Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM

ಅಡುಗೆ ಅನಿಲದ ಬಿಕ್ಕಟ್ಟು: ಸೆಪ್ಟೆಂಬರ್ 2025ರಲ್ಲೇ ಜ್ಯೋತಿಷಿ ಮಾಡಿದ್ದ ಭವಿಷ್ಯವಾಣಿ ಈಗ ನಿಜವಾಯಿತೇ?

13/03/2026 10:01 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರು : ನೋಂದಣಿಗೆ ಅರ್ಜಿ ಆಹ್ವಾನ
KARNATAKA

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ತಯಾರು : ನೋಂದಣಿಗೆ ಅರ್ಜಿ ಆಹ್ವಾನ

By kannadanewsnow5703/10/2025 11:10 AM

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ಸಿದ್ಧಪಡಿಸಬೇಕಾಗಿರುವುದರಿಂದ ಅರ್ಹರಿಂದ ನೋಂದಾಯಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತಾ ದಿನಾಂಕ 01.11.2025 ಕ್ಕೆ ಅನ್ವಯಿಸುವಂತೆ ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯು ನೂತನವಾಗಿ ಸಿದ್ಧಪಡಿಸುವ ಕಾರ್ಯವು ಈಗಾಗಲೇ ಪ್ರಾರಂಭವಾಗಿದೆ. ಈ ಹಿಂದಿನ ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಮತದಾರರು ಸಹ ನಮೂನೆ 19 ರಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ದಪಡಿಸುವಿಕೆಗೆ ವೇಳಾಪಟ್ಟಿ:

06.11.2025 (ಗುರುವಾರ) ರಂದು ಅರ್ಜಿ ನಮೂನೆ 19 ರಲ್ಲಿ ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನ.
25.11.2025 (ಮಂಗಳವಾರ) ರಂದು ಕರಡು ಮತದಾರರ ಪಟ್ಟಿ ಪ್ರಕಟಿಸುವ ದಿನ.
25.11.2025 (ಮಂಗಳವಾರ) ರಿಂದ 10.12.2025 (ಬುಧವಾರ) ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳಿಗಾಗಿ ನಿಗಧಿಪಡಿಸಿದ ಅವಧಿ.
30.12.2025 (ಮಂಗಳವಾರ) ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ದಿನ.

ಭಾರತ ಚುನಾವಣಾ ಆಯೋಗವು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರನ್ನು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಿಸಿದೆ. ಈ ಚುನಾವಣಾ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಭಾಗದ ಎಲ್ಲಾ ಜಿಲ್ಲಾಧಿಕಾರಿಗಳನ್ನು, ಆಯುಕ್ತರು ಮಹಾನಗರ ಪಾಲಿಕೆ ಕಲಬುರಗಿ ಹಾಗೂ ಬಳ್ಳಾರಿ, ಕಲಬುರಗಿ ವಿಭಾಗದ ಆಯಾ ಉಪ ವಿಭಾಗಕ್ಕೆ ಸಂಬAಧಪಟ್ಟ ಎಲ್ಲಾ ಸಹಾಯಕ ಆಯುಕ್ತರು, ವಿಭಾಗದ ಎಲ್ಲಾ ಸಂಬAಧಪಟ್ಟ ತಾಲೂಕಿನ ತಹಶೀಲ್ದಾರರನ್ನು ಸಹಾಯಕ ಮತದಾರರ ನೋಂದಣಾಧಿಕಾರಿಯನ್ನಾಗಿ ನೇಮಿಸಿದೆ.

ಹೆಸರು ನೋಂದಾಯಿಸಲು ಮಾರ್ಗಸೂಚಿ:

ಭಾರತದ ಪ್ರಜೆಯಾಗಿರುವ, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರುವ ಹಾಗೂ 1ನೇ ನವೆಂಬರ್ 2025 ಕ್ಕೆ ಮೊದಲ 6 ವರ್ಷಗಳ ಅವಧಿಯಲ್ಲಿ ಸೆಕೆಂಡರಿ ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆ ಇಲ್ಲದ ನಿರ್ದಿಷ್ಟಪಡಿಸಿದಂತಹ ರಾಜ್ಯದೊಳಗಿನ ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಒಟ್ಟು ಕನಿಷ್ಠ 3 ವರ್ಷ ಬೋಧನಾ ವೃತಿಯಲ್ಲಿ ನಿರತವಾಗಿರುವ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ತನ್ನ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ನಿರ್ದಿಷ್ಟಪಡಿಸಿದ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯು ಮೊದಲನೇ ಅನುಸೂಚಿಯಲ್ಲಿ ತಿಳಿಸಲಾದ ಅಧಿಕಾರಿಗಳ ಬಳಿ ಇರುತ್ತದೆ.

ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಯು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗಾಗಿ ಪರಿಗಣಿಸತಕ್ಕದ್ದಲ್ಲ. ಸಂಸ್ಥೆಯ ಮುಖ್ಯಸ್ಥರು ಅವರ ಸಿಬ್ಬಂದಿಯವರ ಎಲ್ಲಾ ಅರ್ಜಿಗಳನ್ನು ಒಟ್ಟಾಗಿ ಮತದಾರರ ನೋಂದಣಾಧಿಕಾರಿಗಳಿಗೆ ಕಳುಹಿಸಬಹುದು. ಒಂದೇ ಕುಟಂಬದ ಎಲ್ಲಾ ಸದಸ್ಯರು ನಮೂನೆ 19 ರಲ್ಲಿ ಅರ್ಜಿಗಳನ್ನು ಕುಟುಂಬ ಯಾವುದಾದರೂ ಸದಸ್ಯರು ಸಲ್ಲಿಸಬಹುದು ಹಾಗೂ ಪ್ರತಿ ಸದಸ್ಯನಿಗೆ ಸಂಬAಧಿಸಿದAತೆ ಮೂಲ ಪ್ರಮಾಣ ಪತ್ರಗಳನ್ನು ಒದಗಿಸಿ, ಪ್ರಮಾಣ ಪತ್ರವನ್ನು ಪರಿಶೀಲಿಸಿಕೊಳ್ಳಬಹುದು.

ಅರ್ಜಿಯಲ್ಲಿನ ತಪ್ಪು ಅಥವಾ ತಪ್ಪೆಂದು ಅವನು ತಿಳಿದಿರುವ ಅಥವಾ ನಂಬುವAತಹ ಅಥವಾ ಸತ್ಯವೆಂದು ನಂಬಲಾಗದಿರುವAತಹ ಹೇಳಿಕೆಗಳನ್ನು ಅಥವಾ ಘೋಷಣೆಗಳನ್ನು ಮಾಡುವ ಯಾವುದೇ ವ್ಯಕ್ತಿಯನ್ನು ಪ್ರಜಾಪ್ರಾತಿನಿಧ್ಯ ಅಧಿನಿಯಮ 1950 ರ 31 ನೇ ಪ್ರಕರಣದ ಮೇರೆಗೆ ಶಿಕ್ಷಗೆ ಗುರಿಪಡಿಸಲಾಗುವುದು.
ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗ ಬಯಸುವ ಪ್ರತಿಯೊಬ್ಬರು ಅರ್ಜಿ ನಮೂನೆ 19 ನ್ನು ಭರ್ತಿಮಾಡಿ ಅದರೊಂದಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ 1 ನೇ ನವೆಂಬರ್ 2025 ಕ್ಕೆ ಮೊದಲು 6 ವರ್ಷಗಳ ಅವಧಿಯಲ್ಲಿ ಒಟ್ಟು ಕನಿಷ್ಟ 3 ವರ್ಷ ಭೋದನಾ ವೃತಿಯಲ್ಲಿ ನಿರತವಾಗಿರುವ ಬಗ್ಗೆ ಶೈಕ್ಷಣಿಕ ಸಂಸ್ಥೆಗಳಿದ ಅನುಬಂಧ – 2 ರಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು.

ಯಾವುದೇ ವ್ಯಕ್ತಿ ಅಂಚೆ ಮೂಲಕ ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು, ಗೊತ್ತುಪಡಿಸಿದ ಅಧಿಕಾರಿಗೆ ಸಲ್ಲಿಸಿದಲ್ಲಿ ಅಂತಹ ಅರ್ಜಿದಾರರಿಗೆ ಗೊತ್ತು ಪಡಿಸಿದ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡುತ್ತಾರೆ. ವಿಚಾರಣೆಗೆ ಹಾಜರಾಗದೇ ಅಥವಾ ದಾಖಲೆಗಳನ್ನು ಹಾಜರುಪಡಿಸದಿದ್ದಲ್ಲಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.

