ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾಧ್ಯಂತ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಗೊಂಡಿದೆ. ಈ ಮೂಲಕ ಸ್ಥಗಿತಗೊಂಡಿದ್ದಂತ ಬೈಕ್ ಸೇವೆ ಚಾಲನೆಗೊಂಡೆತೆ ಆಗಿದೆ.
ಹೌದು ಬೆಂಗಳೂರು ಸೇರಿ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಓಲಾ ಹೊರತುಪಡಿಸಿ ಉಬರ್, ರಾಪಿಡೋ ಆಪ್ ಸೇವೆ ಲಭ್ಯವಾಗಿದೆ.
ಅಂದಹಾಗೇ ಸುರಕ್ಷತೆಯ ದೃಷ್ಟಿಯಿಂದ ಜೂನ್.16ರಿಂದ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ರದ್ದಾಗಿತ್ತು. ಇದರಿಂದಾಗಿ ಬೈಕ್ ಟ್ಯಾಕ್ಸಿ ನಂಬಿಕೊಂಡಿದ್ದ 6 ಲಕ್ಷಕ್ಕೂ ಹೆಚ್ಚು ಸವಾರರು ಬೀದಿಗೆ ಬಿದ್ದಂತೆ ಆಗಿತ್ತು.
ನಿನ್ನೆ ಈ ಸಂಬಂಧ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೀತಿ ಚೌಕಟ್ಟು ನಿಗದಿಪಡಿಸಲು ಸೂಚಿಸಿತ್ತು. ಸರ್ಕಾರಕ್ಕೆ ಸೂಚಿಸಿ ಸೆಪ್ಟೆಂಬರ್.22ಕ್ಕೆ ವಿಚಾರಣೆ ಮುಂದೂಡಿತ್ತು. ಈ ಬೆನ್ನಲ್ಲೇ ರಾಜ್ಯಾಧ್ಯಂತ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಗೊಂಡಂತೆ ಆಗಿದೆ.
ರೋಹಿತ್ ಶರ್ಮಾ ಬದಲಿಗೆ ಶ್ರೇಯಸ್ ಅಯ್ಯರ್ ಭಾರತದ ಏಕದಿನ ತಂಡದ ನಾಯಕ: ವರದಿ