Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆನ್‌ಲೈನ್ ವಂಚನೆಗೆ ಬ್ರೇಕ್: ಡಿಜಿಟಲ್ ಪಾವತಿ ಸುರಕ್ಷತೆಗೆ ಆರ್‌ಬಿಐನಿಂದ 6 ಮಾಸ್ಟರ್ ಪ್ಲಾನ್!

11/04/2026 7:31 AM

ಬೆಂಗಳೂರಿಗರೇ ಗಮನಿಸಿ : ಪೀಣ್ಯ ಫ್ಲೈಓವರ್‌ನಲ್ಲಿ ಲೋಡ್ ಟೆಸ್ಟಿಂಗ್, ಹಿನ್ನಲೆ, ಇಂದಿನಿಂದ 5 ದಿನ ವಾಹನ ಸಂಚಾರ ಬಂದ್!

11/04/2026 7:31 AM

ಭಾರತೀಯರ ಔದಾರ್ಯಕ್ಕೆ ಇರಾನ್ ಸಲಾಂ: ದೇಣಿಗೆ ಸಂಗ್ರಹ ಖಾತೆಗಳನ್ನು ಸ್ಥಗಿತಗೊಳಿಸಿದ ರಾಯಭಾರ ಕಚೇರಿ!

11/04/2026 7:28 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ‘ಜನತಾ ನ್ಯಾಯಾಲಯ’ಕ್ಕೆ ಅರ್ಜಿ ಸಲ್ಲಿಸಿ.!
KARNATAKA

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಉಚಿತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ‘ಜನತಾ ನ್ಯಾಯಾಲಯ’ಕ್ಕೆ ಅರ್ಜಿ ಸಲ್ಲಿಸಿ.!

By kannadanewsnow5709/09/2025 6:45 AM

ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ವ್ಯಾಜ್ಯ ಬಗೆಹರಿಸಿಕೊಳ್ಳಲು ಜನರು ಖಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿ 2 ರಿಂದ 3 ತಿಂಗಳುಗಳಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುವುದು ಎಂದು ಹಾಸನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೇಮಾವತಿರವರು ತಿಳಿಸಿದ್ದಾರೆ.

ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ 9 ಸೇವೆಗಳನ್ನು ತರಲಾಗಿದೆ. ಪ್ರಯಾಣಿಕರು ಅಥವಾ ಸರಕುಗಳನ್ನು ವಾಯು ಮಾರ್ಗ, ರಸ್ತೆ ಅಥವಾ ನೀರಿನ ಮೂಲಕ ಸಾಗಿಸುವ ಸಾಗಣೆ ಸೇವೆ, ಅಂಚೆ, ಟೆಲಿಗ್ರಾಫ್, ದೂರವಾಣಿ ಸೇವೆ, ಸಾರ್ವಜನಿಕರಿಗೆ ವಿದ್ಯುತ್, ಬೆಳಕು ಅಥವಾ ನೀರಿನಲ್ಲಿ ಸರಬರಾಜು ಮಾಡುವ ಯಾವುದೇ ಸಂಸ್ಥೆ, ಸಾರ್ವಜನಿಕ ಸಂರಕ್ಷಣೆ ಅಥವಾ ನೈರ್ಮಲ್ಯ ವ್ಯವಸ್ಥೆ ಆಸ್ಪತ್ರೆ ಸೇವೆ ಮತ್ತು ವಿತರಣೆ, ವಿಮೆ ಸೇವೆ, ಬ್ಯಾಂಕಿಂಗ್ ಹಾಗೂ ಹಣಕಾಸು ಸಂಸ್ಥೆಗಳು, ವಸತಿ ಮತ್ತು ರಿಯಲ್ ಎಸ್ಟೇಟ್ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಈ ನ್ಯಾಯಾಲಯದಲ್ಲಿ ರಾಜಿ ಮಾಡಿಸುವ ಮೂಲಕ ಇತ್ಯರ್ಥ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಅದಾಲತ್‌ಗಳಿಗೆ ಬರುವ ಪ್ರಕರಣಗಳಲ್ಲಿ ವಿವಾದಕ್ಕೊಳಗಾದ ಸ್ವತ್ತಿನ ಮೌಲ್ಯ ಹಣಕಾಸು ಸಂಸ್ಥೆಗಳ ವ್ಯವಹಾರಕ್ಕೆ ಸಂಬಂಧಪಟ್ಟಂತೆ ರೂ. 1 ಕೋಟಿ ಮೀರಿರಬಾರದು ಎಂದು ತಿಳಿಸಿದರು.

