Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

ದೇಶದಲ್ಲಿ ಮುಂಗಾರು ಮುಂಚಿತ ಪ್ರವೇಶ: ಆದರೆ ದೆಹಲಿ, ಯುಪಿ, ರಾಜಸ್ಥಾನಕ್ಕೆ ಬಿತ್ತಾ ‘ಬಿಸಿಗಾಳಿ’ಯ ಭೀತಿ!

BIG NEWS : ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ `CM,DCM,ಸಚಿವರ ಕೊಠಡಿ ಮತ್ತು ದೂರವಾಣಿ ಸಂಖ್ಯೆಗಳ’ ಅಧಿಕೃತ ಪಟ್ಟಿ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಮಹಾನಗರ ಪಾಲಿಕೆಗಳ ಅಧಿಕಾರಿ, ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ವಿಸ್ತರಿಸಿ: ಸಿಎಂಗೆ ಸಂಘದಿಂದ ಮನವಿ
KARNATAKA

ರಾಜ್ಯದ ಮಹಾನಗರ ಪಾಲಿಕೆಗಳ ಅಧಿಕಾರಿ, ನೌಕರರಿಗೆ ಆರೋಗ್ಯ ಸಂಜೀವಿನಿ ಯೋಜನೆ ವಿಸ್ತರಿಸಿ: ಸಿಎಂಗೆ ಸಂಘದಿಂದ ಮನವಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದ ಮಹಾನಗರ ಪಾಲಿಕೆಗಳ ಅಧಿಕಾರಿ/ ನೌಕರರಿಗೆ ಆರೋಗ್ಯ ಸಂಜೀವಿನಿ ಸೌಲಭ್ಯ ವಿಸ್ತರಿಸಲು ಕೋರಿ ಮುಖ್ಯಮಂತ್ರಿಗಳಿಗೆ ಪಾಲಿಕೆಗಳ ನೌಕರರ ಪರವಾಗಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮನವಿ ಪತ್ರ ಸಲ್ಲಿಸಿದರು.

ಕರ್ನಾಟಕ ರಾಜ್ಯದ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (KASS) ಯನ್ನು ಅನುಷ್ಠಾನಗೊಳಿಸಿ ಸರ್ಕಾರವು ಆದೇಶಿಸಿರುತ್ತದೆ. ಆದರೆ ಸದರಿ ಆದೇಶದಲ್ಲಿ ಸ್ಥಳೀಯ ಸಂಸ್ಥೆಗಳ ನೌಕರರನ್ನು ಸದರಿ ಯೋಜನೆಗೆ ಒಳಪಡುವುದಿಲ್ಲವೆಂದು ತಿಳಿಸಿ ಹೊರಗಿಡಲಾಗಿರುತ್ತದೆ.

ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು (ಕಚೇರಿ ಸಿಬ್ಬಂದಿ, ಪೌರ ಕಾರ್ಮಿಕರು ನೀರು ಸರಬರಾಜು ಸಿಬ್ಬಂದಿ) ಸಕ್ಷಮ ಪ್ರಾಧಿಕಾರಗಳಿಂದ (ಕೆಪಿಎಸ್‌ಸಿ, ಪೌರಾಡಳಿತ ನಿರ್ದೇಶಕರು, ಜಿಲ್ಲಾಧಿಕಾರಿಗಳು) ನೇಮಕಾತಿ ಹೊಂದಿ ಪ್ರತಿನಿತ್ಯ ಸಾರ್ವಜನಿಕರ ಒಟ್ಟಿಗೆ ಒಡನಾಟವಿಟ್ಟುಕೊಂಡು, ತೆರಿಗೆ ವಸೂಲಾತಿ, ಸ್ವಚ್ಛತಾ ಕಾರ್ಯ, ಕುಡಿಯುವ ನೀರು ಪೂರ್ರೈಕೆ ನಗರ ಅಭಿವೃದ್ಧಿ ಕಾಮಗಾರಿಗಳು, ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವ ಕೆಲಸ, ಚುನಾವಣಾ ಕೆಲಸ, ಜನಗಣತಿ, ಜಾತಿಗಣತಿ, ವಿವಿಧ ಸಮೀಕ್ಷೆ ಕಾರ್ಯಗಳು, ಜನನ ಮತ್ತು ಮರಣ ಪತ್ರ ನೀಡುವ ಕೆಲಸ ಸೇರಿದಂತೆ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಒದಗಿಸುವ ಪ್ರಮುಖ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದು, ಕೆಲಸ ಒತ್ತಡದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಿದ್ದು, ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಚಿಕಿತ್ಸೆಗೆ ತಗಲುವ ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸದರಿ ಇಲಾಖೆ ಸಿಬ್ಬಂದಿಗಳ ಮನೋಸ್ಥೆರ್ಯ ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಆರೋಗ್ಯ ವಿಚಾರದಲ್ಲಿ ನೌಕರರ ನಡುವೆ ಯಾವುದೇ ತಾರತಮ್ಯ ತೋರುವುದು ಸೂಕ್ತವಾಗಿರುವುದಿಲ್ಲ.

ಆದುದರಿಂದ ಉಲ್ಲೇಖದಂತೆ ಜಾರಿಗೊಳಿಸಿರುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ” (THE KARNATAKA AROGYA SANJEEVINI SCHME-KASS) (POLICY FRAMEWORK) ನಗರಾಭಿವೃದ್ಧಿ ಇಲಾಖೆಯಡಿ ಬರುವ ಮಹಾನಗರ ಪಾಲಿಕೆ ಹಾಗೂ ಇತರೆ ನಗರ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಯಥಾವತ್ತಾಗಿ ವಿಸ್ತರಿಸಿ ಅನುಷ್ಠಾನಗೊಳಿಸಿದಲ್ಲಿ ಪಾಲಿಕೆ ನೌಕರರಿಗೂ ಆರೋಗ್ಯ ಸೌಲಭ್ಯವನ್ನು ಒದಗಿಸಿದಂತೆ ಆಗುತ್ತದೆ. ಅಲ್ಲದೇ ಸರ್ಕಾರ ನಿಗದಿಪಡಿಸಿರುವಂತೆ ವಂತಿಕೆಯನ್ನು ನೌಕರರೇ ಭರಿಸುವುದರಿಂದ, ಸದರಿ ಯೋಜನೆಯನ್ನು ಮಹಾನಗರಪಾಲಿಕೆಗಳ ನೌಕರರಿಗೂ ವಿಸ್ತರಿಸಬಹುದಾಗಿದ್ದು, ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ಹೆಚ್ಚಿನ ವೆಚ್ಚವುಂಟಾಗದೇ ಇರುವುದರಿಂದ ಈ ಕುರಿತು ಸೂಕ್ತ ಆದೇಶ ಹೊರಡಿಸಲು ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡಲು ಮುಖ್ಯಮಂತ್ರಿಗಳಿಗೆ ಮಹಾನಗರಪಾಲಿಕೆಗಳ ಎಲ್ಲಾ ನೌಕರರ ಪರವಾಗಿ ವಿನಂತಿಸಲಾಗುತ್ತಿದೆ ಎಂದು ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು ತಿಳಿಸಿದರು.

