ಕರ್ನಾಟಕ-ಆಂಧ್ರ ಗಡಿಭಾಗದ ದೇವರಗುಡ್ಡದಲ್ಲಿ ನಡೆದ ಬಡಿಗೆ ಬಡಿದಾಟದ ಜಾತ್ರೆ ವೇಳೆ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ದೇವರಗುಡ್ಡದ ಮಾಳಮಲ್ಲೇಶ್ವರ ಸನ್ನಿಧಿಯಲ್ಲಿ ನಡೆದ ವಿಶಿಷ್ಟ ಜಾತ್ರೆಯಲ್ಲ ಬಡಿಗೆ ಹಿಡಿದು ಬಡಿದಾಡುತ್ತಾ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಉತ್ಸವ ಮೂರ್ತಿ ತಮ್ಮ ಊರುಗಳಿಗೆ ಒಯ್ಯಲು ನಡೆದ ಬಡಿದಾಟ ನಡೆದಿದೆ.
ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದ ಹಳ್ಳಿಗಳಾದ ಅರಕೇರ-ನೇರಣಗಿ ಗ್ರಾಮಸ್ಥರ ನಡುವೆ ಬಡಿದಾಟ ನಡೆದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.