ಮಂಡ್ಯ: ತಾಂತ್ರಿಕ ದೋಷಕ್ಕೆ ಮಂಡ್ಯದ ಮೈಶುಗರ್ ಕಾರ್ಖಾನೆ ಸ್ಥಗಿತಗೊಂಡಿದೆ. ಹೀಗಾಗಿ ಕಾರ್ಖಾನೆಗೆ ರೈತ ಮುಖಂಡರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೈಶುಗರ್ ಕಾರ್ಖಾನೆಯ ಆವರಣದಲ್ಲಿ ಕಬ್ಬು ತಂದು ಕಾಯುತ್ತಿದ್ದ ರೈತರ ಸಮಸ್ಯೆಗಳ ಬಗ್ಗೆ ಎಂಡಿಗೆ ಮಾಹಿತಿಯನ್ನು ರೈತ ಮುಂಖಂಡರು ನೀಡಿದ್ದಾರೆ.
ಎರಡೆರಡು ದಿನಕ್ಕೂ ಕೆಟ್ಟು ನಿಲ್ಲುತ್ತಿರುವ ಮೈಶುಗರ್ ಕಾರ್ಖಾನೆ ವಿರುದ್ದ ರೈತರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಬ್ಬು ಅರೆಯುವಿಕೆ ಸರಿಯಾಗಿ ನಡೆಯದೆ ರೈತರು ಹೈರಾಣಾಗಿದ್ದಾರೆ. ಬೆಳೆದ ಕಬ್ಬು ತಂದು ಕಾರ್ಖಾನೆಯಲ್ಲಿ ದಿನಗಟ್ಟಲೆ ರೈತರು ಕಾಯುತ್ತಿದ್ದಾರೆ. ಕುಡಿಯುವ ನೀರು, ಮೂಲಭೂತ ವ್ಯವಸ್ಥೆ ಆಗ್ರಹಿಸಿದ್ದಾರೆ.
ಮೈಶುಗರ್ ಎಂಡಿ ಜೊತೆಯಲ್ಲಿ ಕಾರ್ಖಾನೆ ಪರಿಶೀಲನೆಯನ್ನು ರೈತ ಮುಂಖಂಡರು ನಡೆಸಿದರು. ಆ ಬಳಿಕ ಮೈಶುಗರ್ ಅಧ್ಯಕ್ಷ ಹಾಗೂ ಎಂಡಿ ಜೊತೆ ಸಭೆ ನಡೆಸಲಾಯಿತು. ರೈತರ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಕಾರ್ಖಾನೆ ಸ್ಥಗಿತ, ಕಬ್ಬು ಅರೆಯುವಿಕೆ ತಾಂತ್ರಿಕ ದೋಷ, ಕಬ್ಬಿನ ಹಾಲು ಲಿಕೇಜ್, ಕಬ್ಬು ಒಣಗುತ್ತಿರುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮೂಲ ಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಲಾಗಿದೆ. ಸರಿಯಾದ ಸಮಯಕ್ಕೆ ಕಬ್ಬು ಅರೆಯುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮೈಶುಗರ್ ಕಾರ್ಖಾನೆಯ ಅಧ್ಯಕ್ಷ ಹಾಗೂ ಎಂಡಿಯನ್ನು ರೈತರು ತರಾಟೆಗೆ ತೆಗೆದುಕೊಂಡರು. ಬಳಿಕ ಕಾರ್ಖಾನೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಯಿಂದ ಈಗಾಗಿದೆ. ಸರಿಪಡಿಸಿ ರೈತರಿಗೆ ಯಾವುದೇ ತೊಂದರೆ ಆಗದ ರೀತಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ರೈತರಿಗೆ ಮೂಲಭೂತ ಸೌಕರ್ಯಗಳ ಒದಗಿಸುವ ಕೆಲಸ ಆಗುತ್ತೆ. ಈಗಾಗಲೇ ಕಬ್ಬು ಕಟಾವು ಮಾಡಲು ರೈತರು ನೊಂದಣಿ ಮಾಡಿಕೊಂಡಿದ್ದಾರೆ. ನಮ್ಮ ರೈತರ ಕಬ್ಬು ಖಾಸಗಿ ಕಾರ್ಖಾನೆ ಪಾಲಾಗಲು ಬಿಡಲ್ಲ. ಹೆಚ್ಚಿನ ಟನ್ ಕಬ್ಬು ಅರೆಯುವ ಕೆಲಸ ಮಾಡ್ತೇವೆ ಎಂಬುದಾಗಿ ಮೈಶುಗರ್ ಅಧ್ಯಕ್ಷ ಸಿಡಿ ಗಂಗಾಧರ್ ತಿಳಿಸಿದ್ದಾರೆ.
ವರದಿ: ಗಿರೀಶ್ ರಾಜ್, ಮಂಡ್ಯ
ರಾಜ್ಯದ ರೈತರಿಗೆ ಗುಡ್ ನ್ಯೂಸ್: ಸೆ.1ರಿಂದ ಪಹಣಿ ತಿದ್ದುಪಡಿ ವಿಶೇಷ ಅಭಿಯಾನ
BBMPಯಿಂದ ಗಣೇಶ ವಿಸರ್ಜನೆಗೆ 41 ಕೆರೆ, 489 ತಾತ್ಕಾಲಿಕ ಸಂಚಾರಿ ಕಲ್ಯಾಣಿ ವ್ಯವಸ್ಥೆ
ರಾಜ್ಯದ `ಗ್ರಾಮೀಣ ಜನತೆಗೆ ಗುಡ್ ನ್ಯೂಸ್’ : ಮನೆಯ `ಕಟ್ಟಡ ಪರವಾನಗಿ ಪತ್ರ’ ಪಡೆಯುವುದು ಇನ್ನು ಸುಲಭ | WATCH VIDEO