ಬೆಂಗಳೂರು : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೈಲಿಗೆ ಹೋಗುವ ದಿನ ಹತ್ತಿರ ಬಂದಿದೆ ಅವರು ಜೈಲಿಗೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಜೈಲಿಗೆ ಹಾಕಿಸಬೇಕು ಎಂದು HD ಕುಮಾರಸ್ವಾಮಿ ಕುಟುಂಬ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ HD ಕುಮಾರಸ್ವಾಮಿ ಮೊದಲಿನಿಂದಲೂ ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನನ್ನ ವಿರುದ್ಧ ಅವರ ಕುಟುಂಬದಿಂದ ದೊಡ್ಡ ಷಡ್ಯಂತರ ನಡೆದಿದೆ.ಜೈಲಿಗೆ ಹೋಗೋ ದಿನ ಹತ್ತಿರ ಬಂದಿದೆ ಎಂದಿದ್ದಾರೆ. ಹಬ್ಬ ಆಗಲಿ ಅವರು ಏನೇನು ಹೇಳುತ್ತಾರೆ ಎಲ್ಲದಕ್ಕೂ ಉತ್ತರ ಕೊಡುತ್ತೇನೆ. ಮೊದಲಿನಿಂದಲೂ ಕೂಡ ಅವರ ಕುಟುಂಬ ನನ್ನ ಮೇಲೆ ದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ.
ಇದು ಇವತ್ತಿಂದಲ್ಲ ಈ ಹಿಂದೆ ನನ್ನ ತಂಗಿ ಮೇಲೆ, ತಮ್ಮನ ಮೇಲೆ, ಎಲ್ಲರ ಮೇಲು ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ಚೀಫ್ ಮಿನಿಸ್ಟರ್ ಆದಾಗ ಜೈಲಿಗೆ ಹಾಕಿಸೋಕೇ ಪ್ರಯತ್ನ ಮಾಡಿದರು. ಅದಾದ್ಮೇಲೆ ಬೇಕಾದಷ್ಟು ಷಡ್ಯಂತ್ರ ಮಾಡಿದರು ಎಲ್ಲದಕ್ಕೂ ದಸರಾ ಹಬ್ಬ ಆದಮೇಲೆ ಉತ್ತರ ಕೊಡುತ್ತೇನೆ. ಪಾಪ ಕುಮಾರಸ್ವಾಮಿ ಅವರಿಗೆ ಒಳ್ಳೆಯದಾಗಲಿ ಎಂದು ತಿರುಗೇಟು ನೀಡಿದ್ದಾರೆ.
ಇದೆ ವೇಳೆ ಕುಮಾರಸ್ವಾಮಿ ಚರ್ಚೆ ಮಾಡಲು ಡಿಬೇಟ್ಗೆ ಬರಲಿ ಎಂದು ನೇರವಾಗಿ ಪಂಥಾಹ್ವಾನ ನೀಡಿದ್ದಾರೆ. ಅವರನ್ನು ಪಕ್ಕದಲ್ಲಿ ಕೂರಿಸಿ ಚರ್ಚೆ ಮಾಡೋಣ. ಈ ಹಿಂದೆ ಸಾತನೂರಲ್ಲಿ 20-20 ಪಂದ್ಯ ನಡೆದಿತ್ತು. ಅಸೆಂಬ್ಲಿ ಗೆ ಕರೆದಿದ್ದೆ ಪಾಪ ಪಾರ್ಲಿಮೆಂಟ್ ಹೋದರು. HD ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡದೆ ಚರ್ಚೆಗೆ ಬರಲಿ ನನ್ನಲ್ಲಿರುವ ಅಗಾಧ ಬಂಡಾರದಿಂದ ಎಲ್ಲವನ್ನು ತೆಗೆಯುತ್ತೇನೆ ಅವರು ಕೂಡ ಬತ್ತಳಿಕೆಯಲ್ಲಿ ಏನೇನಿದೆ ಎಲ್ಲವನ್ನು ತೆಗೆಯಲಿ. ಕುಮಾರಸ್ವಾಮಿ ಚರ್ಚೆಗೆ ನೇರವಾಗಿ ಡಿಬೇಟ್ಗೆ ಬರಲಿ ಎಂದು ಪಂಥಹ್ವಾನ ನೀಡಿದ್ದಾರೆ.