ಬೆಂಗಳೂರು : ಬೆತ್ತನಗೆರೆ ಶಂಕರ್ ಕೊಲೆಗೆ ಸಂಚು ರೂಪಿಸಿದ್ದವರನ್ನು ಇದೀಗ ಅರೆಸ್ಟ್ ಮಾಡಲಾಗಿದೆ. ಸಿಸಿಬಿ ಪೊಲೀಸರು ಕಾಂಗ್ರೆಸ್ ಮುಖಂಡ ಕಿರಣ್ ಸೇರಿದಂತೆ ಹಲವು ರೌಡಿಶೀಟರ್ ಗಳನ್ನು ಮಾಡಿದ್ದಾರೆ. ಹಾಡ್ಯಾಳು ದೇವೇಂದ್ರಪ್ಪ ಪುತ್ರ ಕಾಂಗ್ರೆಸ್ ಮುಖಂಡ ಕಿರಣ್ ಸೇರಿದಂತೆ ಹಲವು ರೌಡಿಶೀಟರ್ ಗಳನ್ನು ಈಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕಳೆದ 15 ವರ್ಷದ ಹಿಂದೆ ಹಾಡ್ಯಾಳು ದೇವೇಂದ್ರಪ್ಪ ಅಲಿಯಾಸ್ ದೇವಿ ಕೊಲೆಯಾಗಿತ್ತು. ಹಾಡ್ಯಾಳು ದೇವೇಂದ್ರಪ್ಪನನ್ನು ಬೆತ್ತನಗೆರೆ ಶಂಕರ್ ಕೊಲೆ ಮಾಡಿದ್ದ. ತಂದೆಯನ್ನು ಕೊಂದಿದ್ದ ಬೆತ್ತನಗೆರೆ ಶಂಕರ್ ಕೊಲೆಗೆ ಪುತ್ರ ಕಿರಣ್ ಸ್ಕೆಚ್ ಹಾಕಿದ್ದಾರೆ. ರೌಡಿಶೀಟರ್ ಗಳಾದ ತ್ಯಾಮಗೊಂಡ್ಲು ರೌಡಿಗಳಾದ ಶರತ್, ರಾಜೇಶ್ ತಾವರೆಕೆರೆ ರೌಡಿಶೀಟರ್ ಭರತ್ ಅಲಿಯಾಸ್ ಕಾಗೆ ಸೇರಿದಂತೆ ಹಲವರು ಬೆತ್ತನಗೆರೆ ಶಂಕರ್ ಕೊಲೆಗೆ ಸ್ಕೆಚ್ ಹಾಕಿದ್ದರು. ಮೂರು ನಾಲ್ಕು ಬಾರಿ ಶಂಕರನ ಮನೆ ಬಳಿ ರೌಂಡ್ಸ್ ಹಾಕಿದ್ದರು. ವಿಚಾರ ತಿಳಿದು ಸಿಸಿಬಿ ಪೊಲೀಸರು ಕಿರಣ್ ಸೇರಿದಂತೆ ಆರೋಪಿಳನ್ನು ಅರೆಸ್ಟ್ ಮಾಡಿದ್ದಾರೆ.