ಮಂಡ್ಯ : ಮದ್ದೂರು ಪಟ್ಟಣದಲ್ಲಿ ಇಂದು ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ, ಬಿಜೆಪಿ ನಿಯೋಗ ಭೇಟಿ ನೀಡಿದೆ. ಈ ವೇಳೆ ಬೃಹತ್ ಗಣೇಶ ಮೆರವಣಿಗೆ ನಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಈ ಒಂದು ಮೆರವಣಿಗೆಯಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಮಾತನಾಡಿ, ನಮಗೆ ತೊಡೆತಟ್ಟಿ ಸವಾಲು ಹಾಕಬೇಡಿ ತೊಡೆ ಮುರಿಯುತ್ತೇವೆ ತಲೆಯನ್ನು ತೆಗೆಯುತ್ತೇವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕಲ್ಲು ಹೊಡೆದವರನ್ನು ಕಲ್ಲಿನೊಳಗೆ ಸಮಾಧಿ ಮಾಡೋ ತಾಕತ್ತಿದೆ. ಆ ಒಂದು ತಾಕತ್ ಹಿಂದೂ ಸಮಾಜಕ್ಕೆ ಇದೆ. ನಾವು ಟಿಪ್ಪು ಹಾಗೂ ಅವನ ಅಪ್ಪನನ್ನೇ ಬಿಡಲಿಲ್ಲ ನೀವು ಲೆಕ್ಕಕ್ಕಿಲ್ಲ. ಉರಿಗೌಡ ನಂಜೇಗೌಡ ರಕ್ತ ನಮ್ಮ ಮೈಯಲ್ಲಿ ಇದೆ. ನಮಗೆ ತೊಡೆತಟ್ಟಿ ಸವಾಲು ಹಾಕಬೇಡಿ ತೊಡೆ ಮುರಿಯುತ್ತೇವೆ ತಲೆಯನ್ನು ತೆಗೆಯುತ್ತೇವೆ. ಹಿಂದೂಗಳ ವಿಷಯದಲ್ಲಿ ರಾಜಕಾರಣ ಮಾಡಲ್ಲ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಗಂಟು ಮೂಟೆ ಕಟ್ಟಿ ಹೊರಡಿ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಮರು ದೇವಸ್ಥಾನದ ಮುಂದೆ ಬರಬಾರದು ಎಂದು ಹೇಳಿದದ್ದೀವ? ಮಸೀದಿ ಮುಂದೆ ಬರಬಾರದು ಎಂದು ಹೇಳುವ ಧಾಷ್ಟ್ರ ನಿಮ್ಮದು. ಇಡೀ ಭೂಮಿ ನಮ್ಮದು ಅಂದರೆ ನೀವು ಎಲ್ಲಿಗೆ ಹೋಗುತ್ತೀರಿ? ಕಾಂಗ್ರೆಸ್ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮುಸ್ಲಿಮಾಗಿ ಹುಟ್ಟುತ್ತೇನೆ ಅಂತಾನೆ. ಇಸ್ಲಾಂ ದಲ್ಲಿ ಪುನರ್ಜನ್ಮಕ್ಕೆ ಅವಕಾಶ ಇಲ್ಲ. ನಿನ್ನಯಾವನೆಯ ತಡೆದಿದ್ದು ಈಗಲೇ ಹೋಗು ಎಂದು ವಾಗ್ದಾಳಿ ನಡೆಸಿದರು.