ಬೆಂಗಳೂರು : ಮಧ್ಯಪ್ರದೇಶ ರಾಜಸ್ಥಾನದಲ್ಲಿ ಕಿಲ್ಲರ್ ಸಿರಪ್ ಗೆ 12 ಮಕ್ಕಳು ಬಲಿಯಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ, ಇದೀಗ ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ರಾಜ್ಯದಲ್ಲಿ ಎಲ್ಲಾ ಬ್ರಾಂಡ್ ಸಿರಪ್ ಗಳ ಸ್ಯಾಂಪಲ್ ಗಳ ಸಂಗ್ರಹಕ್ಕೆ ಮುಂದಾಗಿದ್ದು, ಸ್ಯಾಂಪಲ್ ಗಳನ್ನು ಸಂಗ್ರಹಿಸಿ ತಪಾಸಣೆಗಾಗಿ ಲ್ಯಾಬ್ ಗೆ ರವಾನಿಸಲಾಗಿದೆ.
ಸದ್ಯ ರಾಜ್ಯದಲ್ಲಿ ಕೋಲ್ಡ್ರಿಫ್ ಸಿರಪ್ ಸರಬರಾಜು ಆಗುತ್ತಿಲ್ಲ. ತಮಿಳುನಾಡಿನಲ್ಲಿ ಸರಬರಾಜು ಆಗಿರುವ ಕೊಲ್ಡ್ರಿಫ್ ಔಷಧಿ ಹೀಗಾಗಿ ಉಳಿದ ಕಂಪನಿಗಳ ಮೇಲು ಹದ್ದಿನ ಕಣ್ಣು ಇಡಲಾಗಿದೆ. ಪೋಷಕರಿಗೆ ಕೋಲ್ಡ್ರಿಫ್ ಸಿರಪ್ ಖರೀದಿ ಮಾಡದಂತೆ ಸೂಚನೆ ನೀಡಲಾಗಿದೆ. ವೈದ್ಯರ ಸಲಹೆ ಪಡೆದು ಮಕ್ಕಳಿಗೆ ಸಿರಪ್ ನೀಡುವಂತೆ ಸೂಚನೆ ಕೊಡಲಾಗಿದೆ.