ಚಾಮರಾಜನಗರ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಚಾಮರಾಜನಗರ ಜಿಲ್ಲೆಯ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳಿಗೆ ವಿಷ ಹಾಕಿ ಕೊಂದಿದ್ದ ಘಟನೆ ಮಾಸುವ ಮುನ್ನವೇ ಇದೀಗ ಗುಂಡ್ಲುಪೇಟೆ ತಾಲೂಕಿನಲ್ಲಿ 18 ಕೋತಿಗಳು ಸಾವನಪ್ಪಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋತಿಗಳಿಗೆ ವಿಷ ಹಾಕಿರುವುದು ದೃಢವಾಗಿದೆ ಎಂದು ಪಶು ವೈದ್ಯ ಡಾ.ಮಹದೇಶ ಸ್ಪಷ್ಟಪಡಿಸಿದರು.
ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಕೊಡಸೋಗಿ ರಸ್ತೆಯಲ್ಲಿ ಕೋತಿಗಳ ಶವ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಷ ಹಾಕಿ ಕೋತಿಗಳನ್ನು ಕೊಂದಿರುವುದು ವೈದ್ಯರು ದೃಢಪಡಿಸಿದ್ದಾರೆ. 18 ಕೋತಿಗಳು ಮೃತಪಟ್ಟಿದ್ದು, ಎರಡು ಕೋತಿಗಳು ಜೀವಂತವಾಗಿವೆ. ಚಿಕಿತ್ಸೆ ಬಳಿಕ ನಿತ್ರಾಣಗೊಂಡಿದ್ದ ಎರಡು ಕೋತಿಗಳು ಇದೀಗ ಚೇತರಿಸಿಕೊಂಡಿವೆ ಎಂದು ಪಶು ವೈದ್ಯ ಡಾಕ್ಟರ್ ಮಹಾದೇಶ್ ತಿಳಿಸಿದರು.
ಇನ್ನು ಮೂರು ಕೋತಿಗಳಿಗೆ ಪ್ರಜ್ಞೆದು ಅಲ್ಲಿಂದ ಓಡಿ ಹೋಗಿವೆ. ಕೋತಿಗಳಿಗೆ ವಿಷ ಹಾಕಿ ಬಳಿಕ ಗೋಣಿ ಚೀಲದಲ್ಲಿ ತಂದು ಇಲ್ಲಿ ಎಸೆಯಲಾಗಿದೆ. ಮೃತಪಟ್ಟ ಕೋತಿಗಳ ಮೃತ ದೇಹಗಳು ನೀಲಿ ಬಣ್ಣಕ್ಕೆ ತಿರುಗಿವೆ. ಮೃತಪಟ್ಟ ಕೋತಿಗಳು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ಕಂದೇಗಾಲ ಗ್ರಾಮದಲ್ಲಿ ಪಶು ವೈದ್ಯ ಮಾದೇಶ್ ಹೇಳಿಕೆ ನೀಡಿದರು.