ಬೆಂಗಳೂರು : ರಾಜ್ಯದಲ್ಲಿ ಇದೆ ಅವಧಿಯಲ್ಲಿ ಕಾಂಗ್ರೆಸ್ ಆಡಳಿತ ಕೊನೆಯಾಗಲಿದ್ದು, ಜನ್ಮ ಜನ್ಮದಲ್ಲೂ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಸ್ಫೋಟಕವಾದ ಭವಿಷ್ಯ ನುಡಿದಿದ್ದಾರೆ.
ಹಾಸನಾಂಬ ದೇವಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವಧಿ ಇದೇ ಕೊನೆ, ಇದಾದ್ಮೇಲೆ ಜನ್ಮದಲ್ಲೂ ಅಧಿಕಾರಕ್ಕೆ ಬರಲ್ಲ ಅಂತ ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಎಲ್ಲಾ ರಾಜಕೀಯದವರು ಗೊಂದಲದಲ್ಲಿ ಸಿಲುಕಲಿದ್ದು ಬಹಳಷ್ಟು ಜನ ಕಿತ್ತಾಡುತ್ತಾರೆ. ಸ್ಥಾನ ಪಲ್ಲಟ ಮಾಡಿಕೊಳ್ಳಲಿದ್ದಾರೆ. ಇಡೀ ಜಗತ್ತಿನ ಇತಿಹಾಸ ಪುಟದಲ್ಲಿ ಕರ್ನಾಟಕ ರಾಜ್ಯ ಕುರ್ಚಿಗಾಗಿ ಒಡೆದಾಡಿಕೊಳ್ಳುವುದರಲ್ಲಿ ಹೆಸರುವಾಸಿಯಾಗುತ್ತೆ. ಸಂಕ್ರಾಂತಿ ಒಳಗಡೆ ಕೇತು ಮತ್ತು ಸೂರ್ಯ ರಾಹು ಜೊತೆಗೆ ಜರುಗಲಿದ್ದು ಬಹಳ ದೊಡ್ಡ ಗಲಾಟೆಗಳು ನಡೆಯುತ್ತವೆ. ಇದರ ಜೊತೆಗೆ ಸ್ಥಾನ ಪಲ್ಲಟ, ಪಕ್ಷಪಾತ, ಭೇದ ಭಾವ ಆಗಲಿದೆ ಎಂದರು.
ಇದು ಕೊನೆಯ ಹಂತ, ಮುಂದಿನ ದಿನಗಳಲ್ಲಿ ಪ್ರಳಯದ ಆಗುತ್ತೆ. ಉತ್ತರ ಭಾರತ, ಉತ್ತರ ಕರ್ನಾಟಕ ಭಾಗ ಮುಳುಗಡೆ ಆಗಲಿವೆ. ಕರ್ನಾಟಕ ಮೂರು ಭಾಗ, ಭಾರತ ದೇಶ ಎರಡು ಭಾಗ ಆಗುತ್ತದೆ. ಇದಕ್ಕೆಲ್ಲ ಮುನ್ಸೂಚನೆಯಾಗಿದೆ ಇದೇ ಕೊನೆಯ ವಿಶೇಷವಾದ ಸಂದರ್ಭವಾಗಿದ್ದು ಮುಂದೆ ಆಗುವ ಉಗ್ರಸ್ವರೂಪದ ಬಗ್ಗೆ ತಾಯಿ ಸೂಚನೆ ಕೊಟ್ಟಿದ್ದಾಳೆ ಎಂದಿದ್ದಾರೆ.
75 ವರ್ಷ ತುಂಬಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ. ಮೋದಿ ಅವರು ದೇಶದ ರಕ್ಷಾ ಕವಚವಾ ಆಗಿದ್ದಾರೆ. ಮುಂದೆ ಒಬ್ಬ ಸನ್ಯಾಸಿ ದೇಶದ ಪ್ರಧಾನಿ ಆಗಲಿದ್ದು, ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಬ್ರಹ್ಮಚಾರಿ ಪ್ರಧಾನಿ ಆಗದಿದ್ದರೆ ಇಡೀ ಜಗತ್ತಿಗೆ ಶನಿ ಪ್ರವೇಶ ಆಗುತ್ತೆ ಎಂದು ಆತಂಕಕಾರಿ ಭವಿಷ್ಯ ನುಡಿದರು.