ಬೆಂಗಳೂರು: ರಾಜ್ಯದಲ್ಲೊಂದು ಮನಕಲಕುವ ಘಟನೆ ಎನ್ನುವಂತೆ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಂಗಳೂರಿನ ಜೆಪಿ ನಗರದ 8ನೇ ಹಂತದಲ್ಲಿ ಕಮಲಮ್ಮ, ರಾಮಕೃಷ್ಣಪ್ಪ ಎನ್ನುವಂತ ವೃದ್ಧಾಶ್ರಮವಿದೆ. ಈ ವೃದ್ಧಾಶ್ರಮಕ್ಕೆ ಕೃಷ್ಣಮೂರ್ತಿ(81) ಹಾಗೂ ರಾಧಾ(74) ಎಂಬುವರನ್ನು ಮಕ್ಕಳು ಸೇರಿಸಿದ್ದಾರೆ. ಇದರಿಂದ ಮನನೊಂದಿರುವಂತ ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೊಸೆ ಮಾಡಿದ ಅಡುಗೆ ಇಷ್ಟವಿಲ್ಲ, ಹೊಂದಾಣಿಕೆಯಾಗದ ಕಾರಣ ಬೇರೆ ಮನೆ ಮಾಡಿಕೊಡುವಂತೆ ಮಗನಿಗೆ ವೃದ್ಧ ದಂಪತಿಗಳು ಕೇಳಿದ್ದರು. ಆದರೇ ಇದನ್ನು ಕೇಳದಂತ ಪುತ್ರ 2021ರಲ್ಲಿ ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದರು. ಆ ಬಳಿಕ 2023ರಲ್ಲಿ ತಂದೆ ತಾಯಿಯನ್ನು ಮನೆಗೆ ವಾಪಾಸ್ ಕರೆದುಕೊಂಡು ಬಂದಿದ್ದರು. ಆದರೇ ವೃದ್ಧಾಶ್ರಮದಿಂದ ಬಂದ ನಂತ್ರ ಮನೆಯಲ್ಲಿ ಹೊಂದಾಣಿಕೆ ಆಗಿರಲಿಲ್ಲ.
ಈ ಕಾರಣದಿಂದಾಗಿ ಮತ್ತೆ ಪುತ್ರ ಬೆಂಗಳೂರಿನ ಜೆಪಿ ನಗರದಲ್ಲಿರುವಂತ 8ನೇ ಹಂತದಲ್ಲಿನ ವೃದ್ಧಾಶ್ರಮಕ್ಕೆ ತಂದೆ ಕೃಷ್ಣಮೂರ್ತಿ, ತಾಯಿ ರಾಧಾ ಸೇರಿಸಿದ್ದರು. ಇದರಿಂದ ಮನನೊಂದಂತ ವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಿಸಿಸಿಎಫ್ ನೇತೃತ್ವದಲ್ಲಿ ಪಶ್ಚಿಮಘಟ್ಟ ಧಾರಣಾಸಾಮರ್ಥ್ಯ ಅಧ್ಯಯನ: ಸಚಿವ ಈಶ್ವರ ಖಂಡ್ರೆ