ಹುಬ್ಬಳ್ಳಿ/ಧಾರವಾಡ : ಹುಬ್ಬಳ್ಳಿ, ಧಾರವಾಡ ಪಾಲಿಕೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ನೂತನ ಮೇಯರ್ ಆಗಿ ಬಿಜೆಪಿಯ ಜ್ಯೋತಿ ಪಾಟೀಲ್ ಆಯ್ಕೆ ಆಗಿದ್ದಾರೆ. 47 ಮತಗಳನ್ನು ಪಡೆದು ಜ್ಯೋತಿ ಪಾಟೀಲ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ಸಿನ ಸುವರ್ಣ ಕಲಕುಂಟ್ಲಾ ವಿರುದ್ಧ ಜ್ಯೋತಿ ಪಾಟೀಲ್ಭರ್ಜರಿ ಜಯಗಳಿಸಿದ್ದಾರೆ. ಇನ್ನು ಉಪಮೇಯರಾಗಿ ಬಿಜೆಪಿಯ ಸಂತೋಷ ಚೌವ್ಹಾಣ್ ಆಯ್ಕೆಯಾಗಿದ್ದಾರೆ.
ಸಂತೋಷ್ ಚೌವ್ಹಾಣ 47 ಮತಗಳನ್ನು ಪಡೆದು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಶಂಭು ಸಾಲಮನಿ ವಿರುದ್ಧ ಸಂತೋಷ ಭರ್ಜರಿ ಜಯಗಳಿಸಿದ್ದಾರೆ. ಬೆಳಗಾವಿ ಪ್ರಾದೇಶಿಕ ಆಕ್ತರ ಸಮ್ಮುಖದಲ್ಲಿ ಈ ಒಂದು ಚುನಾವಣೆ ನಡೆಯಿತು. ಕೈ ಎತ್ತುವ ಮೂಲಕ ಮೇಯರ್ ಮತ್ತು ಉಪಮೇಯರ್ ಆಯ್ಕೆ ನಡೆಯಿತು. ಕೇಂದ್ರ ಸಚಿವ ಪ್ರಹಲ್ಲಾ ಜೋಷಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ತೆಂಗಿನಕಾಯಿ ಹಾಗು ಪ್ರಸಾದ್ ಅಬ್ಬಯ್ಯ ಭಾಗಿಯಾಗಿದ್ದರು.