ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಜನತೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದಾರೆ. ಲೈಟರ್ ಕೈಯಲ್ಲಿ ಹಿಡಿದು ತಾಸುಗಟ್ಟಲೆ ಸರದಿ ಸಾಲಿನಲ್ಲೋ, ಜನಸ್ಪಂದನ ಕಾರ್ಯಕ್ರಮದಲ್ಲೋ ನಿಂತು ತಮ್ಮ ಸಮಸ್ಯೆ ಪರಿಹರಿಸಿ ಎನ್ನುವ ವ್ಯವಸ್ಥೆ ಬದಲು ಮಾಡಿದ್ದಾರೆ. ರಾಜ್ಯದ ಸಾರ್ವಜನಿಕರಾದಂತ ನೀವುಗಳು ನಿಮ್ಮ ಸಮಸ್ಯೆಗಳನ್ನು ಸಿಎಂಗೆ ದೂರಿನ ಮೂಲಕ ನೀಡಬೇಕಾದರೇ, ಜಸ್ಟ್ ಒಂದು ಎಕ್ಸ್ ಪೋಸ್ಟ್ ಸಾಕಾಗಿದೆ. ಆ ಪೋಸ್ಟ್ ಗೆ ಪ್ರತ್ಯುತ್ತರ ಬಂದು, ನಿಮ್ಮ ಸಮಸ್ಯೆಗೆ ಪರಿಹಾರ ಖಂಡಿತ ಸಿಗಲಿದೆ ಎಂಬುದು ಸಿಎಂ ಕಚೇರಿಯ ಮಾಹಿತಿ. ಹಾಗಾದ್ರೇ ಸಿಎಂಗೆ ದೂರು ನೀಡೋದು ಹೇಗೆ ಅಂತ ಮುಂದೆ ಓದಿ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಪ್ರಾರಂಭವಾಗಿರುವ ಹೊಸ ಉಪಕ್ರಮವಾಗಿದ್ದು, ಯಾವುದೇ ದೊಡ್ಡ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಜನರಿಗೆ ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ಸಹಾಯ ಮಾಡಲು, ಕರ್ನಾಟಕ ಮುಖ್ಯಮಂತ್ರಿಗಳ ಕಚೇರಿ (CMO) ಹೊಸ ಟ್ವಿಟರ್ ಹ್ಯಾಂಡಲ್ ಅನ್ನು ಪ್ರಾರಂಭಿಸಿದ್ದು, ಇದರ ಮೂಲಕ ಹೇಗೆ ದೂರು ನೀಡಬೇಕು? ದೂರು ನೀಡುವವರು ಏನೇನು ಮಾಹಿತಿ, ದಾಖಲೆಗಳನ್ನು ನೀಡಬೇಕು ಎಂಬುದನ್ನು ತಿಳಿಸಿದೆ. ಇದನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ನಿರ್ವಹಿಸಲಿದ್ದಾರೆ.
ಜನರು ತಮ್ಮ ಕುಂದುಕೊರತೆಗಳೊಂದಿಗೆ @osd_cmkarnataka ಅನ್ನು ಟ್ಯಾಗ್ ಮಾಡಬಹುದಾಗಿದ್ದು, ಅವುಗಳನ್ನು ಆಯಾ ಇಲಾಖೆಗಳಿಗೆ ಕಳುಹಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿ ಡಾ.ವೈಷ್ಣವಿ ಕೆ ಕುಂದುಕೊರತೆ ಟ್ವಿಟರ್ ಹ್ಯಾಂಡಲ್ನ ಮುಖ್ಯಸ್ಥರಾಗಿರಲಿದ್ದಾರೆ. ಈ ಸೇವೆಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವೈಯಕ್ತಿಕ ಸಮಸ್ಯೆಗಳನ್ನು ಹೊರತುಪಡಿಸಿ ನೈಜವಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ ಎಂದು @osd_cmkarnataka ಟ್ವೀಟ್ ಮಾಡಿದ್ದಾರೆ.
