ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಟ್ರ್ಯಾಕ್ಟರ್ ಚಕ್ರದ ಅಡಿ ಸಿಲುಕಿ ಇಬ್ಬರು ನರಳಾಟ ನಡೆಸಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ಬಮ್ಮೇಗಟ್ಟಿ ಕ್ರಾಸ್ ನಲ್ಲಿ ಒಂದು ಘಟನೆ ನಡೆದಿದ್ದು, ಟ್ರಾಕ್ಟರ್ ಮತ್ತು ಗೂಡ್ಸ್ ಚಾಲಕನ ನಡುವೆ ಜಗಳ ಆಗಿತ್ತು.
ಅಪಘಾತದ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಗೂಡ್ಸ್ ಚಾಲಕ ಟ್ರ್ಯಾಕ್ಟರ್ ಏರಿ ವಾಗ್ವಾದ ನಡೆಸುತ್ತಿದ್ದ. ಗೂಡ್ಸ್ ಚಾಲಕ ಟ್ರಾಕ್ಟರ್ ಏರಿದಾಗಲೇ ಟ್ರಾಕ್ಟರ್ ಚಾಲಕ ಕೂಡಲೇ ಟ್ರಾಕ್ಟರ್ ಅನ್ನು ಮುಂದೆ ತೆಗೆದುಕೊಂಡು ಹೋಗಿದ್ದಾನೆ. ಈ ವೇಳೆ ಟ್ರಾಕ್ಟರ್ ಕೆಳಗೆ ಇಬ್ಬರು ಸಿಲುಕಿ ನಳಾಡಿದ್ದಾರೆ. ಟ್ಯಾಕ್ಟರ್ ಹಿಂಬದಿ ಚಕ್ರಕ್ಕೆ ಇಬ್ಬರು ಸಿಲುಕಿ ನರಳಾಡಿದ್ದಾರೆ. ತಕ್ಷಣ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.