ಬೆಳಗಾವಿ : ಬೆಳಗಾವಿಯಲ್ಲಿ ವಿಚಿತ್ರವಾದ ಘಟನೆ ಒಂದು ನಡೆದಿದ್ದು, ಪ್ರಿಯಕರ ಜೊತೆ ಪ್ರೇಯಸಿ ಪರಾರಿ ಆಗಿದ್ದಾಳೆ. ಹಾಗಾಗಿ ತಂದೆ ಮಗಳ ತಿಥಿ ಮಾಡಿದ್ದು, ಮಗಳು ತಮ್ಮ ಪಾಲಿಗೆ ಸತ್ತಾಳೆ ಎಂದು ತಂದೆ ತಿಥಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗದ ನಾಗರಾಳ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಊರಿನ ತುಂಬಾ ಮಗಳು ಸತ್ತಳೆಂದು ಶ್ರದ್ಧಾಂಜಲಿ ಬ್ಯಾನರ್ ಹಾಕಿಸಿ ತಂದೆ ತಿಥಿ ಊಟ ಮಾಡಿಸಿದ್ದಾರೆ. ಪ್ರೀತಿಸಿದ ಹುಡುಗನೊಂದಿಗೆ ಸುಶ್ಮಿತಾ ಮನೆ ಬಿಟ್ಟು ಓಡಿ ಹೋಗಿದ್ದಾಳೆ ಈ ಒಂದು ಕಾರಣಕ್ಕೆ ತಂದೆ ಈ ರೀತಿ ಬ್ಯಾನರ್ ಹಾಕಿ ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ. ಗ್ರಾಮದ ವಿಠ್ಠಲ್ ಬಸ್ತಾವಾಡ ಯುವಕನೊಂದಿಗೆ ಸುಶ್ಮಿತಾ ಪ್ರೀತಿಯಲ್ಲಿ ಬಿದ್ದಿದ್ದಳು.ಮಗಳು ಓಡಿ ಹೋಗಿದ್ದರಿಂದ ಮನನೊಂದು ತಂದೆ ಈ ಒಂದು ತಿಥಿ ಊಟ ಮಾಡಿಸಿ ಊರಿಗೆ ಊಟ ಹಾಕಿಸಿದ್ದಾರೆ.