ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ಶವಗಳ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರೆಸ್ಟ್ ಆದ ಬೆನ್ನಲ್ಲೇ ಎಸ್ಐಟಿ ಆರೋಪಿ ಚಿನ್ನಯ್ಯನನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆಯ ವೇಳೆ ಎಸ್ಐಟಿ ಅಧಿಕಾರಿಗಳಿಗೆ ಸ್ಪೋಟಕವಾದ ಸಾಕ್ಷಿಗಳು ಲಭ್ಯವಾಗಿದ್ದು , ಚಿನ್ನಯ್ಯ, ಈ ಒಂದು ಪ್ರಕರಣದ ಕುರಿತು ಮೊದಲೇ 25ಕ್ಕೂ ಹೆಚ್ಚು ವಿಡಿಯೋಗಳನ್ನು ರೆಕಾರ್ಡ್ ಮಾಡಿ ಇಂಟರ್ವ್ಯೂ ರೂಪದಲ್ಲಿ ರೆಕಾರ್ಡ್ ಮಾಡಿ ಬುರುಡೆ ಷಡ್ಯಂತರ ಮಾಡಿದ ಗ್ಯಾಂಗ್ ಮೆಗಾ ಪ್ಲಾನ್ ಮಾಡಿಕೊಂಡಿತ್ತು ಎಂದು ಬಾಯಿಬಿಟ್ಟಿದ್ದಾನೆ.
ಹೌದು 25 ವಿಡಿಯೋಗಳ ಮೂಲಕ ಈ ಒಂದು ಗ್ಯಾಂಗ್ ಮೆಗಾ ಪ್ಲಾನ್ ಮಾಡಿದ್ದು ಯಾವ ಸಂದರ್ಭದಲ್ಲಿ ಏನೇನು ಮಾಡಬೇಕು ಎಂದು ತಂತ್ರ ಹೂಡಿತ್ತು. ಇಂಟರ್ವ್ಯೂ ವಿಡಿಯೋ ಮೂಲಕ ಅಡ್ವಾನ್ಸ್ ಪ್ಲಾನ್ ಮಾಡಿತ್ತು ವಿವಿಧ ಮಾದರಿಯಲ್ಲಿ ವಿಡಿಯೋ ಮಾಡಿಟ್ಟುಕೊಂಡಿತ್ತು. ಇಂಟರ್ವ್ಯೂ ರೂಪದಲ್ಲಿ ವಿಡಿಯೋ ಮಾಡಿಸಿ ತಂತ್ರ ರೂಪಿಸಿತ್ತು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಬರುತ್ತದೆ. ವಿಡಿಯೋ ಬಗ್ಗೆ ಎಸ್ಐಟಿ ಮುಂದೆ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ.
ಚಿನ್ನಯ ಅರೆಸ್ಟ್ ಆದಾಗ ಯಾವ ವಿಡಿಯೋ ಬಿಡಬೇಕು? ಚಿನ್ನಯ್ಯ ಓಡಿ ಹೋದರೆ ಯಾವ ವಿಡಿಯೋ ಹಾಕಬೇಕು? ಒಂದು ವೇಳೆ ಚಿನ್ನಯ್ಯ ಸತ್ತು ಹೋದರೆ ಯಾವ ವಿಡಿಯೋ ಹಾಕಬೇಕು? ಚಿನ್ನಯ್ಯ ಹಿಂದಿನವರು ಅರೆಸ್ಟ್ ಆದರೆ ಯಾವ ವಿಡಿಯೋ ಬಿಡಬೇಕು? ಅತ್ಯಾಚಾರ ವಿಚಾರ ಬಂದಾಗ ಯಾವ ರೀತಿ ವಿಡಿಯೋ ಬಿಡಬೇಕು? ಕೇಸ್ನಲ್ಲಿ ಉಳಿದವರ ಹೆಸರು ಬಂದಾಗ ಯಾವ ವಿಡಿಯೋ ಬಿಡಬೇಕು ಎಂದು ಗ್ಯಾಂಗ್ ಮೆಗಾ ಪ್ಲಾನ್ ಮಾಡಿಕೊಂಡಿತ್ತು.