ಉಡುಪಿ : ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಬದಲಾವಣೆ ಆಗುತ್ತಾರೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಬದಲಾವಣೆ ಗಾಳಿ ರಾಜ್ಯದಲ್ಲಿ ಬೀಸಲಿದೆ ಎಂದು ಕಾಂಗ್ರೆಸ್ಸಿನ ಕೆಲವು ನಾಯಕರೇ ಹೇಳಿಕೆ ನೀಡಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ನಾನೇ 5 ವರ್ಷಗಳ ಕಾಲ ಸಿಎಂ ಆಗಿರ್ತೀನಿ ಎಂದು ಸಹ ಹೇಳಿದರು. ಇದೀಗ ಜಿ ಪರಮೇಶ್ವರ್ ಅವರು ನಾವು ಯಾವುದೇ ಬದಲಾವಣೆ ಬಯಸುವುದಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೆಳ್ಮನ್ನು ದೇವಾಲಯದಲ್ಲಿ ಮಾತನಾಡಿದ ಅವರು ನನಗೆ ಯಾವ ಬೇಸರವು ಇಲ್ಲ. ಮೂರನೇ ಬಾರಿಗೆ ನನಗೆ ಗೃಹ ಇಲಾಖೆ ಖಾತೆ ಕೊಟ್ಟಿದ್ದಾರೆ ಜವಾಬ್ದಾರಿಯಿಂದ ನಾನು ಇಲಾಖೆಯ ಕೆಲಸ ಮಾಡುತ್ತಿದ್ದೇನೆ. ಬೇಸರವಾಗುವ ಪ್ರಶ್ನೆಯೇ ಇಲ್ಲ ಎಂದು ಜಿ ಪರಮೇಶ್ವರ್ ತಿಳಿಸಿದರು. ನಾನೇ 5 ವರ್ಷ ಸಿಎಂ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದಾಗ ಸಿಎಂ ವಿಚಾರವಾಗಿ ಪದೇ ಪದೇ ಚರ್ಚೆ ಮಾಡುವುದು ಅನಗತ್ಯ ಎಂದು ತಿಳಿಸಿದರು.