Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೈಡ್ರೋಜನ್ ವಾಹನಗಳಿಗೆ ‘ದ್ವಿ-ಬಣ್ಣದ ನಂಬರ್ ಪ್ಲೇಟ್’ ; ಕೇಂದ್ರ ಸರ್ಕಾರ ಮಹತ್ವದ ಪ್ರಸ್ತಾಪ

28/06/2025 2:46 PM

ಬೆಂಗಳೂರಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ BMTC ಶಾಕ್: 5,706 ಮಂದಿಯಿಂದ 12.64 ಲಕ್ಷ ದಂಡ ವಸೂಲಿ

28/06/2025 2:36 PM

BREAKING : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ; 13 ಸೈನಿಕರು ಬಲಿ

28/06/2025 2:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ BMTC ಶಾಕ್: 5,706 ಮಂದಿಯಿಂದ 12.64 ಲಕ್ಷ ದಂಡ ವಸೂಲಿ
KARNATAKA

ಬೆಂಗಳೂರಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ BMTC ಶಾಕ್: 5,706 ಮಂದಿಯಿಂದ 12.64 ಲಕ್ಷ ದಂಡ ವಸೂಲಿ

By kannadanewsnow0928/06/2025 2:36 PM

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಲಾಗಿದೆ. ಬರೋಬ್ಬರಿ 5,706 ಮಂದಿಯಿಂದ 12.64 ಲಕ್ಷ ದಂಡವನ್ನು ವಸೂಲಿ ಮಾಡಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ಟಿಕೇಟನ್ನು ಪಡೆಯದೆ ಅನಧಿಕೃತವಾಗಿ ಪ್ರಯಾಣ ಮಾಡುವವರನ್ನು ಮತ್ತು ಸಂಸ್ಥೆಯ  ಸಾರಿಗೆ ಆದಾಯದ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ನಗರದಾದ್ಯಂತ ಸಂಚರಿಸುವ ವಾಹನಗಳನ್ನು ನಮ್ಮ ಸಂಸ್ಥೆಯ  ತನಿಖಾ ತಂಡಗಳು ಏಪ್ರಿಲ್‌ ಹಾಗೂ ಮೇ-2025 ರ ಮಾಹೆಯಲ್ಲಿ ಒಟ್ಟು 38,116 ಟ್ರಿಪ್‌ಗಳನ್ನು ತಪಾಸಿಸಿ 5,706 ಟಿಕೇಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ, ಅವರಿಂದ ಒಟ್ಟು ರೂ. 12,64,051/- ದಂಡ ವಸೂಲಿ ಮಾಡಿ ಸಂಸ್ಥೆಯ  ನಿರ್ವಾಹಕರ ವಿರುದ್ಧ 3500 ಪ್ರಕರಣಗಳನ್ನು ದಾಖಲಿಸಿರುತ್ತಾರೆ.

ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 652 ಪುರುಷ  ಪ್ರಯಾಣಿಕರಿಂದ  ಒಟ್ಟು ರೂ. 65,200/- ಅನ್ನು ಮೋಟಾರು ವಾಹನ ಕಾಯ್ದೆ 1988ರ ಕಾಲಂ 177 ಮತ್ತು 94 ರ ಪ್ರಕಾರ ದಂಡ ವಿಧಿಸಲಾಗಿರುತ್ತದೆ.

ಒಟ್ಟಾರೆಯಾಗಿ ಏಪ್ರಿಲ್‌ ಹಾಗೂ ಮೇ-2025  ರ ಮಾಹೆಯಲ್ಲಿ 6,358 ಪ್ರಯಾಣಿಕರಿಂದ ಒಟ್ಟು ರೂ 13,29,251/-  ದಂಡವನ್ನು ವಸೂಲಿ ಮಾಡಲಾಗಿದೆ.

ಪ್ರಯಾಣಿಕರು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೇಟ್ / ದಿನದ ಪಾಸು / ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸುವುದು. ಇದರಿಂದ ಅನಗತ್ಯ ದಂಡ ಕಟ್ಟುವುದನ್ನು ತಡೆಯಬಹುದಾಗಿದೆ ಹಾಗೂ ಇಂತಹ ಪ್ರವೃತ್ತಿಯಿಂದ ಸಂಸ್ಥೆಯು ಉತ್ತಮ ಸೇವೆಯನ್ನು ಪ್ರಯಾಣಿಕರಿಗೆ ನೀಡಲು ಸಹಾಯವಾಗುತ್ತದೆ. ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕೆಂದು ಕೋರಲಾಗಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಕೇಂದ್ರ ಕಛೇರಿ: ಕೇಂದ್ರ ತನಿಖಾದಳ ಏಪ್ರಿಲ್ -2025  ಮಾಹೆಯ ತನಿಖಾ ಕಾರ್ಯ ಸಾಧನೆ ವಿವರಣಾ ಪಟ್ಟಿ

