ಬೆಂಗಳೂರು : ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸ್ಕೂಲ್ ಬಸ್ ಭೀಕರವಾಗಿ ಅಪಘಾತಕ್ಕೆ ಈಡಾಗಿದೆ. ಓವರ್ ಸ್ಪೀಡ್ ನಲ್ಲಿ ಚಾಲಕ ಸ್ಕೂಲ್ ಬಸ್ ಚಲಾಯಿಸಿದ್ದು, ನಿಯಂತ್ರಣ ಕಳೆದುಕೊಂಡ ಬಸ್ ಹೋಟೆಲ್ ಗೆ ನುಗ್ಗಿರುವ ಘಟನೆ ಮಾದನಾಯಕನಹಳ್ಳಿ ಲಕ್ಷ್ಮಿಪುರ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.
ಹೌದು ಇಂದು ಮಕ್ಕಳನ್ನು ಕರೆದುಕೊಂಡು ಚಾಲಕ ಶಾಲಾ ಬಸ್ ಓವರ್ ಸ್ಪೀಡ್ ಆಗಿ ಚಲಾಯಿಸುತ್ತಿದ್ದ ಈ ವೇಳೆ ನಿಯಂತ್ರಣ ಕಳೆದುಕೊಂಡು ಎದುರುಗಡೆ ಇದ್ದ ಐಷರ್ ವಾಹನಕ್ಕೆ ಶಾಲಾ ವಾಹನ ಡಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿ ಬಸ್ ಹೋಟೆಲ್ ಗೆ ನುಗ್ಗಿದೆ. ಇವಳೆ ಬಸ್ ನಲ್ಲಿ ಇದ್ದ ಹಲೋ ಮಕ್ಕಳಿಗೆ ಗಂಭೀರವಾದ ಗಾಯಗಳಾಗಿದ್ದು, ತಕ್ಷಣ ಬಸ್ನಲ್ಲಿದ್ದ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.