ಬಲ್ಕ (ಗುಚ್ಚಗಳಲ್ಲಿ) ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಆಯೋಗವು ಮುಂಬರುವ ದಿನಗಳಲ್ಲಿ ನಮೂನೆ 19 ರ ಅರ್ಜಿಗಳನ್ನು ಇಆರ್ಎಂಎಸ್ (ಇಖಒS) ನಲ್ಲಿ ಅಳವಡಿಸಲು ಉದ್ದೇಶಿಸಿರುತ್ತಾರೆ.

ಕರ್ನಾಟಕ ಈಶಾನ್ಯ ಶಿಕ್ಷಕರ ಮತದಾರರ ಪಟ್ಟಿಗೆ ಸಂಬ0ಧಿಸಿದAತೆ ಆಕ್ಷೇಪಣೆÀಗಳು ಇದ್ದಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಮತ್ತು ಸಂಬ0ಧಪಟ್ಟ ವಿಧಾನಸಭಾ ಮತಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಾರ್ಯಾಲಯದಲ್ಲಿ (ಮಹಾನಗರ ಪಾಲಿಕೆ ಹಾಗೂ ತಹಸೀಲ್ ಕಾರ್ಯಾಲಯದಲ್ಲಿ) ನಿಗದಿಪಡಿಸಿದ ಕಾಲಮಿತಿಯೊಳಗೆ ಸಲ್ಲಿಸಬಹುದಾಗಿದೆ.

ಅರ್ಹ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಿ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಡು ಸುಭದ್ರ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Preparation of voters' list for North-East Teachers' Constituency: Applications invited for registration
Share. Facebook Twitter LinkedIn WhatsApp Email

Related Posts

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM2 Mins Read

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM3 Mins Read

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM2 Mins Read
Recent News

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

13/03/2026 10:04 AM

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM

ಅಡುಗೆ ಅನಿಲದ ಬಿಕ್ಕಟ್ಟು: ಸೆಪ್ಟೆಂಬರ್ 2025ರಲ್ಲೇ ಜ್ಯೋತಿಷಿ ಮಾಡಿದ್ದ ಭವಿಷ್ಯವಾಣಿ ಈಗ ನಿಜವಾಯಿತೇ?

13/03/2026 10:01 AM

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM
State News
KARNATAKA

ಊಟವಾದ ತಕ್ಷಣ ಈ ತಪ್ಪು ಮಾಡುತ್ತಿದ್ದೀರಾ? ಎಚ್ಚರ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು!

By kannadanewsnow5713/03/2026 10:04 AM KARNATAKA 2 Mins Read

ನಮ್ಮ ದೇಹವು ಒಂದು ನಿರ್ದಿಷ್ಟ ‘ಜೈವಿಕ ಗಡಿಯಾರ’ದ (Circadian Rhythm) ಪ್ರಕಾರ ಕಾರ್ಯನಿರ್ವಹಿಸುತ್ತದೆ. ರಾತ್ರಿಯ ಸಮಯದಲ್ಲಿ ನಮ್ಮ ಚಯಾಪಚಯ ಕ್ರಿಯೆ…

ನಿಮಗೆ ‘ಸ್ತ್ರೀ ಶಾಪ’ದಿಂದ ಆಗುವ ಸಮಸ್ಯೆಗಳೇನು.? ಇಲ್ಲಿದೆ ಮಾಹಿತಿ ಓದಿ!

13/03/2026 10:02 AM

ALERT : ಮಣ್ಣಿನ ಮಡಕೆಯಲ್ಲಿ ನೀರು ಕುಡಿಯುವವರು ತಪ್ಪದೇ ಇದನ್ನೊಮ್ಮೆ ಓದಲೇಬೇಕು !

13/03/2026 9:47 AM

ತಾತನ ಆಸ್ತಿ ಮೊಮ್ಮಕ್ಕಳ ಹೆಸರಿಗೆ ವರ್ಗಾವಣೆ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

13/03/2026 9:38 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.