ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿ ಕನಿಷ್ಠ ಸವಲತ್ತು ನೀಡದ ಆರೋಪ ವಿಚಾರವಾಗಿ ಕೋರ್ಟ್ ಗೆ ದರ್ಶನ್ ಪರ ವಕೀಲರು ಸಲ್ಲಿಸಿದ ವಿಚಾರಣೆ ನಡೆಯಿತು. ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ವಾದ ಪ್ರತಿವಾದ ಆಲಿಸಿ ನಾಳೆಗೆ ಆದೇಶ ಕಾಯ್ದೆಸಿದರು.
ಪ್ರಾಸಿಕ್ಯೂಷನ್ ವಾದಕ್ಕೆ ದರ್ಶನ್ ಪರ ವಕೀಲ ಸುನಿಲ್ ಪಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ನಿಂದನೆ ಅಪರಾಧ ಘಟಿಸಿದೆಯೇ ಇಲ್ಲವೇ ಪರಿಶೀಲಿಸಬೇಕು. ದರ್ಶನ್ ಸಲ್ಲಿಸಿದ ಮೆಮೊ ಸಂಬಂಧ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಜಡ್ಜ್ ಖುದ್ದು ಪರಿಶೀಲಿಸಿದರೆ ಪ್ರಾಸಿಕ್ಯೂಷನ್ ಗೆ ಭಯ ಏಕೆ? ಸವಲತ್ತು ನೀಡಿದೆಯೋ ಇಲ್ಲವೋ ಕೋರ್ಟ್ ಪರಿಶೀಲಿಸಬೇಕು ಎಂದು ಕೇಂದ್ರ ಸರ್ಕಾರದ ಮಾರ್ಗಸೂಚಿ ಉಲ್ಲೇಖಿಸಿ ಸುನಿಲ್ ವಾದಿಸಿದರು. ಆಗ ಕೇಂದ್ರದ ಮಾರ್ಗ ಸೂಚಿ ರಾಜ್ಯಕ್ಕೆ ಅನ್ವಯ ಆಗುವುದಿಲ್ಲ ಎಂದು ಎಸ್ ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಜಡ್ಜ್ ಗೆ ಬೇರೆ ಕೆಲಸಗಳು ಇರುತ್ತವೆ ಎಂದು ತಿಳಿಸಿದರು. ಬಳಿಕ ಕೋರ್ಟ್ ಸಿಆರ್ಪಿಸಿ 310 ಅರ್ಜಿಯ ಬಗ್ಗೆ ನಾಳೆಗೆ ಆದೇಶ ಕಾಯ್ದಿರಿಸಿತು.