ಬೆಂಗಳೂರು : ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಕೆವೈ ನಂಜೇಗೌಡ ಆಯ್ಕೆಯನ್ನು ಎಂದು ಹೈಕೋರ್ಟ್ ಹಸಿಂದು ಗೊಳಿಸಿ ಆದೇಶ ಹೊರಡಿಸಿದೆ ಬಳಿಕ ಶಾಸಕರ ವಕೀಲರ ಮನವಿ ಪುರಸ್ಕರಿಸಿ 30 ದಿನಗಳ ಕಾಲ ಕೆ ವೈ ನಂಜೇಗೌಡ ಗೆ ಸುಪ್ರೀಂ ಕೋರ್ಟಿಗೆ ಮೇಲ್ಮಾನ್ವಿ ಸಲ್ಲಿಸಲು ಅವಕಾಶ ನೀಡಿ ತನ್ನದೇ ತೀರ್ಪಿಗೆ ತಡೆ ನೀಡಿತು ಕಾಂಗ್ರೆಸ್ ವಿರುದ್ಧ ಹರಿ ಹಾಯ್ದಿದ್ದಾರೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ವೇಳೆ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಈ ಕುರಿತು ಆರ್ ಅಶೋಕ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದು ಕಾಂಗ್ರೆಸ್ ಶಾಸಕರ ವೋಟ್ ಚೋರಿ ವಿರುದ್ಧ ಅಭಿಯಾನ ಮಾಡಲು ಈಗ ರಾಹುಲ್ ಗಾಂಧಿ ಅವರು ಮಾಲೂರಿಗೆ ಬರುತ್ತಾರಾ?
ಮಹದೇವಪುರದ ಮತದಾರರ ಪಟ್ಟಿಗೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಟುಸ್ ಪಟಾಕಿ “ಆಟಂ ಬಾಂಬ್” ಸಿಡಿಸಿದ ರೀತಿ, ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿರುವ ಅಕ್ರಮದ ಬಗ್ಗೆಯೂ ರಾಹುಲ್ ಗಾಂಧಿ ಅವರು ಸುದ್ದಿ ಗೋಷ್ಠಿ ನಡೆಸಿ “ಬಾಂಬ್” ಸಿಡಿಸುತ್ತಾರಾ?ವೋಟ್ ಚೋರ್ ಕಹಾ ಹೈ? ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಹೈ! ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಶಾಸಕರ ವೋಟ್ ಚೋರಿ ವಿರುದ್ಧ ಅಭಿಯಾನ ಮಾಡಲು ಈಗ @RahulGandhi ಅವರು ಮಾಲೂರಿಗೆ ಬರುತ್ತಾರಾ?
ಮಹದೇವಪುರದ ಮತದಾರರ ಪಟ್ಟಿಗೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಟುಸ್ ಪಟಾಕಿ "ಆಟಂ ಬಾಂಬ್" ಸಿಡಿಸಿದ ರೀತಿ, ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿರುವ ಅಕ್ರಮದ ಬಗ್ಗೆಯೂ ರಾಹುಲ್ ಗಾಂಧಿ ಅವರು ಸುದ್ದಿ ಗೋಷ್ಠಿ… pic.twitter.com/4JAZJ4cPCS
— R. Ashoka (@RAshokaBJP) September 16, 2025