ಬೆಂಗಳೂರು : ಕಳೆದ ಕೆಲವು ತಿಂಗಳ ಹಿಂದೆ ಬೀದರ್, ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿದ್ದವು. ಇದೀಗ ಬೆಂಗಳೂರಿನಲ್ಲಿ ಹಾಡಹಗಲೇ ಎರಡು ಕೋಟಿ ರೂಪಾಯಿ ದರೋಡೆ ಮಾಡಿರುವ ಘಟನೆ ಕಳೆದ ಜೂನ್ 25ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ.
ಹೌದು ಜೂನ್ 25ರಂದು ಬೆಂಗಳೂರಿನ ವಿದ್ಯಾರಣ್ಯಪುರಂನ ಎಂ ಎಸ್ ಪಾಳ್ಯದಲ್ಲಿ ಈ ಒಂದು ಘಟನೆ ನಡೆದಿದೆ. USDT ಗೆ ಹಣ ಕನ್ವರ್ಟ್ ಮಾಡಿಸಿಕೊಳ್ಳಲು ಬಂದಾಗ ಖದೀಮರು ಎರಡು ಕೋಟಿ ರೂಪಾಯಿ ದೋಚಿದ್ದಾರೆ. ಕೆಂಗೇರಿ ನಿವಾಸಿ ಶ್ರೀಹರ್ಷ ಎರಡು ಕೋಟಿ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದು, ಶ್ರೀಹರ್ಷ ಹೊಸ ಕಂಪನಿಗೆ ಜಪಾನ್ ನಿಂದ ಯಂತ್ರ ಬೇಕಾಗಿರುತ್ತದೆ. ಹೀಗಾಗಿ ಯುಎಸ್ಡಿಟಿಗೆ ಹಣ ಕನ್ವರ್ಟ್ ಮಾಡಿಸಲು ಶ್ರೀ ಹರ್ಷ ಮುಂದಾಗಿದ್ದಾರೆ.
ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ ನ್ ಎಂಬಾತ ವ್ಯಕ್ತಿ ಪರಿಚಯ ಆಗಿದ್ದಾನೆ. ಜೂನ್ 25 ಮಧ್ಯಾಹ್ನ 3 ಗಂಟೆಗೆ ಶ್ರೀಹರ್ಷನನ್ನು ಬೆಂಜಮಿನ್ ಭೇಟಿ ಆಗಿದ್ದ. ಎ.ಕೆ ಎಂಟರ್ಪ್ರೈಸ್ ಶಾಪ್ ನಲ್ಲಿ ಶ್ರೀಹರ್ಷ ಮತ್ತು ಬೆಂಜಮೀನ್ ಭೇಟಿಯಾಗಿದ್ದರು. ಬಳಿಕ ಬೆಂಚ ಮೀನ್ ಮತ್ತು ಇಬ್ಬರು ಸ್ನೇಹಿತರು ಹಣ ಎಣಿಕೆ ಮಾಡುತ್ತಿದ್ದರು. ಈ ವೇಳೆ 6-7 ಅಪರಿಚಿತರ ಗುಂಪು ಎಕಾಏಕಿ ಶಾಪ್ ಗೆ ನುಗ್ಗಿದೆ. ಚಾಕುನಿಂದ ಹಿಡಿದು ಶ್ರೀ ಹರ್ಷ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀಹರ್ಷ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಎರಡು ಕೋಟಿ ಹಣ ದರೋಡೆ ಮಾಡಿದ್ದಾರೆ.
ಎರಡು ಕೋಟಿ ನಗದು ಹಣವನ್ನು ಚೀಲದಲ್ಲಿ ತುಂಬಿಕೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಶಾಪ್ ನಲ್ಲಿದ್ದ ಶ್ರೀಹರ್ಷ ಮತ್ತು ಬೆಂಜಮೀನ್ ಅಲ್ಲದೆ ಅವರ ಸ್ನೇಹಿತರನ್ನು ಕೂಡಿಹಾಕಿ ಪರಾರಿಯಾಗಿದ್ದಾರೆ. ಶಾಪ್ ನಿಂದ ಹೊರ ಬಂದಾಗ ಬೆಂಜಮೀನ್ ಮತ್ತು ಸ್ನೇಹಿತರು ಕೂಡ ಸ್ಥಳದಿಂದ ಪರಾರಿ ಆಗಿದ್ದಾರೆ. ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಶ್ರೀ ಹರ್ಷ ದೂರು ನೀಡಿದ್ದಾರೆ. ದರೋಡೆ ಕುರಿತಂತೆ ಬೆಂಜಮೀನ್ ಮತ್ತು ಸ್ನೇಹಿತರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.