ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಟ ದರ್ಶನ್, ವಿಚಾರಣೆಗೆ ಹಾಜರಾಗಿದ್ದರು. ಅದಕ್ಕೂ ಮೊದಲು ನಟ ದರ್ಶನ್ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ವಿದೇಶಕ್ಕೆ ತೆರಳಲು ಅನುಮತಿ ನೀಡಿತು ಆದರೆ ಇದೀಗ ನಟ ದರ್ಶನ್ ಗೆ ಸ್ವೀಟ್ಜರ್ಲ್ಯಾಂಡ್ ವೀಸಾ ನೀಡಲು ನಿರಾಕರಿಸಿದೆ ಎಂದು ತಿಳಿದುಬಂದಿದೆ.
ಹೌದು ನಟ ದರ್ಶನ್ ಸಿನಿಮಾ ಶೂಟಿಂಗ್ಗಾಗಿ ಯುರೋಪ್ ಗೆ ತೆರಳಲು ಕನಸುಕಂಡಿದ್ದರು. ಇದೀಗ ಅವರಿಗೆ ಬಿಗ್ ಶಾಕ್ ಎದುರಾಗಿದ್ದು, ದರ್ಶನ್ಗೆ ವೀಸಾ ಕೊಡಲು ಸ್ವೀಟ್ಜರ್ಲ್ಯಾಂಡ್ ನಿರಾಕರಿಸಿದೆ. ಖಾಸಗಿ ವೆಬ್ ಸೈಟ್ ಮಾಹಿತಿಯ ಪ್ರಕಾರ ದರ್ಶನ್ಗೆ ವೀಸಾ ನಿರಾಕರಣೆ ಮಾಡಲಾಗಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್ ಕೋರ್ಟ್ನಲ್ಲಿರೋ ಹಿನ್ನೆಲೆಯಲ್ಲಿ ಇದೀಗ ವೀಸಾ ನೀಡಲು ನಿರಾಕರಿಸಿದೆ. ನಿರಾಕರಣೆಯ ಬಗ್ಗೆ ಖಾಸಗಿ ವೆಬ್ ಸೈಟ್ ನಲ್ಲಿ ಉಲ್ಲೇಖವಾಗಿದೆ.
ಮೊದಲು ನಟ ದರ್ಶನ್ ಥೈಲಾಂಡ್ ಗೆ ತೆರಳಲಿದ್ದಾರೆ. ಥೈಲಾಂಡ್ ನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ನಡೆಸಲಾಗುತ್ತಿದೆ. ಐದು ದಿನಗಳ ಕಾಲ ಶೂಟಿಂಗ್ ನಡೆಯಲಿದ್ದು ಐದು ದಿನಗಳ ಕಾಲ ನಟ ದರ್ಶನ್ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಯುರೋಪಿಗೆ ತೆರಳಲು ನಟ ದರ್ಶನ್ ಕನಸು ಕಂಡಿದ್ದರು ಆದರೆ ಇದೀಗ ಸ್ವೀಟ್ಜರ್ಲ್ಯಾಂಡ್ ನಟ ದರ್ಶನ್ ಗೆ ವೀಸಾ ನೀಡಲು ನಿರಾಕರಿಸಿದೆ.