ಯಾವುದೇ ಕಾನೂನಿನಡಿ ರಾಜಿ ಮಾಡಿಕೊಳ್ಳುವ ಅವಕಾಶವಿರದ ಅಪರಾಧಕ್ಕೆ ಸಂಬಂಧಿಸಿದ ವಿಷಯವನ್ನು ಇತ್ಯರ್ಥಗೊಳಿಸಲು ಇಲ್ಲಿ ಅಧಿಕಾರವಿರುವುದಿಲ್ಲ. ಅರ್ಜಿ ಸಲ್ಲಿಸಿದ ನಂತರ ಅದೇ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಪಕ್ಷಕಾರನು ನ್ಯಾಯಾಲಯಕ್ಕೆ ಹೋಗುವಂತಿಲ್ಲ ಮತ್ತು ಖಾಯಂ ಜನತಾ ನ್ಯಾಯಾಲಯದ ಐತೀರ್ಪಿನ ವಿರುದ್ಧ ಯಾವುದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ 6 ಕಡೆಗಳಲ್ಲಿ ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರು, ಧಾರವಾಡ ಹಾಗೂ ಕಲಬುರ್ಗಿ ಗಳಲ್ಲಿ ಖಾಯಂ ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ ಎಂದರಲ್ಲದೆ ಹಾಸನ ಜಿಲ್ಲೆಯು ಮೈಸೂರು ಖಾಯಂ ಜನತಾ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿದೆ. ಅರ್ಜಿಗಳನ್ನು ಆನ್ ಲೈನ್‌ನಲ್ಲಿ ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ ಪ್ರತಿ ಜಿಲ್ಲಾ ಮಟ್ಟದಲ್ಲೂ ನ್ಯಾಯಾಲಯ ತೆರೆಯುವ ಕುರಿತು ಇತರೆ ಜಿಲ್ಲೆಗಳಿಂದ ಜನತಾ ನ್ಯಾಯಾಲಯಕ್ಕೆ ಬರುವ ಬಡವರಿಗೆ ಬಸ್ ಪ್ರಯಾಣ ದರ ಹಾಗೂ ಊಟೋಪಚಾರ ಭತ್ಯೆ, ಅರ್ಜಿ ಸಲ್ಲಿಸಲು ಕಕ್ಷಿದಾರರಿಗೆ ಪ್ರಾರಂಭಿಕ ಹಂತದಲ್ಲಿ ವಕೀಲರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ದಿನಾಂಕ 01.07.2025 ರಿಂದ 6.10.2025 ರವರೆಗೆ ರಾಷ್ಟ್ರಕ್ಕಾಗಿ 90 ದಿನಗಳ ವಿಶೇಷ ಮಧ್ಯಸ್ಥಿಕೆ ಅಭಿಯಾನ ನಡೆಯುತ್ತಿದ್ದು, ನ್ಯಾಯಾಲಯದಲ್ಲಿ ಬಾಕಿಯುಳಿದಿರುವ ಪ್ರಕರಣಗಳಲ್ಲಿ ಕಕ್ಷಿದಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದೆಂದು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಹೇಮಾವತಿ ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ್ ಅದಾಲತ್‌ನ್ನು ಸೆ.13 ರಂದು ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಾಲಯಗಳಲ್ಲಿ ರಾಜಿ ಮಾಡಬಹುದಾದ ಕ್ರಿಮಿನಲ್ ಪ್ರಕರಣಗಳಲ್ಲಿ ಸಿವಿಲ್ ಪ್ರಕರಣಗಳಲ್ಲಿ ರಾಜಿ ಸಂಧಾನದ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಕೊಳ್ಳಬಹುದು ಎಂದು ಹೇಳಿದ್ದಾರೆ.

ಜಿಲ್ಲಾ ಕಾನೂನು ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಅವರು ಮಾತನಾಡಿ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಆಯುಕ್ತರು, ಸಾರಿಗೆ ಹಾಗೂ ರಸ್ತೆ ಸುರಕ್ಷತೆ, ಬೆಂಗಳೂರು ಇವರು ದಿನಾಂಕ 23.08.2025 ರಿಂದ 12.09.2025 ರವರೆಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಸೆ.12 ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯಿಸುವಂತೆ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್ ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇಕಡ 50 ರಷ್ಟು ರಿಯಾಯಿತಿ ನೀಡಿ ಸರ್ಕಾರವು ಆದೇಶಿಸಿರುತ್ತದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.

Good news for the people of the state: Apply to the 'People's Court' to resolve disputes free of charge!
Share. Facebook Twitter LinkedIn WhatsApp Email

Related Posts

ಬೆಂಗಳೂರಿಗರೇ ಗಮನಿಸಿ : ಪೀಣ್ಯ ಫ್ಲೈಓವರ್‌ನಲ್ಲಿ ಲೋಡ್ ಟೆಸ್ಟಿಂಗ್, ಹಿನ್ನಲೆ, ಇಂದಿನಿಂದ 5 ದಿನ ವಾಹನ ಸಂಚಾರ ಬಂದ್!

