ಚಿಕ್ಕಮಗಳೂರು : ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಚಿಕ್ಕಮಂಗಳೂರು ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಚಿಕ್ಕಮಂಗಳೂರು ಜಿಲ್ಲಾ ಆಡಳಿತ ಶರಣ್ ಪಂಪ್ವೆಲ್ ಗೆ ನಿರ್ಬಂಧ ವಿಧಿಸಿದೆ. ಚಿಕ್ಕಮಗಳೂರು ಜಿಲ್ಲೆಗೆ 30 ದಿನಗಳ ಕಾಲ ಪ್ರವೇಶ ಮಾಡದಂತೆ ಸೂಚನೆ ನೀಡಿದೆ.
ಕೋಮು ದ್ವೇಷ ಭಾಷಣ ಮಾಡಿ ಕಾನೂನು ವ್ಯವಸ್ಥೆಗೆ ದಕ್ಕೆ ಹಿನ್ನೆಲೆಯಲ್ಲಿ ಆಗಸ್ಟ್ 4ರವರೆಗೆ ಶರಣ ಪಂಪ್ ವೆಲ್ ಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಚಿಕ್ಕಮಂಗಳೂರು ಜಿಲ್ಲಾಡಳಿತ ಕ್ರಮಕ್ಕೆ ಹಿಂದೂ ಸಂಘಟನೆ, MLC ಸಿಟಿ ರವಿ ಮತ್ತು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ, ಬೆಳಿಗ್ಗೆ 11:30 ಕ್ಕೆ ಡಿಸಿ ಮೀನಾ ನಾಗರಾಜ ಅವರನ್ನು ಹಿಂದೂ ಮುಖಂಡರು ಭೇಟಿಯಾಗಲಿದ್ದಾರೆ.
ಇಂದು ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ವಿ ಎಚ್ ಪಿ ಸಂಘಟನೆ ಕುರಿತ ಬೈಠಕ್ ನಡೆಯಬೇಕಿತ್ತು. ಚಿಕ್ಕಮಗಳೂರು ಜಿಲ್ಲೆಯ ಮುಡಿಗೆರೆ ಆಲ್ದೂರು ಹಾಗೂ ಚಿಕ್ಕಮಗಳೂರಿನಲ್ಲಿ ಬೈಟೆಕ್ ನಡೆಯಬೇಕಿತ್ತು, ಆದರೆ ಜಿಲ್ಲಾಡಳಿತ 30 ದಿನಗಳ ಕಾಲ ಶರಣ್ ಪಂಪ್ ವೆಲ್ ಗೆ ನಿರ್ಬಂಧ ವಿಧಿಸಿ ಜಿಲ್ಲೆಗೆ ಪ್ರವೇಶಿಸದಂತೆ ಸೂಚನೆ ನೀಡಿದೆ.