ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಡಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಮೌಲ್ಯದ ಸೈಟ್ಗಳನ್ನು ಈಗಾಗಲೇ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕೋಟಿ ಕೋಟಿ ಮೌಲ್ಯದ ಮುಟ್ಟುಗೋಲು ಹಾಕಿಕೊಂಡಿದ್ದು, ಇಡಿ ಪಡೆದಿರುವ ಸೈಟ್ಗಳ ದಾಖಲೆ ಇದೀಗ ಬೆಚ್ಚಿ ಬೀಳಿಸುತ್ತೆ.
ಸುಮಾರು 59ಕ್ಕೂ ಹೆಚ್ಚು ಸೈಟ್ಗಳನ್ನು ಇಡಿ ತಂಡ ವಶಕ್ಕೆ ಪಡೆದುಕೊಂಡಿದೆ. 60 ಕೋಟಿ ಮೌಲ್ಯದ ಸೈಟ್ ಗಳನ್ನ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದೆ. ಕಾಂಗ್ರೆಸ್ ಮುಖಂಡ ಪಾಪಣ್ಣ ಅವರಿಂದ 31 ಸೈಟ್, ಮೈಸೂರಿನ ವಿಜಯನಗರದ 4ನೇ ಹಂತದಲ್ಲಿರುವ ಸೈಟ್ 59 ಸೈಟ್ ಗಳನ್ನ ಮುಟ್ಟುಗೊಲು ಹಾಕಿಕೊಂಡಿದೆ.
ಅಲ್ಲದೆ ಮನೆ ಕೆಲಸದವನ ಹೆಸರಿನಲ್ಲೂ ಕೂಡ ಕೋಟಿ ಕೋಟಿ ಆಸ್ತಿ ಮಾಡಿದ್ದ ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ, ಅತ್ತೆ, ಮಾವ ಬಾಮೈದ ಹೆಸರಿನಲ್ಲಿ ಕೂಡ ಕೋಟಿ ಕೋಟಿ ಆಸ್ತಿ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಮರಿಗೌಡಗು ಕೂಡ ಸೈಟ್ ಗಳು ಮಂಜೂರಾಗಿವೆ. ಈ ಕುರಿತು ಕೋರ್ಟಿಗೆ ಇಡಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಲಿದ್ದಾರೆ.