ತುಮಕೂರು: ಏರುಗತಿಯಲ್ಲಿ ಸಾಗುತ್ತಿರುವ ಕೊಬ್ಬರಿ ದರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಕೊಬ್ಬರಿ ಬರೋಬ್ಬರಿ 30,000 ರೂಪಾಯಿಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಗುರುವಾರ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಬೆಲೆ ಗರಿಷ್ಠ 29,106ಕ್ಕೆ ಟೆಂಡರ್ ಆಗಿದ್ದು, ಸಂಜೆಯ ವೇಳೆಗೆ 30,000 ರೂ. ಗಡಿ ದಾಟಿದೆ. ಕಳೆದ ಸೋಮವಾರ ನಡೆದ ಹರಾಜಿನಿಂದ ಕೇವಲ ನಾಲ್ಕೇ ದಿನಗಳಲ್ಲಿ ಬೆಲೆ 3 ಸಾವಿರದಷ್ಟು ಜಿಗಿದಿದೆ.
ಮುಂಬರುವ ಶ್ರಾವಣ ಮಾಸದಲ್ಲಿ ಸಾಲು, ಸಾಲು ಹಬ್ಬ, ಶುಭ ಸಮಾರಂಭಗಳು, ಕಾರ್ಯಕ್ರಮಗಳು ಪ್ರಾರಂಭವಾಗುವುದರಿಂದ ಇಲ್ಲಿನ ಕೊಬ್ಬರಿಗೆ ಮತ್ತಷ್ಟು ಬೇಡಿಕೆ ಬರುವ ನಿರೀಕ್ಷೆಯಿದೆ.