Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೊಟ್ಟೆ ಬೇಯಿಸುವಾಗ ನಿಂಬೆಹಣ್ಣಿನ ತುಂಡು ಹಾಕಿದ್ದೀರಾ? ಈ ಕಿಚನ್ ಟಿಪ್ಸ್ ನಿಮ್ಮ ಕೆಲಸವನ್ನು ಸುಲಭವಾಗಿಸುತ್ತೆ!

Gold News: ದೇಶಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಅಚ್ಚರಿಯ ಕರೆ ನೀಡಿದ್ದೇಕೆ? ಇಲ್ಲಿದೆ ಕಾರಣ!

BREAKING: ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಉದಯನಿಧಿ ಸ್ಟಾಲಿನ್ ಅವಿರೋಧ ಆಯ್ಕೆ | Udayanidhi Stalin

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 1 -10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘ಶೂ -ಸಾಕ್ಸ್’ ವಿತರಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆ
KARNATAKA

ರಾಜ್ಯದ 1 -10 ನೇ ತರಗತಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘ಶೂ -ಸಾಕ್ಸ್’ ವಿತರಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆ

By kannadanewsnow57

ಬೆಂಗಳೂರು : 2025-26ನೇ ಸಾಲಿಗೆ ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಒದಗಿಸಲಾಗುತ್ತಿರುವ ಶೂ ಮತ್ತು ಸಾಕ್ಸ್ ಖರೀದಿ ಮಾಡುವ ಬಗ್ಗೆ  ಹಣ ಬಿಡುಗಡೆ ಮಾಡಲಾಗಿದೆ.

2025-26ನೇ ಶೈಕ್ಷಣಿಕ ಸಾಲಿಗೆ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ವತಿಯಿಂದ ನಡೆಸಲ್ಪಡುತ್ತಿರುವ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಂದಾಜು 40.68 ಲಕ್ಷ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಒಟ್ಟು ರೂ.11188.00 ಲಕ್ಷಗಳ ವೆಚ್ಚದಲ್ಲಿ ಉಚಿತವಾಗಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು ಅಥವಾ ಸ್ಯಾಂಡಲ್‌ಗಳನ್ನು ವಿತರಿಸಬೇಕಾಗಿದೆ.

ವಿದ್ಯಾರ್ಥಿಗಳ ಸ್ಯಾಂಡಲ್‌ಗಳ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಸ್ಯಾಂಡಲ್‌ಗಳನ್ನು ಸ್ಥಳೀಯವಾಗಿ ಖರೀGood news for all government school children in the state: Government releases funds for distribution of free pairs of shoes and socksದಿಸಿ, ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ)ಗೆ ವಹಿಸುವುದು.

40.68 ಲಕ್ಷ ವಿದ್ಯಾರ್ಥಿಗಳಿಗೆ ಶೂ. ಸಾಕ್ಸ್ ಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಉಚಿತವಾಗಿ ಒಂದು ಜೊತೆ ಶೂ ಮತ್ತು ಸಾಕ್ಸ್ ಗಳನ್ನು ಖರೀದಿಸಲು ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಖರೀದಿಗೆ ಎಸ್.ಡಿ.ಎಂ.ಸಿ.ಗೆ ಅಧಿಕಾರ ನೀಡಲಾಗಿದೆ. ಶಿಕ್ಷಣ ಇಲಾಖೆಯಿಂದ ಈ ಕುರಿತಾಗಿ ಮಾರ್ಗಸೂಚಿ ಪ್ರಕಟಿಸಲಾಗಿದೆ.

ಒಂದು ಜೊತೆ ಕಪ್ಪು ಬಣ್ಣದ ಶೂ ಗಳನ್ನು ಹಾಗೂ ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ಗಳನ್ನು ಖರೀದಿಸಿ ವಿತರಿಸುವುದು. ಸ್ಥಳೀಯ ವಾತಾವರಣಕ್ಕೆ ಅನುಗುಣವಾಗಿ ಶೂ ಮತ್ತು ಸಾಕ್ಸ್ ಗಳ ಬದಲಾಗಿ ಕಪ್ಪು/ಕಂದು ಬಣ್ಣದ ಸ್ಯಾಂಡಲ್‌ಗಳನ್ನು ಖರೀದಿಸಿ ವಿತರಿಸುವುದು.

ಎಲ್ಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ಗಳನ್ನು ಖರೀದಿಸಿ ವಿತರಿಸುವ ಪ್ರಕ್ರಿಯೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ)ಯು ಪಾರದರ್ಶಕತೆ ಕಾಪಾಡುವುದು.

