ಬೆಳಗಾವಿ : ಸುಪಾರಿ ನೀಡಿ ವಕೀಲ ಸಂತೋಷ್ ಕಿಡ್ನಾಪ್ ಮತ್ತು ಕೊಲೆ ಕೇಸ್ ಗೆ ಸಂಬಂಧಿಸಿದಂತೆ 8 ಇದೀಗ ಆರೋಪಿಗಳನ್ನು ರಾಯಬಾಗ ಠಾಣೆ ಪೋಲಿಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಕೊಲೆಗೆ ಸುಪಾರಿ ನೀಡಿದ ವಕೀಲ ಶಿವಗೌಡ ಪಾಟೀಲ್ ಮತ್ತು ಗ್ಯಾಂಗ್ ಅನ್ನು ರಾಯಭಾಗ ಠಾಣೆ ಪೋಲಿಸರು ಇಂದು ಅರೆಸ್ಟ್ ಮಾಡಿದ್ದಾರೆ ಬಂಧಿತರಿಂದ ಕಾರು, ಮಚ್ಚು, ಹಣ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ ಅವರು ಮಾತನಾಡಿ, ಬಂಧಿತರನ್ನು ರಾಯಬಾಗ ತಾಲ್ಲೂಕಿನ ಬಸ್ತವಾಡದ ಶಿವಗೌಡ ಬಸಗೌಡ ಪಾಟೀಲ, ಭರತ ಕೋಳಿ, ಬಿರನಾಳದ ಕಿರಣ ಕೆಂಪವಾಡೆ, ಗೋಕಾಕ ತಾಲ್ಲೂಕಿನ ಗುಜನಾಳದ ಉದಯ ಮುಶೆನ್ನವರ, ಬೈಲಹೊಂಗಲ ತಾಲ್ಲೂಕಿನ ವಣ್ಣೂರಿನ ಸಂಜಯಕುಮಾರ ಹಳಬನ್ನವರ, ಗಜಮನಾಳದ ರಾಮು ದಂಡಾಪುರೆ, ಬೆಳಗಾವಿ ತಾಲ್ಲೂಕಿನ ಚಂದೂರಿನ ಸುರೇಶ ನಂದಿ, ಹೊನ್ನಿಹಾಳದ ಮಂಜುನಾಥ ತಳವಾರ ಬಂಧಿತರು.
ಪರಾರಿಯಾಗಿರುವ ರಾಯಬಾಗ ತಾಲ್ಲೂಕಿನ ಅಳಗವಾಡಿಯ ಮಹಾವೀರ ಹಂಜೆ, ಹೊನ್ನಿಹಾಳದ ನಾಗರಾಜ ನಾಯಕ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದರು. ಏಪ್ರಿಲ್ 29ರಂದು ಸವಸುದ್ದಿಯಿಂದ ರಾಯಬಾಗದ ನ್ಯಾಯಾಲಯಕ್ಕೆ ಬರುತ್ತಿದ್ದ ಸಂತೋಷ ಅವರನ್ನು ಕಾರಿನಲ್ಲಿ ಬಂದ ಕೆಲವು ಆರೋಪಿಗಳು ಅಡ್ಡಗಟ್ಟಿ, ಅಪಹರಿಸಿಕೊಂಡು ಹೋಗಿದ್ದರು. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಗಣೇಶಗುಡಿಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಸಾಕ್ಷ್ಯ ನಾಶಕ್ಕಾಗಿ ಪೆಟ್ರೋಲ್‌ನಿಂದ ಮೃತದೇಹ ಸುಟ್ಟಿದ್ದರು ಎಂದರು.