ಬೆಂಗಳೂರು : ಕಳೆದ 40 ದಿನಗಳಲ್ಲಿ ಇವತ್ತಿನವರೆಗೆ ಹಾಸನದಲ್ಲಿ ಒಟ್ಟು 22 ಜನರು ವರದಿಯಾಗೋದಕ್ಕೆ ಬಲಿಯಾಗಿದ್ದಾರೆ ಇದರ ಬೆನ್ನಲ್ಲೇ ರಾಜ್ಯದಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದ್ದು, ಇದೀಗ ಬೆಂಗಳೂರಿನಲ್ಲಿ ವಿದ್ಯಾರ್ಥಿ ಒಬ್ಬ ಹೃದಯಘಾತದಿಂದ ಸಾವನ್ನಪ್ಪಿದ್ದಾನೆ. BVVS ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ವೈಭವ್ ಹಾರ್ಟ್ ಅಟ್ಯಾಕ್ ನಿಂದ ಇದೀಗ ಸಾವನಪ್ಪಿದ್ದಾನೆ.
ಹೌದು ಹೃದಯಘಾತದಿಂದ ವೈಭವ್ ಕುಲಕರ್ಣಿ (26) ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಾಗ ವೈಭವ್ ಗೆ ಉಸಿರಾಟದ ಸಮಸ್ಯೆ ಎದುರಾಗಿದೆ. ವೈಭವ್ ಕುಲಕರಣಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ. ತಕ್ಷಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ವೈಭವ್ ಸಾವನಪ್ಪಿದ್ದಾನೆ. ಮೂಲತಃ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕುಮಸಗಿ ಗ್ರಾಮದವನಾಗಿದ್ದು, ಇದೀಗ ಮೃತದೇಹವನ್ನು ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದೆ.