ಬೆಂಗಳೂರು : ಭಯೋತ್ಪಾದಕ ಟಿ.ನಾಸಿರ್ ಗೆ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲಾಖಾ ತನಿಖೆ ನಡೆಸಿ ವರದಿ ನೀಡಲು ಆದೇಶ ನೀಡಿದ್ದಾರೆ. CAR ಚಾನ್ ಪಾಷಾ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಬೆಂಗಳೂರು ಕಮಿಷನರ್ ಸೀಮಂತ ಕುಮಾರ್ ಅದೇಶಿಸಿದ್ದಾರೆ. ಈ ಬಗ್ಗೆ ಕಮಿಷನರ್ ಸೀಮಂತ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ಇಲಾಖೆಯಲ್ಲಿ ಏನು ಕ್ರಮ ಇದೆ ಅದನ್ನೇ ಕೈಗೊಳ್ಳುತ್ತೇವೆ. ಸೂಕ್ತ ತನಿಖೆಯ ಬಳಿಕ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಉಗ್ರ ಟಿ ನಾಸಿರ್ ಜೈಲಿನಲ್ಲಿ ಇದ್ದುಕೊಂಡೇ ಬೆಂಗಳೂರಲ್ಲಿ ಬ್ಲಾಸ್ಟ್ ಮಾಡಲು ಪ್ಲಾನ್ ಮಾಡಿಕೊಂಡಿದ್ದ. ಇದಕ್ಕೆ ಎಎಸ್ಐ ಚಾನ್ ಪಾಷಾ ಮನೋವೈದ್ಯ ನಾಗರಾಜ್ ಹಾಗು ಫಾತಿಮಾ ಆತನಿಗೆ ಸಹಕಾರ ನೀಡಿದ್ದು, ಈ ಮೂವರನ್ನು ಇದೀಗ ಎನ್ಐಎ ಅರೆಸ್ಟ್ ಮಾಡಿದ್ದು, 6 ದಿನಗಳ ಕಾಲ ವಿಚಾರಣೆಗೆ ಎಂದು ಎನ್ ಐ ಎ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.