ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಸಹ ನಿನ್ನೆಯಿಂದ ಈ ಒಂದು ಸಮೀಕ್ಷೆ ಆರಂಭವಾಗಿದೆ. ಈ ಒಂದು ಸಮೀಕ್ಷೆಗೆ ರಾಜ್ಯ ಸರ್ಕಾರ ಶಿಕ್ಷಕರನ್ನು ನೇಮಕ ಮಾಡಿದ್ದು, ಆದರೆ ಇದೀಗ ಮೈಸೂರಿನಲ್ಲಿ ನೇಮಕಗೊಂಡ ಸಿಬ್ಬಂದಿಗಳು ಸಮೀಕ್ಷೆಗೆ ತಾವು ಬರದೇ ವಿದ್ಯಾರ್ಥಿಗಳನ್ನು ಕಳುಹಿಸಿರುವ ಘಟನೆ ವರದಿಯಾಗಿದೆ.
ಮೈಸೂರಿನಲ್ಲಿ ಜಾತಿಗಣತಿಯ ವೇಳೆ ವಿದ್ಯಾರ್ಥಿಗಳನ್ನು ಬಳಕೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಸರ್ವೆ ವೇಳೆ ವಿದ್ಯಾರ್ಥಿಗಳಿಗೆ ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ ಪ್ರಶ್ನೆಗಳಿಗೆ ಯುವಕರು ಸೂಕ್ತವಾದ ಉತ್ತರ ನೀಡಲು ತಡಬಡಿಸಿದ್ದಾರೆ. ಹಾಗಾಯಗಿ ಯುವಕರಿಗೆ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.ವಿದ್ಯಾರ್ಥಿಗೆ ಕಾಲೇಜು ಎಂದು ತಡೆಯರು ಪ್ರಶ್ನೆ ಮಾಡಿದ್ದಾರೆ.
ಆಗ ವಿದ್ಯಾರ್ಥಿಗಳು ನಮ್ದು ಮಹಾರಾಜ ಕಾಲೇಜು ಅಂತ ಹೇಳಿದ್ದಾರೆ. ಈ ವೇಳೆ ಗಣತಿಗೆ ನಿಯೋಜಿಸಿದ ಸಿಬ್ಬಂದಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಈ ಕುರಿತು ವಿಡಿಯೋ ಮಾಡಿದ್ದು ವೈರಲ್ ಆಗಿದೆ. ಇತರ ನೀವು ವಿದ್ಯಾರ್ಥಿಗಳನ್ನು ಸರ್ವೆಗೆ ಕಳುಹಿಸೋಕೆ ಅವಕಾಶ ಇದೆಯಾ ಎಂದು ಸ್ಥಳೀಯರು ಸಿಬ್ಬಂದಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.