Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಿಮಗಾಗಿ ಬರಲಿದೆ ‘ರಿಯಾಯಿತಿ ದರದ ಸೂಪರ್ ಮಾರ್ಕೆಟ್’
KARNATAKA

GOOD NEWS: ರಾಜ್ಯದ ‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಿಮಗಾಗಿ ಬರಲಿದೆ ‘ರಿಯಾಯಿತಿ ದರದ ಸೂಪರ್ ಮಾರ್ಕೆಟ್’

By kannadanewsnow0916/10/2025 5:30 AM

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಎನ್ನುವಂತೆ ಪೊಲೀಸ್ ಕ್ಯಾಂಟೀನ್ ಮಾದರಿಯಲ್ಲೇ ನಿಮಗಾಗಿ ಎಂ ಎಸ್ ಐ ಎಲ್ ಮೂಲಕ ರಿಯಾಯಿತಿ ದರದ ಸೂಪರ್ ಮಾರ್ಕೆಟ್ ಅನ್ನು ಸರ್ಕಾರವು ಆರಂಭಿಸಲು ಚಿಂತನೆ ನಡೆಸಿದೆ.

ಪೊಲೀಸ್ ಮತ್ತು ಸೇನಾ‌ ಕ್ಯಾಂಟೀನ್ ಮಾದರಿಯಲ್ಲೇ ರಾಜ್ಯ ಸರಕಾರಿ ನೌಕರರಿಗೆ ದಿನನಿತ್ಯದ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ವಸ್ತುವೂ ರಿಯಾಯಿತಿ ದರದಲ್ಲಿ ಸಿಗಬೇಕೆಂಬ ಉದ್ದೇಶದೊಂದಿಗೆ ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ವತಿಯಿಂದ ಸೂಪರ್‌ ಮಾರ್ಕೆಟ್‌ ಆರಂಭಿಸುವ ಚಿಂತನೆ ಇದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧ ಅವರು ಖನಿಜ ಭವನದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ ಕುಮಾರ ಸೇರಿದಂತೆ ಇತರ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಪ್ರಾಥಮಿಕ ಸುತ್ತಿನ ಸಭೆ ನಡೆಸಿದರು.

ಬಳಿಕ ಮಾಹಿತಿ ನೀಡಿದ ಅವರು, ರಾಜ್ಯದ ಪೊಲೀಸ್, ಅರೆ ಸೇನಾ ಪಡೆಗಳ ನೌಕರರಿಗೆ ಈ ರೀತಿಯ ಕ್ಯಾಂಟೀನ್‌ ಸೌಲಭ್ಯವಿದೆ. ರಾಜ್ಯದಲ್ಲಿ 6 ಲಕ್ಷ ಸರಕಾರಿ ನೌಕರರಿದ್ದಾರೆ. ಅವರ ಕುಟುಂಬಗಳ ಹಿತದೃಷ್ಟಿಯಿಂದ ಇಂಥದ್ದೊಂದು ಉಪಕ್ರಮ ಆರಂಭಿಸುವುದು ನಮ್ಮ ಚಿಂತನೆಯಾಗಿದೆ. ಇದಕ್ಕೆ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದು ಹೇಗೆಂದು ಆರ್ಥಿಕ ಇಲಾಖೆಯ ಜತೆ ಚರ್ಚಿಸಲಾಗುವುದು. ಒಟ್ಟಿನಲ್ಲಿ ಇಂತಹ ಸೂಪರ್‌ ಮಾರ್ಕೆಟ್‌ ಮಳಿಗೆ ಆರಂಭಿಸುವ ಸಾಧ್ಯಾಸಾಧ್ಯತೆ ಕುರಿತು ತಮಗೆ ಒಂದು ತಿಂಗಳಲ್ಲಿ ವಿಸ್ತೃತ ವರದಿ ಸಲ್ಲಿಸುವಂತೆ ಎಂಎಸ್‌ಐಎಲ್‌ಗೆ ಸೂಚಿಸಲಾಗಿದೆ ಎಂದಿದ್ದಾರೆ.

ಉದ್ದೇಶಿತ ಎಂಎಸ್‌ಐಎಲ್‌ ಸೂಪರ್‌ ಮಾರ್ಕೆಟ್‌ನಲ್ಲಿ ನಮ್ಮ ಸರಕಾರಿ ನೌಕರರ ದಿನನಿತ್ಯದ ಬದುಕಿಗೆ ಬೇಕಾದ ದವಸ-ಧಾನ್ಯದಿಂದ ಹಿಡಿದು ಎಫ್‌ಎಂಸಿಜಿ ವಲಯದಲ್ಲಿ ಬರುವ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತಾದರೆ ಚೆನ್ನಾಗಿರುತ್ತದೆ. ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆಗಳನ್ನು ತೆರೆಯುವ ಆಲೋಚನೆ ಇದೆ. ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲೂ ಇಂತಹ ಸೌಲಭ್ಯ ವಿಸ್ತರಣೆಗೆ ಮುಂದಾಗಬಹುದು. ಒಟ್ಟಿನಲ್ಲಿ ಅಧ್ಯಯನ ವರದಿ ಬಂದ ನಂತರ ತೀರ್ಮಾನಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದರಿಂದ ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್‌ ಚಟುವಟಿಕೆಯೂ ವಿಸ್ತಾರಗೊಂಡು, ಆದಾಯದ ಮೂಲವೊಂದು ಸಿಗಲಿದೆ. ಅಲ್ಲದೆ, ಲಕ್ಷಾಂತರ ಸರಕಾರಿ ನೌಕರರ ಕುಟುಂಬಗಳಿಗೂ ಇದರಿಂದ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರಿ ನೌಕರರ ಸಂಘಟನೆಗಳ ಜತೆ ಮಾತುಕತೆ ನಡೆಸುವಂತೆಯೂ ಅವರು ಸೂಚಿಸಿದ್ದಾರೆ.

