Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ : ಪತಿಯೇ ಕೊಂದಿದ್ದಾನೆ ಎಂದು ಪೋಷಕರ ಆರೋಪ!

02/05/2026 10:22 AM

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಪತ್ನಿಗೆ ಅಕ್ರಮ ಸಂಬಂಧ ಹಿನ್ನೆಲೆ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ!

02/05/2026 10:14 AM

SHOCKING : ಪರಪುರಷನ ಜೊತೆಗೆ ಓಡಿ ಹೋದ ಪತ್ನಿ : ತುಮಕೂರಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ.!

02/05/2026 10:13 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ದಸರಾ ಉದ್ಘಾಟನೆ, ಜನರ ಭಾವನೆ ಅರ್ಥ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲ: ಬೊಮ್ಮಾಯಿ
KARNATAKA

ದಸರಾ ಉದ್ಘಾಟನೆ, ಜನರ ಭಾವನೆ ಅರ್ಥ ಮಾಡಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲ: ಬೊಮ್ಮಾಯಿ

By kannadanewsnow0915/09/2025 6:35 PM

ಬೆಂಗಳೂರು: ಹಾಸನ ಗಣೇಶೋತ್ಸವ ದುರಂತದಲ್ಲಿ ಮಡಿದವರಿಗೆ ಹೆಚ್ಚಿನ ಪರಿಹಾರ ನೀಡುವಲ್ಲಿಯೂ ಸಿಎಂ ಸಿದ್ದರಾಮಯ್ಯ ತುಷ್ಟೀಕರಣ ರಾಜಕೀಯ ಮಾಡುತ್ತಿದ್ದು, ಹೆಚ್ಚಿನ ಪರಿಹಾರ ನೀಡಿದರೆ ಓಲೈಕೆ ರಾಜಕೀಯಕ್ಕೆ ಏನಾದರೂ ಧಕ್ಕೆಯಾಗುತ್ತದೆಯಾ ಎಂದು ಆಲೋಚನೆ ಮಾಡುತ್ತಿದ್ದಾರೆ. ಅವರಲ್ಲಿ ಮಾನವೀಯತೆ ಸತ್ತು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಆಂಗ್ಲ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ಹಾಸನ ಗಣೇಶೋತ್ಸವ ಮೆರವಣಿಗೆಯಲ್ಲಿ ನಡೆದ ದುರಂತದಲ್ಲಿ ಜನರು ತಮ್ಮ ಕುಟುಂಬದವರ ಜೀವ ಕಳೆದುಕೊಂಡಿದ್ದಾರೆ. ಈ ಪ್ರಕರಣದಲ್ಲಿ ಅವರಿಗೆ ದೊಡ್ಡ ಪ್ರಮಾಣದ ನಷ್ಟವುಂಟಾಗಿದೆ. ತಮ್ಮ ಕೂಟುಂಬದ ಆದಾಯ ತರುವ ವ್ಯಕ್ತಿಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಹೆಚ್ಚಿನ ಪರಿಹಾರ ಕೇಳುತ್ತಿದ್ದಾರೆ. ಅವರು ಭಿಕ್ಷೆ ಬೇಡುತ್ತಿಲ್ಲ. ಸರ್ಕಾರ ಮಾನವೀಯತೆಯ ಆಧಾರದಲ್ಲಿ ಅವರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಕೋಮು ಗಲಭೆಯಲ್ಲಿ ಮೃತರಾದವರಿಗೆ, ಪ್ರಚೋದನೆಯಲ್ಲಿ ಸಾವಿಗೀಡಾದವರಿಗೆ, ವೈನಾಡಿನ ದುರಂತಕ್ಕೆ ಈಗ ಹಿಮಾಚಲ ಪ್ರದೇಶಕ್ಕೆ ಹಣ ನೀಡಿದ್ದಾರೆ. ಹಾಸನದಲ್ಲಿ ಗಣೇಶ ಮೆರವಣೆಗೆಯ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಈಗ ಹೆಚ್ಚಿನ ಪರಿಹಾರ ನೀಡಿದರೆ ತುಷ್ಡೀಕರಣದ ರಾಜಕೀಯಕ್ಕೆ ಏನಾದರೂ ಧಕ್ಕೆಯಾಗುತ್ತದೆಯಾ ಎಂದು ಆಲೋಚನೆ ಮಾಡುತ್ತಿದ್ದಾರೆ. ಮಾನವೀಯತೆ ಸತ್ತು ಹೋಗಿದೆ. ಅವರಲ್ಲಿ ನಿಜವಾಗಲೂ ಮಾನವೀಯತೆ‌ ಇದ್ದರೆ ಹೆಚ್ಚಿನ ಪರಿಹಾರ ನೀಡಿ ಎಲ್ಲ ಸಮುದಾಯದ ನಾಯಕನಾಗಲಿ ಎಂದು ಆಗ್ರಹಿಸಿದರು.