ಶೂ ಮತ್ತು ಸಾಕ್ಸ್ಗಳ ಖರೀದಿ ಪ್ರಕ್ರಿಯೆ ಪ್ರಾರಂಭಿಸುವ ಮುನ್ನ ಈ ಆದೇಶ ಹೊರಡಿಸಿದ ಒಂದು ವಾರದೊಳಗೆ ಎಸ್.ಡಿ.ಎಂ.ಸಿ.ಯು ಕೆಳಕಂಡಂತೆ ಖರೀದಿ ಸಮಿತಿಯನ್ನು ರಚಿಸತಕ್ಕದ್ದು.

ಪ್ರತಿಯೊಂದು ತಾಲ್ಲೂಕಿನಲ್ಲಿ ಕನಿಷ್ಠ ಶೇ.5ರಷ್ಟು ಶಾಲೆಗಳಲ್ಲಿನ ಶೂ ಮತ್ತು ಸಾಕ್ಸ್ ಗುಣಮಟ್ಟವನ್ನು ಯಾದೃಚ್ಚಿಕವಾಗಿ ಪರೀಕ್ಷಿಸಲು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರು ಒಂದು ಸಮಿತಿಯನ್ನು ರಚಿಸಲು ಕ್ರಮಕೈಗೊಳ್ಳುವುದು.

ಹಿಂದಿನ ಸಾಲುಗಳಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಬ್ರಾಂಡೆಡ್ ಶೂ ಮತ್ತು ಸಾಕ್ಸ್ ಸರಬರಾಜಾಗಿರುವ ಬಗ್ಗೆ ಸರ್ಕಾರದ ಹಂತದಲ್ಲಿ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ, ಪ್ರಸ್ತುತ ಸಾಲಿನಲ್ಲಿ ಜಾಗರೂಕತೆಯಿಂದ ಪರಿಶೀಲಿಸಿ, ರಾಷ್ಟ್ರಮಟ್ಟದ ಹೆಸರಾಂತ ಕಂಪನಿಗಳ/ ಪ್ರತಿಷ್ಠಿತ ಬ್ರಾಂಡ್ ಗಳ ಅಧಿಕೃತ ಮಾರಾಟಗಾರರಿಂದ ಶೂ ಮತ್ತು ಸಾಕ್ಸ್ ಅಥವಾ ಸ್ಯಾಂಡಲ್‌ಗಳನ್ನು ಖರೀದಿಸತಕ್ಕದ್ದು. ಅನಧಿಕೃತ ಮಾರಾಟಗಾರರಿಂದ ನಕಲಿ ಬ್ರಾಂಡ್/ಕಳಪೆ ಗುಣಮಟ್ಟದ ಶೂ ಮತ್ತು ಸಾಕ್ಸ್ ಅಥವಾ ಸ್ಯಾಂಡಲ್‌ಗಳನ್ನು ಖರೀದಿಸಿರುವ ಬಗ್ಗೆ ದೂರುಗಳು ವರದಿಯಾದಲ್ಲಿ ತಪಾಸಣೆಗೆ ಒಳಪಡಿಸಿ ಸಂಬಂಧಿಸಿದ ಶಾಲಾ ಮುಖ್ಯೋಪಾಧ್ಯಾಯರು/ ಕ್ಷೇತ್ರ ಶಿಕ್ಷಣಾಧಿಕಾರಿಗಳು/ ಉಪನಿರ್ದೇಶಕರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಶೂ ಮತ್ತು ಸಾಕ್ಸ್‌ಗಳನ್ನು ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಎಸ್.ಡಿ.ಎಂ.ಸಿ ಅನುಮೋದಿತ ಸಮಿತಿಯು ಸ್ಥಳೀಯವಾಗಿ ಖರೀದಿಸುವುದು. ವಲಯ/ಕ್ಲಸ್ಟರ್ ಅಥವಾ ಜಿಲ್ಲಾ ಮಟ್ಟದಲ್ಲಿ ಕೇಂದ್ರೀಕೃತ ವ್ಯವಸ್ಥೆಯಡಿ ಖರೀದಿ ಪ್ರಕ್ರಿಯೆ ನಡೆಸುವುದನ್ನು ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಕೇಂದ್ರೀಕೃತ ಖರೀದಿ ಪ್ರಕ್ರಿಯೆ ನಡೆಸತಕ್ಕದ್ದಲ್ಲ.

