಗಳೂರು : ಬೆಂಗಳೂರಿನಲ್ಲಿ ಸೀರಿಯಲ್ ನಟಿಯರಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದು, ಫೇಸ್ ಬುಕ್ ನಲ್ಲಿ ಗುಪ್ತಾಂಗದ ವಿಡಿಯೋ ಕಳಿಸಿ ನಟಿ ಟಾರ್ಚರ್ ನೀಡಿದ್ದಾನೆ. 
ತೆಲುಗು ಹಾಗೂ ಕನ್ನಡ ಧಾರವಾಹಿಗಳಲ್ಲಿ ಸಂತ್ರಸ್ತೆ ನಟಿಸಿದ್ದು, ಆರೋಪಿ ಕಳೆದ 3 ತಿಂಗಳಿನಿಂದ ನಟಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಆರೋಪಿ ಮೊದಲು ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಆದರೆ ರಿಕ್ವೆಸ್ಟ್ ಸ್ವೀಕರಿಸದ ಹಿನ್ನೆಲೆ ಮೆಸೆಂಜರ್ ನಲ್ಲಿ ಮೆಸೇಜ್ ಮಾಡಿದ್ದಾನೆ.
ಮೆಸೇಜ್ ಮಾಡದಂತೆ ಆರೋಪಿಗೆ ನಟಿ ಎಚ್ಚರಿಕೆ ಸಹ ನೀಡಿದ್ದರು. ಕಾಟಾ ಹೆಚ್ಚಾದ ಹಿನ್ನೆಲೆಯಲ್ಲಿ ನಟಿ ಆರೋಪಿಯನ್ನು ಬ್ಲಾಕ್ ಮಾಡಿದ್ದರು. ಬಳಿಕ ಬೇರೆ ಐಡಿಯಿಂದ ಅಶ್ಲೀಲ, ಗುಪ್ತಾಂಗದ ವಿಡಿಯೋ ಕಳಿಸಿದ್ದ. ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆ ಆರೋಪಿಗೆ ನಟಿ ಬುದ್ದಿ ಹೇಳಿದ್ದರು. ನವೆಂಬರ್ 1ರಂದು ನಾಗರಬಾವಿ ಬಳಿ ನಟಿಯನ್ನು ಆರೋಪಿ ಭೇಟಿಯಾಗಿದ್ದ. ಈ ವೇಳೆ ನಟಿ ಆರೋಪಿಗೆ ಈ ರೀತಿ ಮೆಸೇಜ್ ಮಾಡೋದು ಬೇಡ ಎಂದು ಹೇಳಿದ್ದರು. ಆದರೆ ಮತ್ತೆ ಅದೇ ರೀತಿ ಕಿರುಕುಳ ನೀಡಲು ಆರಂಭಿಸಿದ್ದರಿಂದ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
		