ಎಂಎಸ್‌ಐಎಲ್‌ನ ಚಟುವಟಿಕೆಗಳು ಈಗ ಸೀಮಿತ ಪ್ರಮಾಣದಲ್ಲಿವೆ. ಇದಕ್ಕೆ ಮತ್ತಷ್ಟು ಕಸುವು ತುಂಬಿ, ಆರ್ಥಿಕವಾಗಿ ಮತ್ತಷ್ಟು ಸದೃಢಗೊಳಿಸಬೇಕೆಂಬ ಆಲೋಚನೆ ತಮ್ಮದಾಗಿದೆ. ಇದರಿಂದ ಅಪಾರ ಸಂಖ್ಯೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಗರದ ‘ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ’ದ ಹಾಲಿ ಸಮಿತಿ ವಿರುದ್ಧ ‘ನ್ಯಾಯಾಂಗ ನಿಂದನೆ’ ಅರ್ಜಿ

BREAKING: ರಾಜ್ಯದ ‘ಪೊಲೀಸ್ ಇಲಾಖೆ’ಯಲ್ಲಿ ಖಾಲಿ ಇರುವ ‘2032 ಹುದ್ದೆ’ಗಳ ಭರ್ತಿಗೆ ಸರ್ಕಾರ ಆದೇಶ | JOB ALERT

Share. Facebook Twitter LinkedIn WhatsApp Email

Related Posts

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

22/03/2026 9:33 PM1 Min Read

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM2 Mins Read

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM1 Min Read
Recent News

‘ಜೇಡ ಕಡಿತ’ ಅಪಾಯಕಾರಿಯೇ.? ಜೇಡ ಕಚ್ಚಿದ್ರೆ ಏನಾಗುತ್ತೆ ಗೊತ್ತಾ?

22/03/2026 10:09 PM

ಅಂತರಂಗದ ಬದುಕಿಗೆ ಲಗ್ಗೆ ಇಟ್ಟ AI; ಈಗ ‘AI-ಸೆಕ್ಷುವಲ್’ ಹೊಸ ಟ್ರೆಂಡ್! | AI-sexual

22/03/2026 9:41 PM

ಇಸ್ರೇಲ್ – ಇರಾನ್ ವಾರ್ ಎಫೆಕ್ಟ್; ವಿಮಾನಯಾನ ಸಂಸ್ಥೆಗಳಿಗೆ ಬರೋಬ್ಬರಿ 5,000 ಕೋಟಿ ನಷ್ಟ

22/03/2026 9:38 PM

ಗುಜರಾತ್ ಸಿಎಂಯಿಂದ ಭಾರತದ ಪ್ರಧಾನಿವರೆಗೆ, 24 ವರ್ಷಗಳ ನಿರಂತರ ಸೇವೆ : ಮೋದಿಯ ‘ಅಚಲ ಸಮರ್ಪಣೆ’ಯ ಸ್ಟೋರಿಯಿದು!

22/03/2026 9:33 PM
State News
KARNATAKA

ದಾವಣಗೆರೆಯಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿರುದ್ಧ ಅಲ್ಪಸಂಖ್ಯಾತರ ಆಕ್ರೋಶ; ಕೈ ಪಾಳೆಯದಲ್ಲಿ ಭುಗಿಲೆದ್ದ ಅಸಮಾಧಾನ!

By kannadanewsnow0922/03/2026 9:33 PM KARNATAKA 1 Min Read

ದಾವಣಗೆರೆ: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿ ದಾವಣಗೆರೆ ಜಿಲ್ಲೆಯಲ್ಲಿ ಹೊಸ ಸಂಚಲನ…

BIG NEWS: ಸಾಗರದ ಶೆಡ್ತೀಕೆರೆಯಲ್ಲಿ ವಿದ್ಯಾರ್ಥಿ ಮೇಲೆ ಹಲ್ಲೆ: ರಮೇಶ್ ನಾರಾಯಣ್ ಹಾಗೂ ಇತರ ಶಿಕ್ಷಕರ ವಿರುದ್ಧ ‘ಮಕ್ಕಳ ಆಯೋಗ ಸುಮೋಟೋ ಕೇಸ್’ ದಾಖಲು

22/03/2026 9:07 PM

BIG NEWS: ಮಂಡ್ಯದಲ್ಲಿ ‘LPG ಸಿಲಿಂಡರ್‌’ಗೆ ಮುಗಿಬಿದ್ದ ಜನ: ಪೊಲೀಸ್ ರಕ್ಷಣೆಯಲ್ಲಿ ‘ಗ್ಯಾಸ್‌’ ವಿತರಣೆ

22/03/2026 8:13 PM

ಸಾಗರದಲ್ಲಿ ಅದ್ದೂರಿಯಾಗಿ ನೆರವೇರಿದ ‘ಶ್ರೀ ಮಹಾಗಣಪತಿ ರಥೋತ್ಸವ’: ಭಕ್ತಿಯ ಪರಾಕಾಷ್ಠೆ, ಸಂಸ್ಕೃತಿಯ ಸಂಗಮ

22/03/2026 7:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.