ಶೂ ಮತ್ತು ಸಾಕ್ಸ್ ಅಥವಾ ಸ್ಯಾಂಡಲ್ ಖರೀದಿಸುವ ಶಾಲೆಗಳು/ಶಾಲಾ ಖರೀದಿ ಸಮಿತಿಯು ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಹಾಗೂ ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಚಾಚೂ ತಪ್ಪದೇ ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

2025-26ನೇ ಸಾಲಿನಲ್ಲಿ ಈ ಕೆಳಕಂಡ ದರದಲ್ಲಿ ಎಸ್.ಡಿ.ಎಂ.ಸಿಗಳು ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಅಥವಾ ಸ್ಯಾಂಡಲ್‌ಗಳನ್ನು ಖರೀದಿಸುವುದು. ಅಗತ್ಯವಾದ ಅನುದಾನಗಳನ್ನು ಎಸ್.ಡಿ.ಎಂ.ಸಿ.ಗಳ ಜಂಟಿ ಬ್ಯಾಂಕ್ ಖಾತೆಗೆ ನೇರವಾಗಿ ರಾಜ್ಯ ಖಜಾನೆಯ ತಂತ್ರಾಂಶದ ನೇರ ನಗದು ವರ್ಗಾವಣೆ ಪ್ರಕಾರ ಬಿಡುಗಡೆ ಮಾಡಲಾಗುವುದು.

May be an image of text
May be an image of text
May be an image of text
May be an image of text
Good news for all government school children in the state: Government releases funds for distribution of free pairs of shoes and socks
Share. Facebook Twitter LinkedIn WhatsApp Email

Related Posts

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

2 Mins Read

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 74 DYSP, 293 ಪಿಐ ವರ್ಗಾವಣೆ ಮಾಡಿ ಆದೇಶ

4 Mins Read

ಗಿಗ್ ಕಾರ್ಮಿಕರ ಬಾಳಿಗೆ ಆಸರೆಯಾದ ಕಾಂಗ್ರೆಸ್ ಸರ್ಕಾರ: ಚುನಾವಣೆ ಮುನ್ನ ನೀಡಿದ್ದ ಭರವಸೆ ಈಡೇರಿಕೆ

2 Mins Read
Recent News

ಮೊಟ್ಟೆ ಬೇಯಿಸುವಾಗ ನಿಂಬೆಹಣ್ಣಿನ ತುಂಡು ಹಾಕಿದ್ದೀರಾ? ಈ ಕಿಚನ್ ಟಿಪ್ಸ್ ನಿಮ್ಮ ಕೆಲಸವನ್ನು ಸುಲಭವಾಗಿಸುತ್ತೆ!

Gold News: ದೇಶಕ್ಕಾಗಿ ಒಂದು ವರ್ಷ ಚಿನ್ನ ಖರೀದಿಸಬೇಡಿ: ಪ್ರಧಾನಿ ಮೋದಿ ಅಚ್ಚರಿಯ ಕರೆ ನೀಡಿದ್ದೇಕೆ? ಇಲ್ಲಿದೆ ಕಾರಣ!

BREAKING: ಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಉದಯನಿಧಿ ಸ್ಟಾಲಿನ್ ಅವಿರೋಧ ಆಯ್ಕೆ | Udayanidhi Stalin

SHOCKING: ತಾಯಂದಿರ ದಿನವೇ ಹೆತ್ತಮ್ಮನನ್ನು ಗುಂಡಿಕ್ಕಿ ಕೊಂದ ಮಗ

State News
KARNATAKA

ಸಾಗರದ ‘ನಗರಸಭೆ ಜಾಗ’ ಅಕ್ರಮ ಒತ್ತುವರಿ; ಬೆಲೆಬಾಳುವ ಆಸ್ತಿ ರಕ್ಷಣೆಯಲ್ಲಿ ‘ನಗರಾಡಳಿತ’ ತೀವ್ರ ನಿರ್ಲಕ್ಷ್ಯ

By ವಸಂತ್‌ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಸಾಗರ ನಗರದ ಹೃದಯಭಾಗದಲ್ಲಿರುವ ನಗರಸಭೆಯ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗವೊಂದು ಅಕ್ರಮ ಒತ್ತುವರಿಯಾಗುತ್ತಿದ್ದರೂ, ನಗರಸಭೆ ಆಡಳಿತ ಮಂಡಳಿ ಮಾತ್ರ ಕಣ್ಣಿದ್ದೂ…

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: 74 DYSP, 293 ಪಿಐ ವರ್ಗಾವಣೆ ಮಾಡಿ ಆದೇಶ

ಗಿಗ್ ಕಾರ್ಮಿಕರ ಬಾಳಿಗೆ ಆಸರೆಯಾದ ಕಾಂಗ್ರೆಸ್ ಸರ್ಕಾರ: ಚುನಾವಣೆ ಮುನ್ನ ನೀಡಿದ್ದ ಭರವಸೆ ಈಡೇರಿಕೆ

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.