ಬೆಂಗಳೂರು: ರಾಜ್ಯದಲ್ಲಿ ಹತ್ತಿ ಬೆಳೆಯುವಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಬೆಲೆಯನ್ನು 45,000ಕ್ಕೆ ನಿಗದಿ ಪಡಿಸಿರುವುದೇ ಕಾರಣ. ಈ ಬೆಲೆಯನ್ನು ರೂ.60,000ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತಂತೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅದರಲ್ಲಿ ನಮಸ್ಕಾರಗಳು, ಉಗ್ರೇಶ್, ಜೆ.ಡಿ.ಎಸ್ ಮುಖಂಡರು, ಸಿರಾ ವಿಧಾನಸಭಾ ಕ್ಷೇತ್ರ ತುಮಕೂರು ಜಿಲ್ಲೆ ಇವರು ಸಲ್ಲಿಸಿರುವ ಸಯಂವರ ಮನವಿಯನ್ನು ಇದರೊಂದಿಗೆ ಲಗತಿ ನಮ್ಮ ಅವಗಾಹನೆಗಾಗಿ ರವಾನಿಸಲಾಗಿದೆ ಎಂದಿದ್ದಾರೆ.
ಸಿರಾ ಹಾಗೂ ಅಕಪಕದ ಪಾವಗಡ, ಮಧುಗಿರಿ, ಹಿರಿಯೂರು ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲೂಕುಗಳಲ್ಲಿನ ರೈತರಿಗೆ ಹತ್ತಿ ಮತ್ತು ಹತ್ತಿ ಬೀಜದ ಬೆಲೆ ಕಳೆದ ವರ್ಷ ರೂ. 50,000/-ಗಳು ನಿಗಧಿಯಾಗಿದ್ದು ಈ ವರ್ಷ ರೂ. 45,000/- ಗಳಿಗೆ ನಿಗಧಿಯಾಗಿದೆ. ದಿನಗೂಲಿ ಕಾರ್ಮಿಕರ ವೇತನ, ರಸಗೊಬದ್ಧ, ಕೀಟನಾಶಕ ಮತ್ತು ಕೃಷಿ ವಸ್ತುಗಳ ಬೆಳೆಗಳು ರೈತರ ಬದುಕಿಗೆ ಹೊರೆಯಾಗಿರುವುದರಿಂದ, ಸದರಿ ಬೆಲೆಯನ್ನು ರೂ. 60,000/- ಗಳಿಗೆ ನಿಗಧಿ ಮಾಡುವಂತೆ ವಿನಂತಿಸಿದಾರೆ.
ಈ ಸಂಬಂಧ ಪರಿಶೀಲಿಸಿ, ಅವರ ವಿನಂತಿಯ ಬಗ್ಗೆ ಅಗತ್ಯ ಕ್ರಮ ಕೈಗೊಳಲು ಸಂಬಂಧವವರಿಗೆ ಸೂಚಿಸಬೇಕೆಂದು ವಿನಂತಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…
BREAKING: ಬೆಂಗಳೂರಲ್ಲಿ ವೈದ್ಯೆ ಕೃತಿಕಾ ಹತ್ಯೆಗೈದಿದ್ದ ಪತಿ ಮಹೇಂದ್ರಗೆ 14 ದಿನ ನ್ಯಾಯಾಂಗ ಬಂಧನ, ಜೈಲುಪಾಲು
ಮೊಬೈಲ್ ಗೀಳಿಗೆ ಬಿದ್ದಿರುವ ಯುವ ಪೀಳಿಗೆಗೆ ಮಹನೀಯರ ಇತಿಹಾಸ ತಿಳಿಸುವುದು ಅಗತ್ಯ: ಸಚಿವ ಶಿವರಾಜ್ ತಂಗಡಗಿ