ಜನರ ಭಾವನೆ ಗೌರವಿಸಬೇಕು

ದಸರಾ ಉದ್ಘಾಟನೆ ವಿಚಾರದಲ್ಲಿ ರಾಜ್ಯ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಬೇಕಿತ್ತು. ಇದು ಜನರ ನಂಬಿಕೆ, ಸಂಪ್ರದಾಯ ಮತ್ತು ಭಾವನೆಗಳಿಗೆ ಸಂಬಂಧಿಸಿದ ವಿಷಯ. ಇದು ಕಾನೂನಿನ ವ್ಯಾಪ್ತಿಯಲ್ಲಿ ತೀರ್ಮಾನ ಮಾಡಲು ಆಗುವುದಿಲ್ಲ. ಇದು ರಾಜ್ಯ ಸರ್ಕಾರ ಮಾಡಬೇಕಿರುವ ತೀರ್ಮಾನ, ಬಾನು ಮುಷ್ತಾಕ ಅವರ ಆಯ್ಕೆ ಓಲೈಕೆ ರಾಜಕಾರಣದ ಒಂದು ಭಾಗ, ಬಾನು ಮುಷ್ತಾಕ ಅವರ ಬಗ್ಗೆ ನಮಗೆ ಗೌರವ ಇದೆ. ಆದರೆ, ದಸರಾ ಉದ್ಘಾಟನೆ ವಿಚಾರದಲ್ಲಿ ರಾಜ್ಯ ಸರ್ಕಾರ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಬಿಸಿಸಿಐ ಕ್ರಿಕೆಟ್ ಆಡಿಸಬಾರದಿತ್ತು

ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನ ತಂಡದ ಜೊತೆ ನಡೆದುಕೊಂಡ ರೀತಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸೂರ್ಯಕುಮಾರ್ ಯಾದವ ನಾಯಕನಾಗಿ ಗ್ರೌಂಡ್ ಒಳಗೂ ಹಾಗೂ ಗ್ರೌಂಡ್ ಹೊರಗೂ ಉತ್ತಮವಾಗಿ ನಡೆದುಕೊಂಡಿದ್ದಾರೆ. ತಂಡದ ಗೆಲುವನ್ನು ಭಾರತೀಯ ಯೋಧರಿಗೆ ಅರ್ಪಿಸಿದ್ದಾರೆ. ಆದರೆ, ಪೆಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನ ಜೊತೆಗೆ ಕ್ರೀಡೆ ಸೇರಿದಂತೆ ಯಾವುದೇ ರೀತಿಯ ಸಂಬಂಧ ಇಟ್ಟುಕೊಳ್ಳಬಾರದಿತ್ತು. ಈ ನಿಟ್ಟಿನಲ್ಲಿ ಬಿಸಿಸಿಐ ಪಾಕಿಸ್ತಾನದ ಜೊತೆ ಆಡದಿರಲು ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಹೇಳಿದರು.

ಪಾಟ್ ಹೋಲ್ ಡ್ರೈವ್

ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ನಾಗರಿಕರು ಪಾಟ್ ಹೋಲ್ ಡ್ರೈವ್ ಅನುಭವ ಪಡೆಯುತ್ತಿದ್ದಾರೆ‌. ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿ ಗೆ ಯಾವುದೇ ಹಣ ನೀಡುತ್ತಿಲ್ಲ. ಅತಿ ಹೆಚ್ಚು ತೆರಿಗೆ ನೀಡುತ್ತಿರುವುದು ಬೆಂಗಳೂರು. ಪ್ರತಿ ಮೂರು ತಿಂಗಳಿಗೆ ತೆರಿಗೆ ಹೆಚ್ಚಳ ಮಾಡುತ್ತಿದ್ದಾರೆ. ಜನರು ಗುಂಡಿಗಳ ಜೊತೆ ಬದುಕುವಂತಾಗಿದೆ. ಜನರು ಇದರ ವಿರುದ್ದ ದೊಡ್ಡ ಸಂಖ್ಯೆಯಲ್ಲಿ ಸರ್ಕಾರದ ವಿರುದ್ದ ಧ್ವನಿ ಎತ್ತಬೇಕು ಎಂದರು.

ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಗುಂಡಿಗಳಿವೆ. ರಾಜ್ಯ ಸರ್ಕಾರ ಬೆಂಗಳೂರಿಗೆ 1100 ಕೋಟಿ ರೂ. ನೀಡುವುದಾಗಿ ಹೇಳಿದೆ. ಅದು ಅತಿ ಸಣ್ಣ ಮೊತ್ತವಾಯಿತು. ನಾವು ಬೆಂಗಳೂರು ಅಭಿವೃದ್ಧಿಗೆ ಸಾವಿರಾರು ಕೋಟಿ ರೂ. ನೀಡಿದ್ದೇವು. ಡಿಸಿಎಂ ಡಿ.ಕೆ ಶಿವಕುಮಾರ್ ನೀಡಿರುವ ಹಣ ಯಾವುದಕ್ಕೂ ಸಾಲುವುದಿಲ್ಲ. ಸಾಮಾಜಿಕ ಜಾಲ ತಾಣದಲ್ಲಿ ಜನರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಕೇವಲ ಬ್ರ್ಯಾಂಡ್ ಬೆಂಗಳೂರು ಎಂದು ದೊಡ್ಡದಾಗಿ ಹೇಳುತ್ತಿದ್ದಾರೆ. ಬೆಂಗಳೂರಿನ ಜನ ಪ್ರತಿ ದಿನ ಗುಂಡಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಈ ಸರ್ಕಾರ ಇರುವವರೆಗೂ ಜನರು ಗುಂಡಿಗಳ ಜೊತೆ ಇರುವ ಅನಿವಾರ್ಯತೆ ಇದೆ ಎಂದು ಹೇಳಿದರು.

ಜ್ಯೋತಿರ್ಲಿಂಗ, ಏಕತಾ ಪ್ರತಿಮೆ ಯಾತ್ರೆ ಮಾಡಬೇಕು ಅನ್ನೋರಿಗೆ ಗುಡ್ ನ್ಯೂಸ್

ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ : ಪತಿಯೇ ಕೊಂದಿದ್ದಾನೆ ಎಂದು ಪೋಷಕರ ಆರೋಪ!

02/05/2026 10:22 AM1 Min Read

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಪತ್ನಿಗೆ ಅಕ್ರಮ ಸಂಬಂಧ ಹಿನ್ನೆಲೆ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ!

02/05/2026 10:14 AM1 Min Read

SHOCKING : ಪರಪುರಷನ ಜೊತೆಗೆ ಓಡಿ ಹೋದ ಪತ್ನಿ : ತುಮಕೂರಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ.!

02/05/2026 10:13 AM1 Min Read
Recent News

ಬೆಂಗಳೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ : ಪತಿಯೇ ಕೊಂದಿದ್ದಾನೆ ಎಂದು ಪೋಷಕರ ಆರೋಪ!

02/05/2026 10:22 AM

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಪತ್ನಿಗೆ ಅಕ್ರಮ ಸಂಬಂಧ ಹಿನ್ನೆಲೆ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ!

02/05/2026 10:14 AM

SHOCKING : ಪರಪುರಷನ ಜೊತೆಗೆ ಓಡಿ ಹೋದ ಪತ್ನಿ : ತುಮಕೂರಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ.!

02/05/2026 10:13 AM

BREAKING : ಧರ್ಮಸ್ಥಳದ ಕುರಿತು ಅವಹೇಳನಕಾರಿ ಹೇಳಿಕೆ: ಗಿರೀಶ್ ಮಟ್ಟಣ್ಣನವರ್ ವಿರುದ್ಧ `FIR’ ದಾಖಲು

02/05/2026 10:04 AM
State News
KARNATAKA

ಬೆಂಗಳೂರಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ : ಪತಿಯೇ ಕೊಂದಿದ್ದಾನೆ ಎಂದು ಪೋಷಕರ ಆರೋಪ!

By kannadanewsnow0502/05/2026 10:22 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹುಳಿಮಾವಿನ ಹಳೆ ಪೋಸ್ಟ್…

SHOCKING : ರಾಜ್ಯದಲ್ಲಿ ಹೃದಯವಿದ್ರಾವಕ ಘಟನೆ : ಪತ್ನಿಗೆ ಅಕ್ರಮ ಸಂಬಂಧ ಹಿನ್ನೆಲೆ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ!

02/05/2026 10:14 AM

SHOCKING : ಪರಪುರಷನ ಜೊತೆಗೆ ಓಡಿ ಹೋದ ಪತ್ನಿ : ತುಮಕೂರಿನಲ್ಲಿ ಇಬ್ಬರು ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ.!

02/05/2026 10:13 AM

BREAKING : ಧರ್ಮಸ್ಥಳದ ಕುರಿತು ಅವಹೇಳನಕಾರಿ ಹೇಳಿಕೆ: ಗಿರೀಶ್ ಮಟ್ಟಣ್ಣನವರ್ ವಿರುದ್ಧ `FIR’ ದಾಖಲು

02/05/2026 10:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.