ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೀಗ ನಟ ದರ್ಶನ್ ಜೈಲಿನಲ್ಲಿ ಸಾಮಾನ್ಯ ಕೈದಿಗಳಂತೆ ಜೀವನ ನಡೆಸುತ್ತಿದ್ದಾರೆ. ಎಲ್ಲ ಖೈದಿಗಳಂತೆ ದರ್ಶನ್ ಗೂ ಸಾಮಾನ್ಯ ವ್ಯವಸ್ಥೆ ಕಲ್ಪಿಸಲಾಗಿದೆ.
ಇನ್ನು ದರ್ಶನ್ ಭೇಟಿಗೆ ಬಂದಿದ್ದ ಪತ್ನಿ ವಿಜಯ್ ಲಕ್ಷ್ಮಿಗೆ ಎರಡುವರೆ ಗಂಟೆ ಕಾದು ದರ್ಶನ್ ಭೇಟಿ ಮಾಡಿದ್ದಾರೆ. ಮೊದಲು ಸಿಬ್ಬಂದಿಗಳು ಜೈಲರ್ ಚೇಂಬರ್ ನಲ್ಲಿ ಕೂರಿಸಿ ನೇರವಾಗಿ ಭೇಟಿ ಮಾಡಿಸುತ್ತಿದ್ದರು. ಆದರೆ ಇದೀಗ ಟೋಕನ್ ತೆಗೆದುಕೊಂಡು ವಿಜಯಲಕ್ಷ್ಮಿ ಕ್ಯೂ ನಲ್ಲಿ ನಿಂತಿದ್ದಾರೆ. ನಂತರ ದರ್ಶನವರನ್ನು ವಿಜಯಲಕ್ಷ್ಮಿ ಗ್ಯಾಲರಿಯಲ್ಲಿ ಭೇಟಿ ಮಾಡಿದ್ದಾರೆ ಸಾಮಾನ್ಯ ಕೈದಿಗಳನ್ನ ಯಾವ ರೀತಿ ಭೇಟಿ ಮಾಡುತ್ತಾರೆ ಅದೇ ರೀತಿ ವಿಜಯಲಕ್ಷ್ಮಿ ದರ್ಶನ ಅವರನ್ನು ಭೇಟಿ ಮಾಡಿದ್ದಾರೆ.