ಈ ಟ್ವಿಟರ್ ಹ್ಯಾಂಡಲ್ ಮೂಲಕ ಪ್ರಸ್ತಾಪಿಸಿರುವ ಸಮಸ್ಯೆಯನ್ನು, ಸಿಎಂಒ ಅಧಿಕಾರಿಗಳು ಆಯಾ ಇಲಾಖೆಗಳಿಗೆ ದೂರನ್ನು ಕಡಿಮೆ ಸಮಯದಲ್ಲಿ ಪರಿಹರಿಸಲು ನಿರ್ದೇಶಿಸಲಿದ್ದಾರೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಯಿಂದ ಪ್ರಾರಂಭವಾಗಿರುವ ಹೊಸ ಉಪಕ್ರಮವಾಗಿದ್ದು, ಯಾವುದೇ ದೊಡ್ಡ ಹಾಗೂ ದೀರ್ಘಕಾಲದಿಂದ ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಹಾಗಾಗಿ ನಿಮ್ಮ ಸಾರ್ವಜನಿಕ ಕುಂದುಕೊರತೆಗಳನ್ನು ಈ ಸೆವೆಯ ಮೂಲಕ ಬಗೆಹರಿಸಿಕೊಳ್ಳಬೇಕಾಗಿ ಹಾಗೂ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಈ ಸಂದೇಶವನ್ನು ಎಲ್ಲಾಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕಾಗಿ ಮನವಿಮಾಡುತ್ತಾ ಆಡಳಿತ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಲೈವ್ ಮಾಡಬೇಕೆಂದು ಅಶಿಸುತಾ ತಿಳಿಸಿ ಮನವಿ ಮಾಡುತ್ತೇವೆ.
ದೂರು ನೀಡಲು ಏನೆಲ್ಲಾ ಮಾಹಿತಿಯನ್ನು ಎಕ್ಸ್ ನಲ್ಲಿ ಶೇರ್ ಮಾಡಬೇಕು.?
ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರಿಗೆ ! ಸಾರ್ವಜನಿಕ ಕುಂದುಕೊರತೆಗಳ ಮಾಹಿತಿಯನ್ನು ಈ ಕೆಳಕಂಡ ನಮೂನೆಯಲ್ಲಿ ಟ್ಯಾಗ್ ಮಾಡುವಂತೆ ಕೋರಿದೆ. ಈ ಕಛೇರಿಯ ಸೇವೆಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವೈಯಕ್ತಕ ಸಮಸ್ಯೆಗಳನ್ನು ಹೊರತುಪಡಿಸಿ ನೈಜವಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಕೋರಿದೆ.
ಸಾರ್ವಜನಿಕರು ಮತ್ತು ಮಾಧ್ಯಮ ಮಿತ್ರರಿಗೆ ! ಸಾರ್ವಜನಿಕ ಕುಂದುಕೊರತೆಗಳ ಮಾಹಿತಿಯನ್ನು ಈ ಕೆಳಕಂಡ ನಮೂನೆಯಲ್ಲಿ ಟ್ಯಾಗ್ ಮಾಡುವಂತೆ ಕೋರಿದೆ. (ಈ ಕಛೇರಿಯ ಸೇವೆಗಳನ್ನು ಸದ್ಬಳಕೆ ಮಾಡುವ ಉದ್ದೇಶದಿಂದ ವೈಯಕ್ತಕ ಸಮಸ್ಯೆಗಳನ್ನು ಹೊರತುಪಡಿಸಿ ನೈಜವಾದ ಮತ್ತು ಸಂಪೂರ್ಣವಾದ ಮಾಹಿತಿಯನ್ನು ನೀಡುವಂತೆ ಕೋರಿದೆ) 1/2
— Office of the OSD to CM Karnataka (@osd_cmkarnataka) July 11, 2023
ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಕುಂದು ಕೊರತೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ . ಕುಂದುಕೊರತೆ ಬಗ್ಗೆ ಈ ಹಿಂದೆ ಯಾವುದೇ ಕಚೇರಿ ಅಥವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಕಚೇರಿ ಸ್ವೀಕೃತಿ ಪತ್ರ ಲಗತ್ತಿಸುವುದು ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸುವಂತೆ ತಿಳಿಸಿದೆ.
ವಸಂತ ಬಿ ಈಶ್ವರಗೆರೆ.., ಸಂಪಾದಕರು
ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಕುಂದು ಕೊರತೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ .
ಕುಂದುಕೊರತೆ ಬಗ್ಗೆ ಈ ಹಿಂದೆ ಯಾವುದೇ ಕಚೇರಿ ಅಥವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದಲ್ಲಿ ಕಚೇರಿ ಸ್ವೀಕೃತಿ ಪತ್ರ ಲಗತ್ತಿಸುವುದು ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸುವುದು. 2/2— Office of the OSD to CM Karnataka (@osd_cmkarnataka) July 11, 2023








