ಮೈಸೂರು : ರಾಜ್ಯ ರಾಜಕಾರಣದಲ್ಲಿ ಇದೀಗ ನಾಯಕತ್ವ ಬದಲಾವಣೆ ಹಾಗೂ ಸಂಪುಟಪುನ ರಚನೆ, ಕುರಿತಾಗಿ ಭಾರಿ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಸಿಎಂ ಎಂದು ಘೋಷಿಸಿ ಎಂದು ಪತ್ರ ಚಳುವಳಿ ಆರಂಭಿಸಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ಗೆ ಪತ್ರ ಬರೆದು ಚಳುವಳಿ ಆರಂಭಿಸಿದ್ದಾರೆ.
ಮೈಸೂರಿನಲ್ಲಿ ರಾಮಸ್ವಾಮಿ ಮೃತದಲ್ಲಿ ಅಹಿಂದ ಒಕ್ಕೂಟದಿಂದ ಈ ಒಂದು ಪತ್ರ ಚಳುವಳಿ, ಆರಂಭಿಸಿದ್ದು ಗೊಂದಲಗಳಿಗೆ ತೆರೆ ಎಳೆಯುವಂತೆ ಒತ್ತಾಯಿಸಿ ಪತ್ರ ಚಳುವಳಿ ನಡೆಸಲಾಗಿದೆ. ಯಾರು ಸಿಎಂ ಆಗ್ತಾರೆ ಸಿಎಂ ರೇಸ್ನಲ್ಲಿ ಯಾರು ಇದ್ದಾರೆ ಎಂದು ಗೊಂದಲಗಳಿದ್ದು ಅವೆಲ್ಲ ಗೊಂದಲಗಳಿಗೆ ತೆರೆ ಎಳೆಯಿರಿ. ಹಾಗಾಗಿ ಸಿದ್ದರಾಮಯ್ಯರನ್ನು ಪೂರ್ಣಾವಧಿ ಸಿಎಂ ಎಂದು ಘೋಷಿಸಿ ಎಂದು ರಾಹುಲ್ ಗಾಂಧಿಗೆ ಅಡ್ರೆಸ್ ಮಾಡಿ ಪತ್ರ ಬರೆದಿದ್ದಾರೆ.








