ಮೈಸೂರು : ಬ್ರೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಈ ಬಾರಿ ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದಕ್ಕೆ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಚಾಮುಂಡಿ ಬೆಟ್ಟ ಏನು ಹಿಂದೂಳ ಆಸ್ತಿ ಅಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇದೀಗ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರು ಚಾಮುಂಡಿ ತಾಯಿ ಹಿಂದೂ ದೇವರು ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು ಎಂದು ಖಡಕ್ ತಿರುಗೇಟು ನೀಡಿದ್ದಾರೆ.
ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಏನಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು ಚಾಮುಂಡಿ ಹಿಂದೂ ದೇವರು ಯದು ವಂಶದ ಮನೆ ದೇವರು. ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ. ಹಿಂದೂ ಧಾರ್ಮಿಕ ವಿಧಿ ವಿಧಾನದಿಂದ ಪೂಜೆ ನಡೆಯುತ್ತದೆ. ರಾಜಕಾರಣಿಗಳ ಏನು ಬೇಕಾದರೂ ಹೇಳಲಿ ರಾಜಕಾರಣಿಗಳು ಹೇಳಿದ ತಕ್ಷಣ ಎಲ್ಲವೂ ಆಗಲ್ಲ. ದೇವಸ್ಥಾನ ವಿಚಾರದಲ್ಲಿ ಕೋರ್ಟ್ ನಲ್ಲಿ ಹೋರಾಟ ನಡೆಯುತ್ತಿದೆ. ಪ್ರಾಧಿಕಾರ ರಚನೆಯಾದರು ಅದು ಅಧಿಕೃತ ಅಲ್ಲ. ಕೋರ್ಟ್ ಆದೇಶ ಬಂದಮೇಲೆ ಅಷ್ಟೇ ಎಲ್ಲವೂ ಸ್ಪಷ್ಟವಾಗುತ್ತದೆ. 70 ವರ್ಷಗಳಿಂದ ಈ ಹೋರಾಟ ನ್ಯಾಯಾಲಯದಲ್ಲಿ ಇದೆ. ದೇವಸ್ಥಾನವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಕ್ಕೆ ಬೇಸರವಿದೆ ಎಂದು ತಿಳಿಸಿದರು.
ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯ ಇಲ್ಲ. ಆಹ್ವಾನಿಸಿದವರು ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಸರ್ಕಾರ ಅವರಿಗೆ ಬೇಕಾದ ರೀತಿಯಲ್ಲಿಯೇ ದಸರಾ ಮಾಡುತ್ತಾರೆ. ಅಂಬಾರಿ ಕಡೆಗೆ ಗಮನ ಕೊಡುವ ಕಾರಣ ನಾನು ಅಲ್ಲಿಗೆ ಹೋಗಲ್ಲ. ನಮ್ಮ ಮನೆಯ ಒಬ್ಬರು ಹೋಗುತ್ತಾರೆ ಅಷ್ಟೇ ದಸರಾ ವಿಚಾರದಲ್ಲಿ ಇಲ್ಲಿಯವರೆಗೆ ಆದ ರಾಜಕೀಯವೇ ಸಾಕು ಆ ವಿಚಾರವನ್ನು ಮುಂದುವರಿಸುವುದು ಬೇಡ ಎಂದು ಮೈಸೂರಿನಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿಕೆ ನೀಡಿದರು.








![ಪೊಲೀಸ್ ಇನ್ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ : ಒಂದು ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ದಾಳಿ ಯಾದಗಿರಿ ಲೋಕಾಯುಕ್ತ ದಾಳಿ ಇನ್ಸ್ಪೆಕ್ಟರ್ ಬಂಧನ [Yadgiri Lokayukta Raid Inspector Arrested], ಗುರುಮಠಕಲ್ ಪೊಲೀಸ್ ಭ್ರಷ್ಟಾಚಾರ ಪ್ರಕರಣ [Gurmitkal Police Corruption Case], ವೀರಣ್ಣ ದೊಡ್ಡಮನಿ ಲೋಕಾಯುಕ್ತ ಟ್ರ್ಯಾಪ್ [Veeranna Doddamani Lokayukta Trap]. ಟ್ಯಾಗ್ಸ್ (Tags)](https://kannadanewsnow.com/kannada/wp-content/uploads/2026/05/ಲಂಚ-ಪಡೆಯುವಾಗ-ಲೋಕಾಯುಕ್ತ-ಬಲೆಗೆ-ಬಿದ್ದ-ಗುರುಮಠಕಲ್-450x253.jpg)