ಬೆಂಗಳೂರು : ರಾಜ್ಯದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಮಹಿಳೆಯ ಕೂದಲು ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ಒಂದು ಘಟನೆ ಬೆಂಗಳೂರು ನಗರ ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ನಡೆದಿದೆ. ಗಂಡನ ಮನೆಯವರು ಮಳೆಯ ಮೇಲೆ ಮೃಗೀಯ ವರ್ತನೆ ತೋರಿದ್ದಾರೆ.
ಬೆಂಗಳೂರಿನ ಆನೇಕಲ್ ಪಟ್ಟಣದ ನಾರಾಯಣಪುರದಲ್ಲಿ ಪತಿ ಅರುಣ್, ಅತ್ತೆ ಪ್ರಭಾವತಿ, ಮಾವ ಚೌಡಪ್ಪ ಮೂವರು ಸೇರಿಕೊಂಡು ಮಹಿಳೆಯ ಮೇಲೆ ಹಲ್ಲೆ ಮಾಡಿದ್ದಾರೆ. ಅರುಣ್ ಪತ್ನಿ ಶ್ರೀಲಜಾ ಮೇಲೆ ಗಜೇಂದ್ರ, ನರಸಿಂಹಮೂರ್ತಿ, ಲಕ್ಷ್ಮಿ, ಚೌಡಪ್ಪ ಅವರು ಹಲ್ಲೆ ಮಾಡಿ ಕಾಲಿನಿಂದ ಒದ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. 5 ವರ್ಷಗಳ ಹಿಂದೆ ಅರುಣ್ ಜೊತೆ ಶ್ರೀಲಜಾ ಮದುವೆಯಾಗಿದ್ದರು. ದಂಪತಿಗಳಿಗೆ ನಾಲ್ಕು ವರ್ಷದ ಹೆಣ್ಣು ಮಗು ಕೂಡ ಇದೆ.
ಮದುವೆಯಾದ ಮೇಲು ಕೂಡ ಪತಿ ಹಾಗೂ ಪತಿಯ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಅಲ್ಲದೆ ಶ್ರೀಲಜಾ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಈ ವೇಳೆ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಕೂಡ ನಡೆದಿತ್ತು. ಕಳೆದ ಒಂದು ವಾರದ ಹಿಂದೆ ಶ್ರೀಲಜಾ ತವರು ಮನೆಗೆ ತೆರಳಿದ್ದರು. ಇದೀಗ ಮನೆಗೆ ಬಂದ ವೇಳೆ ಮನೆಗೆ ಸೇರಿಸಿದೆ ರಸ್ತೆ ಮೇಲು ಕೂದಲು ಎಳೆದಾಡಿ, ಕಾಲಿನಿಂದ ಒದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







