ಹಾಸನ : ಹಾಸನದಲ್ಲಿ ನಿನ್ನೆ ರಾತ್ರಿ ನಿಗೂಢವಾದ ಸ್ಪೋಟ ಸಂಭವಿಸಿ ಹಲವರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ನಿಗೂಢ ಸ್ಫೋಟಕ್ಕೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ನಿಗೂಢ ಸ್ಫೋಟ ಸಿಡಿದು ದುರಂತ ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ.
ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ಸ್ಪೋಟಕ್ಕೆ ಇಡೀ ಮನೆ ಛಿದ್ರ ಛಿದ್ರವಾಗಿದೆ. ಮನೆಯಲ್ಲಿದ್ದ ಸಿಲಿಂಡರ್ ನಿಂದ ಯಾವುದೇ ಅನಿಲ ಸೋರಿಕೆ ಆಗಿಲ್ಲ. ಅಥವಾ ಗ್ಯಾಸ್ ಗೀಸರ್ ಕೂಡ ಹಿಡಿದಿಲ್ಲ ಅನ್ನುವ ಬಗ್ಗೆ ಸದ್ಯ ಹಾಸನ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದೀಗ ಬಯಲಾಗಿದೆ.ಇನ್ನು ಸ್ಫೋಟದ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.