BREAKING: ಐಸಿಸಿ ಅಂಡರ್ -19 ವಿಶ್ವಕಪ್: 6ನೇ ಬಾರಿಗೆ ಇಂಗ್ಲೆಂಡ್ ಮಣಿಸಿ ಭಾರತ ತಂಡ ಐತಿಹಾಸಿಕ ಗೆಲುವು | ICC Under-19 World Cup

ರಾಜ್ಯ ಬಿಜೆಪಿ ನಾಯಕರಿಗೆ ಈ ತಿರುಗೇಟು ಕೊಟ್ಟ ಸಿಎಂ ಸಿದ್ಧರಾಮಯ್ಯ

Share. Facebook Twitter LinkedIn WhatsApp Email

Related Posts

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

2 Mins Read

BIG NEWS : ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ `CM,DCM,ಸಚಿವರ ಕೊಠಡಿ ಮತ್ತು ದೂರವಾಣಿ ಸಂಖ್ಯೆಗಳ’ ಅಧಿಕೃತ ಪಟ್ಟಿ.!

2 Mins Read

Rain Alert : ರಾಜ್ಯದಲ್ಲಿ ಮಳೆ ಆರ್ಭಟಕ್ಕೆ ಮತ್ತೆ ಇಬ್ಬರು ಬಲಿ : ಇನ್ನೂ 4 ದಿನ ಭಾರೀ ಮಳೆ ಮುನ್ಸೂಚನೆ.!

2 Mins Read
Recent News

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

ದೇಶದಲ್ಲಿ ಮುಂಗಾರು ಮುಂಚಿತ ಪ್ರವೇಶ: ಆದರೆ ದೆಹಲಿ, ಯುಪಿ, ರಾಜಸ್ಥಾನಕ್ಕೆ ಬಿತ್ತಾ ‘ಬಿಸಿಗಾಳಿ’ಯ ಭೀತಿ!

BIG NEWS : ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ `CM,DCM,ಸಚಿವರ ಕೊಠಡಿ ಮತ್ತು ದೂರವಾಣಿ ಸಂಖ್ಯೆಗಳ’ ಅಧಿಕೃತ ಪಟ್ಟಿ.!

ಬೆಳ್ಳಿ ಆಮದಿಗೆ ಕೇಂದ್ರ ಸರ್ಕಾರದ ಬ್ರೇಕ್: ‘ನಿರ್ಬಂಧಿತ’ ಪಟ್ಟಿಗೆ ಸೇರ್ಪಡೆ, ಇನ್ಮುಂದೆ ವಿದೇಶದಿಂದ ತರಿಸುವುದು ಸುಲಭವಲ್ಲ!

State News
KARNATAKA

ಸುಕನ್ಯಾ ಸಮೃದ್ಧಿ ಯೋಜನೆ: ಮೆಚ್ಯೂರಿಟಿಗೂ ಮುನ್ನವೇ ಹಣ ಡ್ರಾ ಮಾಡಬಹುದೇ? ನಿಯಮಗಳು ಇಲ್ಲಿವೆ!

By kannadanewsnow57 KARNATAKA 2 Mins Read

ಮಗಳ ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಬಯಸುವ ಕುಟುಂಬಗಳಲ್ಲಿ ‘ಸುಕನ್ಯಾ ಸಮೃದ್ಧಿ ಯೋಜನೆ’ (SSY) ಅತ್ಯಂತ ಜನಪ್ರಿಯ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ.…

BIG NEWS : ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ `CM,DCM,ಸಚಿವರ ಕೊಠಡಿ ಮತ್ತು ದೂರವಾಣಿ ಸಂಖ್ಯೆಗಳ’ ಅಧಿಕೃತ ಪಟ್ಟಿ.!

Rain Alert : ರಾಜ್ಯದಲ್ಲಿ ಮಳೆ ಆರ್ಭಟಕ್ಕೆ ಮತ್ತೆ ಇಬ್ಬರು ಬಲಿ : ಇನ್ನೂ 4 ದಿನ ಭಾರೀ ಮಳೆ ಮುನ್ಸೂಚನೆ.!

Women Alert : `ಪೀರಿಯಡ್ಸ್’ ಮುಂದೂಡುವ ಮಾತ್ರೆ ನುಂಗುವ ಮಹಿಳೆಯರು ತಪ್ಪದೇ ಇದನ್ನೊಮ್ಮೆ ಓದಲೇಬೇಕು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.