ನವದೆಹಲಿ : ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಪ್ರಭಾವ ಇದೀಗ ಹೆಚ್ಚಾಗಿದ್ದು, ವ್ಯೂವ್ಸ್ ನಲ್ಲಿ ನರೇಂದ್ರ ಮೋದಿಯನ್ನು ರಾಹುಲ್ ಗಾಂಧಿ ಇದೀಗ ಮೀರಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರಾಹುಲ್ ಗಾಂಧಿ ವಿಡಿಯೋಗಳು 601 ಮಿಲಿಯನ್ ವೀಕ್ಷಣೆ ಗಳಿಸಿದರೆ, ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋಗಳು 350 ಮಿಲಿಯನ್ ವೀಕ್ಷಣೆ ಗಳಿಸಿವೆ.
ಅದೇ ರೀತಿ ಫಾಲೋವರ್ಸ್ ಸೇರ್ಪಡೆಯಲು ಕೂಡ ರಾಹುಲ್ ಗಾಂಧಿ ಮೋದಿಗಿಂತ ಮುಂಚೂಣಿಯಲ್ಲಿದ್ದಾರೆ. ರಾಹುಲ್ ಗಾಂಧಿಗೆ 13 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆಯಾಗಿದ್ದರೆ, ನರೇಂದ್ರ ಮೋದಿಗೆ 2.2 ಲಕ್ಷ ಸೇರ್ಪಡೆಯಾಗಿದ್ದಾರೆ. ಇನ್ನು ಫೇಸಬುಕ್ಕಿನಲ್ಲಿ ಸಹ ರಾಹುಲ್ ಗಾಂಧಿ ವಿಡಿಯೋಗಳಿಗೆ 148 ಮಿಲಿಯನ್ ವೀಕ್ಷಣೆಗಳು ಬಂದರೆ ನರೇಂದ್ರ ಮೋದಿ ವಿಡಿಯೋಗಳಿಗೆ 72 ಮಿಲಿಯನ್ ವೀಕ್ಷಣೆ ಗಳಿಸಿವೆ.
ಫೇಸ್ಬುಕ್ ಫಾಲೋವರ್ಸ್ ಸೇರ್ಪಡೆಯಲ್ಲೂ ಕೂಡ ರಾಹುಲ್ ಮುನ್ನಡೆ ಸಾಧಿಸಿದ್ದು ರಾಹುಲ್ ಗಾಂಧಿ 6 ಲಕ್ಷ ಫಾಲೋವರ್ಸ್ ಗಳಿಸಿದರೆ, ಫೇಸ್ಬುಕ್ ನಲ್ಲಿ ನರೇಂದ್ರ ಮೋದಿ 1.8 ಲಕ್ಷ ಗಳಿಸಿದ್ದಾರೆ. ಇನ್ನು ಯುಟ್ಯೂಬ್ ನಲ್ಲೂ ಸಹ ರಾಹುಲ್ ಗಾಂಧಿ ವಿಡಿಯೋಗಳಿಗೆ 124 ಮಿಲಿಯನ್ ವೀಕ್ಷಣೆ ಬಂದರೆ, ನರೇಂದ್ರ ಮೋದಿ ವಿಡಿಯೋಗಳು ಕೇವಲ 76 ಮಿಲಿಯನ್ ವೀಕ್ಷಣೆ ಗಳಿಸಿವೆ ಮೋದಿಗಿಂತ ರಾಹುಲ್ ಗಾಂಧಿ ವಿಡಿಯೋಗಳು ಹೆಚ್ಚು ವೀವ್ಸ್ ಪಡೆದಿವೆ ಎಂದು ಈ ಕುರಿತು ಕಾಂಗ್ರೆಸ್ ಪಕ್ಷ ಮಾಹಿತಿ ಹಂಚಿಕೊಂಡಿದೆ.