ಕ್ರಮ ಸಂಖ್ಯೆ ವಿವರ ಮಾರ್ಚ್  -2025
1 ತನಿಖೆ ಮಾಡಿದ ಒಟ್ಟು ಬಸ್‌ಗಳು 19044
2 ಪತ್ತೆಯಾದ ಪ್ರಕರಣಗಳು
ಅ)ಸಾಮಾನ್ಯ ಪ್ರಕರಣಗಳು 1682
ಆ)ಕೆಂಪು ಚುಕ್ಕೆ ಪ್ರಕರಣಗಳು 83
ಇ)ಗಂಭೀರ ಕೆಂಪುಚುಕ್ಕೆ ಪ್ರಕರಣಗಳು 13
ಈ)ವಿಶೇಷ ಪ್ರಕರಣಗಳು 02
ಉ) ಖಾಸಗಿ ಬಸ್ ಗಳ ಪ್ರಕರಣಗಳು 02
ಒಟ್ಟು 1782
3 ಟಿಕೇಟ್ ರಹಿತ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) 6,31,491/-
4 ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ  ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ  ಪುರುಷ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) 34,000/-
5 ಒಟ್ಟು ವಸೂಲಾದ ದಂಡದ ಹಣ  (ರೂ) 6,65,491/-
6 ದಂಡ ವಿಧಿಸಲಾದ  ಟಿಕೇಟ್ ರಹಿತ ಪ್ರಯಾಣಿಕರ ಸಂಖ್ಯೆ 2855
7 ದಂಡ ವಿಧಿಸಲಾದ  ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ  ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ  ಪುರುಷ  ಪ್ರಯಾಣಿಕರ ಸಂಖ್ಯೆ 340
8 ದಂಡ ವಿಧಿಸಲಾದ  ಒಟ್ಟು ಪ್ರಯಾಣಿಕರ ಸಂಖ್ಯೆ 3195

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ: ಕೇಂದ್ರ ಕಛೇರಿ: ಕೇಂದ್ರ ತನಿಖಾದಳ ಮೇ -2025  ಮಾಹೆಯ ತನಿಖಾ ಕಾರ್ಯ ಸಾಧನೆ ವಿವರಣಾ ಪಟ್ಟಿ

ಕ್ರಮ ಸಂಖ್ಯೆ ವಿವರ ಮೇ  -2025
1 ತನಿಖೆ ಮಾಡಿದ ಒಟ್ಟು ಬಸ್‌ಗಳು 19072
2 ಪತ್ತೆಯಾದ ಪ್ರಕರಣಗಳು
ಅ)ಸಾಮಾನ್ಯ ಪ್ರಕರಣಗಳು 1614
ಆ)ಕೆಂಪು ಚುಕ್ಕೆ ಪ್ರಕರಣಗಳು 79
ಇ)ಗಂಭೀರ ಕೆಂಪುಚುಕ್ಕೆ ಪ್ರಕರಣಗಳು 21
ಈ)ವಿಶೇಷ ಪ್ರಕರಣಗಳು 3
ಉ) ಖಾಸಗಿ ಬಸ್ ಗಳ ಪ್ರಕರಣಗಳು 1
ಒಟ್ಟು 1718
3 ಟಿಕೇಟ್ ರಹಿತ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) 6,32,560.00
4 ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ  ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ  ಪುರುಷ ಪ್ರಯಾಣಿಕರಿಂದ ವಸೂಲಾದ ದಂಡದ ಹಣ (ರೂ) 31,200.00
5 ಒಟ್ಟು ವಸೂಲಾದ ದಂಡದ ಹಣ  (ರೂ) 6,63,760.00
6 ದಂಡ ವಿಧಿಸಲಾದ  ಟಿಕೇಟ್ ರಹಿತ ಪ್ರಯಾಣಿಕರ ಸಂಖ್ಯೆ 2851
7 ದಂಡ ವಿಧಿಸಲಾದ  ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ  ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ  ಪುರುಷ  ಪ್ರಯಾಣಿಕರ ಸಂಖ್ಯೆ 312
8 ದಂಡ ವಿಧಿಸಲಾದ  ಒಟ್ಟು ಪ್ರಯಾಣಿಕರ ಸಂಖ್ಯೆ 3163