11/04/2026 7:31 AM1 Min Read

BREAKING : ಹಾಸನದಲ್ಲಿ ಲಾರಿಗೆ ಹಿಂಬದಿಯಿಂದ ‘KSRTC’ ಬಸ್ ಡಿಕ್ಕಿ : ಪ್ರಯಾಣಿಕರಿಗೆ ಗಂಭೀರ ಗಾಯ!

11/04/2026 7:28 AM1 Min Read

ಅಪಘಾತ ಪರಿಹಾರ ಕಡಿತ ಸಲ್ಲದು: ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಹಿತ ಕಾಯ್ದ ಹೈಕೋರ್ಟ್

11/04/2026 7:27 AM1 Min Read
Recent News

ಆನ್‌ಲೈನ್ ವಂಚನೆಗೆ ಬ್ರೇಕ್: ಡಿಜಿಟಲ್ ಪಾವತಿ ಸುರಕ್ಷತೆಗೆ ಆರ್‌ಬಿಐನಿಂದ 6 ಮಾಸ್ಟರ್ ಪ್ಲಾನ್!

11/04/2026 7:31 AM

ಬೆಂಗಳೂರಿಗರೇ ಗಮನಿಸಿ : ಪೀಣ್ಯ ಫ್ಲೈಓವರ್‌ನಲ್ಲಿ ಲೋಡ್ ಟೆಸ್ಟಿಂಗ್, ಹಿನ್ನಲೆ, ಇಂದಿನಿಂದ 5 ದಿನ ವಾಹನ ಸಂಚಾರ ಬಂದ್!

11/04/2026 7:31 AM

ಭಾರತೀಯರ ಔದಾರ್ಯಕ್ಕೆ ಇರಾನ್ ಸಲಾಂ: ದೇಣಿಗೆ ಸಂಗ್ರಹ ಖಾತೆಗಳನ್ನು ಸ್ಥಗಿತಗೊಳಿಸಿದ ರಾಯಭಾರ ಕಚೇರಿ!

11/04/2026 7:28 AM

BREAKING : ಹಾಸನದಲ್ಲಿ ಲಾರಿಗೆ ಹಿಂಬದಿಯಿಂದ ‘KSRTC’ ಬಸ್ ಡಿಕ್ಕಿ : ಪ್ರಯಾಣಿಕರಿಗೆ ಗಂಭೀರ ಗಾಯ!

11/04/2026 7:28 AM
State News
KARNATAKA

ಬೆಂಗಳೂರಿಗರೇ ಗಮನಿಸಿ : ಪೀಣ್ಯ ಫ್ಲೈಓವರ್‌ನಲ್ಲಿ ಲೋಡ್ ಟೆಸ್ಟಿಂಗ್, ಹಿನ್ನಲೆ, ಇಂದಿನಿಂದ 5 ದಿನ ವಾಹನ ಸಂಚಾರ ಬಂದ್!

By kannadanewsnow0511/04/2026 7:31 AM KARNATAKA 1 Min Read

ಬೆಂಗಳೂರು : ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಲೋಡ್ ಟೆಸ್ಟಿಂಗ್ ನಡೆಯಲಿರುವ ಹಿನ್ನೆಲೆಯಲ್ಲಿ ಏ.13ರಿಂದ ಏ.17ರವರೆಗೆ ಫ್ಲೈಓವರ್ ಮೇಲೆ ಎಲ್ಲಾ…

BREAKING : ಹಾಸನದಲ್ಲಿ ಲಾರಿಗೆ ಹಿಂಬದಿಯಿಂದ ‘KSRTC’ ಬಸ್ ಡಿಕ್ಕಿ : ಪ್ರಯಾಣಿಕರಿಗೆ ಗಂಭೀರ ಗಾಯ!

11/04/2026 7:28 AM

ಅಪಘಾತ ಪರಿಹಾರ ಕಡಿತ ಸಲ್ಲದು: ಕೆಎಸ್‌ಆರ್‌ಟಿಸಿ ಪ್ರಯಾಣಿಕರ ಹಿತ ಕಾಯ್ದ ಹೈಕೋರ್ಟ್

11/04/2026 7:27 AM

BREAKING : ಧಾರವಾಡದಲ್ಲಿ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹತ್ಯೆ : 15 ದಿನದಲ್ಲಿ ಹಸೆಮಣೆ ಏರಬೇಕಿದ್ದವ ಮಸಣಕ್ಕೆ!

11/04/2026 7:23 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.