ಹೈದರಾಬಾದ್ : ಟಾಲಿವುಡ್ ಸ್ಟಾರ್ ಹೀರೋ ಮತ್ತು ಜನಮನ ಗೆದ್ದ ಜೂನಿಯರ್ ಎನ್ ಟಿಆರ್ ಜಾಹೀರಾತು ಚಿತ್ರೀಕರಣದ ವೇಳೆ ಗಾಯಗೊಂಡಿದ್ದಾರೆ.
ಹೈದರಾಬಾದ್’ನಲ್ಲಿ ಖಾಸಗಿ ಜಾಹೀರಾತಿನ ಚಿತ್ರೀಕರಣದ ವೇಳೆ ಅವರು ಅಪಘಾತಕ್ಕೀಡಾಗಿದ್ದು, ವೈದ್ಯಕೀಯ ತಂಡ ತಕ್ಷಣ ಅವರಿಗೆ ಮೂಲಭೂತ ಚಿಕಿತ್ಸೆ ನೀಡಿತು. ಸಧ್ಯ ಎನ್ ಟಿಆರ್ ಅವರ ಆರೋಗ್ಯ ಚೆನ್ನಾಗಿದೆ ಎಂದು ತಂಡ ತಿಳಿಸಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಸ್ತುತ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಅಭಿಮಾನಿಗಳು ನಟ ಬೇಗ ಗುಣಮುಖರಾಗಲಿ ಎಂದು ಆರೈಸಿದ್ದು, ವಿಷಯ ತಿಳಿದ ತಕ್ಷಣ ಅನೇಕ ಸೆಲೆಬ್ರಿಟಿಗಳು ಎನ್ ಟಿಆರ್’ಗೆ ಕರೆ ಮಾಡಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ.
ವಿಜಯಪುರ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 270 ಕೋಟಿ ಕೊಡಲು ಒಪ್ಪಿಗೆ: ಸಚಿವ ಎಂ.ಬಿ ಪಾಟೀಲ್
ರಾಜ್ಯದ ಜನತೆಗೆ ಗುಡ್ ನ್ಯೂಸ್: 186 ಆಸ್ಪತ್ರೆಗಳಿಗೆ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ ವಿಸ್ತರಣೆ
‘ಪರಸ್ಪರ ಹಿತಾಸಕ್ತಿ, ಸೂಕ್ಷ್ಮತೆ ಗಮನಿಸ್ತಿದ್ದೇವೆ’ : ಸೌದಿ ಅರೇಬಿಯಾ-ಪಾಕ್ ರಕ್ಷಣಾ ಒಪ್ಪಂದಕ್ಕೆ ಭಾರತ ಪ್ರತಿಕ್ರಿಯೆ