BREAKING : ಸೆ.22ಕ್ಕೆ ಮೈಸೂರು ದಸರಾಗೆ ಚಾಲನೆ, ಅ.2 ರಂದು ಜಂಬೂ ಸವಾರಿ : ಸಿಎಂ ಸಿದ್ದರಾಮಯ್ಯ ಹೇಳಿಕೆ

ಪಾಕಿಸ್ತಾನದಲ್ಲಿ ಭೀಕರ ಪ್ರವಾಹ: ಹಲವರು ಸಾವು, ಪ್ರವಾಹದಲ್ಲಿ ಕೊಚ್ಚಿಹೋದ ಕುಟುಂಬ

 

Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ CM ಬದಲಾವಣೆ ಇಲ್ಲ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ : ಯತೀಂದ್ರ ಸಿದ್ದರಾಮಯ್ಯ

28/06/2025 2:08 PM1 Min Read

BREAKING : ಸೆ.22ಕ್ಕೆ ಮೈಸೂರು ದಸರಾಗೆ ಚಾಲನೆ, ಅ.2 ರಂದು ಜಂಬೂ ಸವಾರಿ : ಸಿಎಂ ಸಿದ್ದರಾಮಯ್ಯ ಹೇಳಿಕೆ

28/06/2025 1:50 PM1 Min Read

BREAKING : ಈ ಬಾರಿ 11 ದಿನಗಳ ಕಾಲ ದಸರಾ ಹಬ್ಬ ಆಚರಣೆಗೆ ನಿರ್ಧಾರ : CM ಸಿದ್ದರಾಮಯ್ಯ ಹೇಳಿಕೆ

28/06/2025 1:37 PM1 Min Read
Recent News

ಹೈಡ್ರೋಜನ್ ವಾಹನಗಳಿಗೆ ‘ದ್ವಿ-ಬಣ್ಣದ ನಂಬರ್ ಪ್ಲೇಟ್’ ; ಕೇಂದ್ರ ಸರ್ಕಾರ ಮಹತ್ವದ ಪ್ರಸ್ತಾಪ

28/06/2025 2:46 PM

ಬೆಂಗಳೂರಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ BMTC ಶಾಕ್: 5,706 ಮಂದಿಯಿಂದ 12.64 ಲಕ್ಷ ದಂಡ ವಸೂಲಿ

28/06/2025 2:36 PM

BREAKING : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ; 13 ಸೈನಿಕರು ಬಲಿ

28/06/2025 2:32 PM

BREAKING : ರಾಜ್ಯದಲ್ಲಿ CM ಬದಲಾವಣೆ ಇಲ್ಲ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ : ಯತೀಂದ್ರ ಸಿದ್ದರಾಮಯ್ಯ

28/06/2025 2:08 PM
State News
KARNATAKA

ಬೆಂಗಳೂರಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದವರಿಗೆ BMTC ಶಾಕ್: 5,706 ಮಂದಿಯಿಂದ 12.64 ಲಕ್ಷ ದಂಡ ವಸೂಲಿ

By kannadanewsnow0928/06/2025 2:36 PM KARNATAKA 2 Mins Read

ಬೆಂಗಳೂರು: ನಗರದಲ್ಲಿ ಬಿಎಂಟಿಸಿ ಬಸ್ಸಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದಂತ ಪ್ರಯಾಣಿಕರಿಗೆ ಬಿಗ್ ಶಾಕ್ ನೀಡಲಾಗಿದೆ. ಬರೋಬ್ಬರಿ 5,706 ಮಂದಿಯಿಂದ 12.64…

BREAKING : ರಾಜ್ಯದಲ್ಲಿ CM ಬದಲಾವಣೆ ಇಲ್ಲ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ : ಯತೀಂದ್ರ ಸಿದ್ದರಾಮಯ್ಯ

28/06/2025 2:08 PM

BREAKING : ಸೆ.22ಕ್ಕೆ ಮೈಸೂರು ದಸರಾಗೆ ಚಾಲನೆ, ಅ.2 ರಂದು ಜಂಬೂ ಸವಾರಿ : ಸಿಎಂ ಸಿದ್ದರಾಮಯ್ಯ ಹೇಳಿಕೆ

28/06/2025 1:50 PM

BREAKING : ಈ ಬಾರಿ 11 ದಿನಗಳ ಕಾಲ ದಸರಾ ಹಬ್ಬ ಆಚರಣೆಗೆ ನಿರ್ಧಾರ : CM ಸಿದ್ದರಾಮಯ್ಯ ಹೇಳಿಕೆ

28/06/2025 1:37 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.